Site icon Vistara News

Women’s Asia Cup 2024 : ಪಾಕಿಸ್ತಾನ ವಿರುದ್ಧ ಭರ್ಜರಿ 7 ವಿಕೆಟ್​ ವಿಜಯ ಸಾಧಿಸಿದ ಭಾರತದ ಮಹಿಳೆಯರು

Women's Asia Cup 2024

ಕೊಲೊಂಬೊ: ಮಹಿಳೆಯರ ಏಷ್ಯಾ ಕಪ್​ ಟೂರ್ನಿಯ ಬಲಿಷ್ಠ ತಂಡವಾಗಿರುವ ಭಾರತ ತಂಡ, ಏಷ್ಯಾ ಕಪ್​ 2024ರ (Women’s Asia Cup 2024) ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ನಿರಾಯಸವಾಗಿ ಸೋಲಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಹರ್ಮನ್​ಪ್ರೀತ್​ ಕೌರ್ ನೇತೃತ್ವದ ಬಳಗ ತನ್ನ ವಿಜಯದ ಅಭಿಯಾನವನ್ನು ಆರಂಭಿಸಿದೆ. ಭಾರತ ತಂಡದ ಮಹಿಳೆಯರ ಆಟದ ಮುಂದೆ ಪಾಕಿಸ್ತಾನದ ವನಿತೆಯರು ಬಹುತೇಕ ಮಂಕಾದರು. ಗೆಲುವಿನ ನಿರೀಕ್ಷೆಯನ್ನು ಮಾಡಲೂ ನೆರೆಯ ರಾಷ್ಟ್ರದ ಆಟಗಾರರಿಗೆ ಅವಕಾಶ ಕೊಡಲಿಲ್ಲ.

ಡಂಬಲಾದ ರಣಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸಾದ್ಯವಾಗದೇ 19. 2 ಓವರ್​ಗಳಲ್ಲಿ 108 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಆಡಿದ ಭಾರತ14.1 ಓವರ್​ಗಳಲ್ಲಿ 3 ವಿಕೆಟ್​ಗೆ 109 ರನ್ ಬಾರಿಸಿ ಸುಲಭ ಜಯ ದಾಖಲಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಅತ್ಯುತ್ತಮವಾಗಿ ಬ್ಯಾಟಿಮಗ್ ಮಾಡಿತು. ಮೊದಲ ವಿಕೆಟ್​ಗೆ ಶೆಫಾಲಿ ವರ್ಮ(40 ರನ್​), ಸ್ಮೃತಿ ಮಂಧಾನಾ (45 ರನ್​) 85 ರನ್ ಬಾರಿಸಿದರು. ಹೀಗಾಗಿ ಭಾರತಕ್ಕೆ ಗೆಲುವಿನ ಅವಕಾಶ ಸೃಷ್ಟಿಯಾಯಿತು. ಇಬ್ಬರೂ ಬ್ಯಾಟರ್​ಗಳು ಪಾಕ್ ಬೌಲರ್​ಗಳನ್ನು ಮುಲಾಜಿಲ್ಲದೆ ದಂಡಿಸಿದರು. ಶಫಾಲಿ 29 ಎಸೆತಕ್ಕೆ 6 ಫೋರ್​, 1 ಸಿಕ್ಸರ್ ಸಮೇತ 40 ರನ್ ಬಾರಿಸಿದರೆ, ಸ್ಮೃತಿ ಮಂಧಾನಾ 31 ಎಸೆತಕ್ಕೆ 9 ಫೋರ್ ಹೊಡೆದರು. ಆದರೆ, ಸ್ಮೃತಿ ಮಂಧಾನಾ ಅರ್ಧ ಶತಕದ ಹಾದಿಯಲ್ಲ ಮುಗ್ಗಿರಿಸಿದರು. ಬಳಿಕ ಬಂದ ದಯಾಳನ್​ ಹೇಮಲತಾ 11 ಎಸೆತಕ್ಕೆ 14 ರನ್ ಬಾರಿಸಿ ಔಟಾದರು. ನಂತರ ಶಫಾಲಿ ಔಟಾದರು. ನಾಯಕಿ ಹರ್ಮನ್ ಪ್ರೀತ್ ಕೌರ್​ 5 ರನ್ ಹಾಗೂ ಜೆಮಿಮಾ ರೋಡ್ರಿಗಸ್​ 3 ರನ್ ಬಾರಿಸಿ ಗೆಲವು ತಂದುಕೊಟ್ಟರು.

ಭಾರತದ ಬೌಲಿಂಗ್​ಗೆ ನಲುಗಿದ ಪಾಕ್​

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಭಾರತದ ಬೌಲಿಂಗ್ ದಾಳಿಗೆ ಮುಗ್ಗರಿಸಿತು. ಗುಲ್ ಫೆರೋಜಾ 5 ರನ್​ಗೆ ಔಟಾದರೆ ಮುನೀಬಾ 11 ರನ್​ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಸಿದ್ರಾ ಅಮಿನ್ 25 ರನ್ ಬಾರಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಆದರೆ, ಅಲಿಯಾ ರಿಯಾಜ್​ 6 ರನ್ ಹಾಗೂ ನಾದಿಯಾ ದರ್​ ರನ್​ ಬಾರಿಸಿ ಔಟಾಗುವುದರೊಂದಿಗೆ ಭಾರತದ ಮೇಲುಗೈ ಆರಂಭವಾಯಿತು. ತೌಬಾ ಹಸನ್ 22 ರನ್ ಬಾರಿಸಿ ಸ್ವಲ್ಪ ಹೊತ್ತು ಆಡಿದರು. ಕೊನೆಯಲ್ಲಿ ಫಾತಿಮಾ ಸನಾ ಕೂಡ 22 ಕೂಡ ರನ್​ ಬಾರಿಸುವ ಮೂಲಕ ತಂಡದ ಮೊತ್ತ 100 ರ ಗಡಿ ದಾಟುವಂತೆ ನೋಡಿಕೊಂಡರು.

ಇದನ್ನೂ ಓದಿ: Women’s Asia Cup 2024 : ಏಷ್ಯಾ ಕಪ್​ನ ಮೊದಲ ಪಂದ್ಯದಲ್ಲೇ ಗೆದ್ದು ಇತಿಹಾಸ ಸೃಷ್ಟಿಸಿದ ನೇಪಾಳ ಮಹಿಳಾ ತಂಡ

ಭಾರತ ಪರ ದೀಪ್ತಿ ಶರ್ಮಾ 20 ರನ್ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರೆ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್​ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ತಲಾ 2 ವಿಕೆಟ್ ಉರುಳಿಸಿದರು.

Exit mobile version