ಭುವನೇಶ್ವರ: ಭಾರತದ ರಕ್ಷಣಾ ಕ್ಷೇತ್ರಕ್ಕೆ ಬಲ ನೀಡುವ, ಜಲಾಂತರ್ಗಾಮಿ ನೌಕೆಗಳನ್ನು ನಿಗ್ರಹಿಸುವ (Anti-Submarine Missile System) ಸಾಮರ್ಥ್ಯದ ಸೂಪರ್‌ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪೆಡೊ (SMART Missile) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ (ಮೇ 1) ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಯಿತು. ಇದು ಭಾರತದ ನೌಕಾಪಡೆಯ ಬಲವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
DRDO today successfully flight tested Supersonic Missile Assisted Release of Torpedo( SMART) from Dr APJ Abdul Kalam Island off the coast of Odisha.https://t.co/sbrcms4Upn@DefenceMinIndia @SpokespersonMoD pic.twitter.com/xAVBoQ5gF5
— DRDO (@DRDO_India) May 1, 2024
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿ ಸ್ಮಾರ್ಟ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಸಾಗರ ಪ್ರದೇಶದಲ್ಲಿ ನೌಕಾಪಡೆಯು ವೈರಿಗಳ ಮೇಲೆ ಇನ್ನಷ್ಟು ನಿಗಾ ಇರಿಸಲು, ಕ್ಷಿಪ್ರವಾಗಿ ಕಾರ್ಯಾಚರಣೆ ಕೈಗೊಳ್ಳಲು, ಪ್ರತಿದಾಳಿ ನಡೆಸಲು ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಎರಡನೇ ಪರೀಕ್ಷಾರ್ಥ ಉಡಾವಣೆಯಾಗಿದೆ. 2020ರ ಅಕ್ಟೋಬರ್ 5ರಂದು ಅಬ್ದುಲ್ ಕಲಾಂ ದ್ವೀಪದಲ್ಲಿಯೇ ಮೊದಲ ಪರೀಕ್ಷೆ ನಡೆಸಲಾಗಿತ್ತು.
India has successfully carried out trials of the Supersonic Missile Assisted Release of Torpedo anti-submarine missile system off the coast of Balasore, Odisha. The missile system is being developed for the Indian Navy by the Defence Research and Development Organisation: Defence… pic.twitter.com/DSljcriG8Q
— ANI (@ANI) May 1, 2024
ಕ್ಷಿಪಣಿಯ ವೈಶಿಷ್ಟ್ಯಗಳು
- ಇದು ಕ್ಯಾನಿಸ್ಟರ್ ಆಧಾರಿತ, ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ
- ಭಾರತೀಯ ನೌಕಾಪಡೆಗಾಗಿ ಡಿಆರ್ಡಿಒ ದೇಶೀಯವಾಗಿ ನಿರ್ಮಿಸಿದೆ
- ಸಾಗರ ಪ್ರದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲಿದೆ
- ಇದು ಸುಮಾರು 643 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ದಕ್ಷತೆ ಹೊಂದಿದೆ
- 50 ಕೆ.ಜಿ. ಸ್ಫೋಟಕಗಳನ್ನು 20 ಕಿಲೋಮೀಟರ್ ದೂರದವರೆಗೆ ಸಾಗಿಸುವ ಸಾಮರ್ಥ್ಯ
- ಆಗಸದಲ್ಲಿಯೇ ಶತ್ರುಗಳ ಪಡೆಯ ನೌಕೆಗಳನ್ನು ಡಿಟೆಕ್ಟ್ ಮಾಡುವ ತಂತ್ರಜ್ಞಾನದ ಅಳವಡಿಕೆ
- ಆಗಸದಿಂದಲೂ ಉಡಾವಣೆ ಮಾಡುವ ದಕ್ಷತೆ, ಟ್ರಕ್ ಆಧಾರಿತ ಕೋಸ್ಟಲ್ ಬ್ಯಾಟರಿ ಮೂಲಕವೂ ಉಡಾವಣೆ ಸಾಧ್ಯ
- ಇದನ್ನೂ ಓದಿ: Gaganyaan Mission: ಗಗನಯಾನಕ್ಕೆ ಇಸ್ರೋ ಸಿದ್ಧತೆ, ಮತ್ತೊಂದು ಮಹತ್ವದ ಪರೀಕ್ಷೆ ಯಶಸ್ವಿ!