Site icon Vistara News

Hockey News : ಭಾರತ ಮಹಿಳಾ ಹಾಕಿ ತಂಡದ ಕೋಚ್ ಶೋಪ್ಮನ್​ ರಾಜೀನಾಮೆ

Janneke Schopman

ನವದೆಹಲಿ: ಪುರುಷರ ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡುತ್ತಿರುವ ಹಾಕಿ ಇಂಡಿಯಾವನ್ನು (Hockey News) ಟೀಕಿಸಿದ ಕೆಲವೇ ದಿನಗಳಲ್ಲಿ ಭಾರತದ ಮಹಿಳಾ ಹಾಕಿ ತಂಡದ ಕೋಚ್​ ಜನ್ನೆಕ್ ಶೋಪ್ಮನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಆಗಸ್ಟ್​​ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಂತರ ಅಧಿಕಾರಾವಧಿ ಕೊನೆಗೊಳ್ಳಬೇಕಿದ್ದ, ಶೋಪ್ಮನ್​ ದಿಢೀರ್​ ​ ತಮ್ಮ ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾಕ್ಕೆ (ಎಚ್ಐ) ಕಳುಹಿಸಿದ್ದಾರೆ.

“ನನ್ನ ಒಪ್ಪಂದದ ಪ್ರಕಾರ ಹಾಕಿ ಇಂಡಿಯಾ ಮತ್ತು ಸಾಯ್ ಗೆ ಒಂದು ತಿಂಗಳ ನೋಟಿಸ್ ನೀಡುವ ಮೂಲಕ ನಾನು ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ನನ್ನ ಕೊನೆಯ ಕೆಲಸದ ದಿನ ಮಾರ್ಚ್ 23, 2024 ಆಗಿರುತ್ತದೆ” ಎಂದು ಶೋಪ್ಮನ್​ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ತಂಡದೊಂದಿಗಿನ ನನ್ನ ಸಮಯವು ಸ್ಮರಣೀಯ ಅನುಭವ. ನಾನು ಯಾವಾಗಲೂ ಆಟಗಾರರು ಮತ್ತು ಸಿಬ್ಬಂದಿಗೆ ಕೃತಜ್ಞತೆಯ ಭಾವದಿಂದ ನೋಡುತ್ತೇನೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನನ್ನ ಸಂಬಳ, ತರಬೇತುದಾರರ ಶಿಕ್ಷಣ ಶುಲ್ಕ ಮತ್ತು ಕಳೆದ ವರ್ಷದ ಬಾಕಿ ಇಟ್ಟಿರುವ ಮೊತ್ತವನ್ನು ಈ ದಿನಾಂಕದ ಮೊದಲು ಪಾವತಿಸಬೇಕು ಎಂದು ನಾನು ದಯವಿಟ್ಟು ವಿನಂತಿಸುತ್ತೇನೆ” ಎಂದು ಅವರು ಬರೆದಿದ್ದಾರೆ.

ಆಧಾರ ರಹಿತ ಆರೋಪ

ಶೋಪ್ಮನ್​ ಗುರುವಾರ ಇಲ್ಲಿಗೆ ಆಗಮಿಸಿ ಎಚ್ಐ ಅಧಿಕಾರಿಗಳನ್ನು ಭೇಟಿಯಾದರು. “ಅವರು ಇನ್ನು ಮುಂದೆ ಮುಂದುವರಿಯಲು ಬಯಸುವುದಿಲ್ಲ ಎಂದು ಅವರು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. ಈ ಪತ್ರವನ್ನು ಅನುಕೂಲಕರ ಶಿಫಾರಸುಗಳೊಂದಿಗೆ ಸಾಯ್ ಗೆ ಕಳುಹಿಸಲಾಗಿದೆ” ಎಂದು ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಪ್ಮನ್​ ತನ್ನ ಅಧಿಕಾರಾವಧಿಯಲ್ಲಿ ತಂಡಕ್ಕೆ ಕೇಳಿದ ಎಲ್ಲವನ್ನೂ ಒದಗಿಸಲಾಗಿದೆ ಎಂದು ಎಚ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಮಹಿಳಾ ತಂಡ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯದಿರುವುದು ದೊಡ್ಡ ಹೊಡೆತವಾಗಿದೆ. ತಂಡಕ್ಕೆ ಎಲ್ಲಾ ಸೌಲಭ್ಯ, ನೀಡಲಾಗಿದೆ. ಶೋಪ್ಮನ್ ಅವರನ್ನು ಗೌರವಿಸಲಾಗಿಲ್ಲ ಎಂದು ಹೇಳುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ” ಎಂದು ಅಧಿಕಾರಿ ಹೇಳಿದರು.

ಎರಡು ಅವಕಾಶ ನಷ್ಟ ಮಾಡಿಕೊಂಡ ಭಾರತ

2024ರ ಪ್ಯಾರಿಸ್ ಒಲಿಂಪಿಕ್ಸ್​​ ಮಹಿಳಾ ತಂಡ ಅರ್ಹತೆ ಪಡೆಯದ ಕಾರಣ ಆರಂಭವಾದ ವಿವಾದ ರಾಜೀನಾಮೆಯಲ್ಲಿ ಕೊನೆಗೊಂಡಿದೆ.

ಇದನ್ನೂ ಓದಿ : WPL 2024 : ಲಾಸ್ಟ್​ ಬಾಲ್​​ ಸಿಕ್ಸರ್​; ಚಾಂಪಿಯನ್ ಮುಂಬೈ ತಂಡಕ್ಕೆ ರೋಚಕ ಜಯ

ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ಭಾರತ ತಂಡವು ಎರಡು ಅವಕಾಶಗಳನ್ನು ಕಳೆದುಕೊಂಡಿತು. ಮೊದಲು ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತು ನಂತರ ರಾಂಚಿಯಲ್ಲಿ ನಡೆದ ಎಫ್ಐಎಚ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ತಂಡವು ಮೂರನೇ-ನಾಲ್ಕನೇ ಸ್ಥಾನದ ಪಂದ್ಯದಲ್ಲಿ ಜಪಾನ್ ವಿರುದ್ಧ 0-1 ಗೋಲುಗಳಿಂದ ಸೋಲು ಕಂಡಿತ್ತು.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ತಂಡವು ನಾಲ್ಕನೇ ಸ್ಥಾನ ಪಡೆದ ನಂತರ ಸೋಜೆ ಮಾರಿಜ್ನೆ ಅವರಿಂದ ಅಧಿಕಾರ ವಹಿಸಿಕೊಂಡ ಶೋಪ್ಮನ್​ ಆಂತರಿಕ ಜಗಳ ಶುರುವಾಗಿತ್ತು.

Exit mobile version