ಮುಂಬೈ: ಟಿ20 ವಿಶ್ವ ಕಪ್ ನಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡ ಭಾರತ ಕ್ರಿಕೆಟ್ ತಂಡಕ್ಕೆ (Team India) ಮುಂಬಯಿನಲ್ಲಿ ಬಿಸಿಸಿಐ ಅದ್ಧೂರಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ತಂಡದ ಆಟಗಾರರನ್ನು ತುಂಬಿಕೊಂಡಿದ್ದ ತೆರೆದ ಬಸ್ (India’s open-bus parade) ಸಂಜೆ 7 ಗಂಟೆಗೆ ಮರೀನ್ ಡ್ರೈವ್ನಿಂದ ಆರಂಭಗೊಂಡು ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಸಾಗಿತು.
ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಐತಿಹಾಸಿಕ ವಿಜಯವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಟೀಮ್ ಇಂಡಿಯಾ ಮುಂಬೈಗೆ ಆಗಮಿಸುವ ಮೊದಲೇ ಸಾವಿರಾರು ಅಭಿಮಾನಿಗಳು ಮರೀನ್ ಡ್ರೈವ್ಗೆ ಆಗಮಿಸಿದ್ದರು. ವಿಶ್ವಕಪ್ ವಿಜೇತರಿಗಾಗಿ ಅಭಿಮಾನಿಗಳು ತೀವ್ರವಾಗಿ ಕಾಯುತ್ತಿದ್ದರಿಂದ ವಾಂಖೆಡೆ ಕ್ರೀಡಾಂಗಣವೂ ಜನರಿಂದ ತುಂಬಿತ್ತು. ಆ ಬಳಿಕ ಐತಿಹಾಸಿಕ ವಾಖೆಂಡೆ ಸ್ಟೇಡಿಯಮ್ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ನಾಯಕ ರೋಹಿತ್ ಶರ್ಮಾ. ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ತಂಡದ ಆಟಗಾರರು ಕುಣಿದು ಕುಪ್ಪಳಿಸಿದರು. ಬಳಿಕ ಅವರು ತಮ್ಮ ತಂಡದ ಆಟಗಾರರು ಹಾಗೂ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸಂದರ್ಭದ ಚಿತ್ರಗಳು ಈ ಕೆಳಗಿವೆ.
ಇದನ್ನೂ ಓದಿ: Rohit Sharma : ವಾಂಖೆಡೆ ಸ್ಟೇಡಿಯಮ್ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ