ಬೆಂಗಳೂರು: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (World Test Championship) 2023-25 ಋತುವಿನಲ್ಲಿ ಭಾರತದ ತಂಡಕ್ಕೆ (Team India) ಅದೃಷ್ಟ ಕೈಕೊಡುತ್ತಿದೆ. ಏಕೆಂದರೆ ಹೈದರಾಬಾದ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಘಾತಕಾರಿ ಸೋಲಿನ ನಂತರ ರೋಹಿತ್ ಶರ್ಮಾ ಪಡೆ ಒಂಬತ್ತು ತಂಡಗಳ ಶ್ರೇಯಾಂಕದಲ್ಲಿ ಬಾಂಗ್ಲಾದೇಶಕ್ಕಿಂತ ಕೆಳಕ್ಕೆ ಇಳಿದಿದೆ. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ.
ನಿರಾಶಾದಾಯಕ ತಿರುವಿನ ನಂತರ ರೋಹಿತ್ ಬಳಗವು ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಅನ್ನು ಕಳೆದುಕೊಂಡಿತ್ತು. ಹೀಗಾಗಿ ಈ ಋತುವಿನಲ್ಲಿ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಐದನೇ ಸ್ಥಾನಕ್ಕೆ ಇಳಿದಿದೆ.
ಕೆರಿಬಿಯನ್ ಪ್ರವಾಸದ ಟೆಸ್ಟ್ನಲ್ಲಿ ಡ್ರಾದೊಂದಿಗೆ ತೃಪ್ತಿಪಡಬೇಕಾಗಿ ಬಂದ ಮತ್ತು ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಸೆಂಚೂರಿಯನ್ನಲ್ಲಿ ಸೋಲನ್ನು ಅನುಭವಿಸಿದ ಭಾರತವು ನಂತರದ ಪಂದ್ಯವನ್ನು ಗೆದ್ದುಕೊಂಡಿತ್ತು. ಹೀಗಾಗಿ ಭಾರತ 43.33 ಅಂಕಗಳನ್ನು ಹೊಂದಿದೆ.
5ನೇ ಸ್ಥಾನಕ್ಕೆ ಕುಸಿದ ಭಾರತ
ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ ಡಿಸೆಂಬರ್ನಿಂದ ಟೆಸ್ಟ್ ಅಖಾಡದಲ್ಲಿ ಸಕ್ರಿಯವಾಗಿಲ್ಲದಿದ್ದರೂ ಬಾಂಗ್ಲಾದೇಶವು ಭಾರತವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ತಮ್ಮ ಮೊದ ಸರಣಿಯನ್ನು 1-1 ಅಂತರದಿಂದ ಡ್ರಾಗೊಳಿಸಿದ ಬಾಂಗ್ಲಾದ 50% ಗೆಲುವಿನ ಅಂಕಗಳನ್ನು ಹೊಂದಿದೆ.
ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಇವೆರಡೂ ಎರಡು ಸರಣಿಗಳಲ್ಲಿ 1-1 ಸಮಬಲ ಸಾಧಿಸಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆಡಿರುವ 10 ಪಂದ್ಯಗಳಲ್ಲಿ 6 ಗೆಲುವು ಹಾಗೂ 3 ಸೋಲಿನ ಬಳಿಕ ಶೇ.55ರಷ್ಟು ಅಂಕಗಳೊಂದಿಗೆ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ.
ಭಾರತಕ್ಕೆ ನೆಮ್ಮದಿಯ ವಿಚಾರ ಎಂದರೆ ಪಾಕಿಸ್ತಾನಕ್ಕಿಂತ ಭಾರತ ಮೇಲೆ ಇರುವುದು. ಆಸ್ಟ್ರೇಲಿಯಾದಲ್ಲಿ 3-0 ವೈಟ್ವಾಶ್ ಆಗಿರುವ ಪಾಕಿಸ್ತಾನವು ಭಾರತದಿಂದ ಕೆಳಗಿದೆ.
ಸರಣಿಯ ಆರು ಪಂದ್ಯಗಳಲ್ಲಿ ಮೂರನೇ ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಏಳನೇ ಸ್ಥಾನ ಪಡೆದುಕೊಂಡಿದೆ. ಈ ತಂಡ ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ಐತಿಹಾಸಿಕ ವಿಜಯವನ್ನು ದಾಖಲಿಸಿದೆ. ಪ್ರಸ್ತುತ ಆವೃತ್ತಿಯ ಟೆಸ್ಟ್ ಚಾಂಪಿಯನ್ಷಿಪ್ನ ನಾಲ್ಕು ಪಂದ್ಯಗಳಲ್ಲಿ ಮೊದಲ ಗೆಲುವನ್ನು ಸಾಧಿಸಿದೆ ಈ ತಂಡ. ಶ್ರೀಲಂಕಾ ಒಂದು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.
ಎರಡನೇ ಪಂದ್ಯಕ್ಕೆ ಜಡೇಜಾ, ರಾಹುಲ್ ಔಟ್; ಇನ್ನಿಬ್ಬರಿಗೆ ಅವಕಾಶ
ಬೆಂಗಳೂರು: ಹೈದರಾಬಾದ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ (Ind vs Eng) ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದ ಭಾರತಕ್ಕೆ ಡಬಲ್ ಹೊಡೆತ ಬಿದ್ದಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಫೆಬ್ರವರಿ 2ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ನಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದ ನಾಲ್ಕನೇ ದಿನದಂದು ಜಡೇಜಾ ಬ್ಯಾಟಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ತಂಡದ ಮ್ಯಾನೇಜ್ಮೆಂಟ್ ಸ್ಕ್ಯಾನ್ಗಾಗಿ ಕಾಯುತ್ತಿದೆ ಎಂದು ಹಿಂದೆ ವರದಿಯಾಗಿತ್ತು. ಇದೀಗ ವರದಿ ಬಂದಿತ್ತು. ಈಗ ಅವರನ್ನು ಆಟದಿಂದ ಹೊರಗಿಟ್ಟಿದೆ. ಏತನ್ಮಧ್ಯೆ, ರಾಹುಲ್ ಬಲ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲುತ್ತಿದ್ದಾರೆ ಮತ್ತು ಆಟದಿಂದ ಹೊರಗುಳಿಯಲಿದ್ದಾರೆ.
ಇವರಿಬ್ಬರು ಹೊರಗುಳಿದ ನಂತರ, ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಎರಡನೇ ಟೆಸ್ಟ್ ತಂಡಕ್ಕೆ ಸೇರಿಸಿದೆ.
ಎರಡನೇ ಪಂದ್ಯಕ್ಕೆ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.