ನವ ದೆಹಲಿ: ಭಾರತದ ಷೇರು ಮಾರುಕಟ್ಟೆ (Share Market) ಇತ್ತೀಚಿನದ ದಿನಗಳಲ್ಲಿ ತೀವ್ರಗತಿಯ ಬೆಳವಣಿಗೆ ಕಾಣುತ್ತಿದೆ. ಭಾರತದ ಷೇರು ಮಾರುಕಟ್ಟೆಯೀಗ ವಿಶ್ವದ ನಾಲ್ಕನೇ ಅತಿ ದೊಡ್ಡ ಮಾರ್ಕೆಟ್ ಎಂಬ ಖ್ಯಾತಿಯನ್ನು ಪಡೆದಿದೆ. ಈ ಬೆಳವಣಿಗೆ ಮತ್ತಷ್ಟು ಮುಂದುವರಿದಿದ್ದು ಏರುಗತಿಯಲ್ಲಿ ಸಾಗುತ್ತಿದೆ. ಈ ಅಂಕಿ ಅಂಶಗಳನ್ನು ಹೊಂದಿರುವ ಗ್ರಾಫ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತ ಷೇರು ಮಾರುಕಟ್ಟೆ ಶೇಕಡಾ 20ರಷ್ಟು ಪ್ರಗತಿ ಕಂಡಿದ್ದರೆ, ಚೀನಾದ ಮಾರುಕಟ್ಟೆ ಶೇಕಡಾ 30ರಷ್ಟು ಕುಸಿದಿದೆ.
ಮೈ ಗವರ್ನ್ಮೆಂಟ್ ವೆಬ್ಸೈಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ನ್ಯೂ ಇಂಡಿಯಾ ಇನ್ಸೈಟ್ ಎಂಬ ಶೀರ್ಷಿಕೆಯಲ್ಲಿ ಭಾರತವೀಗ ವಿಶ್ವದ ಹೂಡಿಕೆದಾರರ ಅತ್ಯಂತ ನೆಚ್ಚಿನ ತಾಣ ಎಂದು ಬರೆಯಲಾಗಿದೆ. ಈ ಗ್ರಾಫ್ನ ಮಾಹಿತಿ ಪ್ರಕಾರ 2023ರ ಜನವರಿಯಿಂದ 2024 ಜನವರಿವರೆಗೆ ಭಾರತದ ಷೇರು ಮಾರುಕಟ್ಟೆ ಶೇಕಡಾ 30 ಏರಿಕೆ ಕಂಡಿದ್ದರೆ, ಚೀನಾದ ಷೇರು ಮಾರುಕಟ್ಟೆ ಇದೇ ಅವಧಿಯಲ್ಲಿ ಶೇಕಡಾ 20ರಷ್ಟು ಇಳಿಕೆ ಕಂಡಿದೆ.
ಭಾರತದ ಮಾರುಕಟ್ಟೆ ಉಲ್ಬಣವು ಕೇವಲ ಪ್ರವೃತ್ತಿಯಲ್ಲ, ಇದು ವಿಶ್ವದ ಎಲ್ಲಾ ಮೂಲೆಗಳಿಂದ ಹೂಡಿಕೆದಾರರನ್ನು ಆಕರ್ಷಿಸುವ ಜಾಗತಿಕ ವಿದ್ಯಮಾನವಾಗಿದೆ ಎಂದು ಎಕ್ಸ್ನಲ್ಲಿ ಮೈಗೌ ಬರೆದುಕೊಂಡಿದೆ. ಆ ಎಕ್ಸ್ ಪೋಸ್ಟ್ ಇಲ್ಲಿದೆ.
India's market surge is not just a trend, it is a global phenomenon attracting investors from all corners of the world#InvestIndia #MarketGrowth pic.twitter.com/cEY1pZufg2
— MyGovIndia (@mygovindia) February 10, 2024
ಹಾಂಕಾಂಗ್ ಅನ್ನು ಹಿಂದಿಕ್ಕಿದ ಭಾರತ; ನಾವೀಗ ಷೇರು ಮಾರುಕಟ್ಟೆಯಲ್ಲಿ ನಂ.4
ಹೊಸದಿಲ್ಲಿ: ಭಾರತದ ಷೇರು ಮಾರುಕಟ್ಟೆಯು (India Stock Market) ಹಾಂಕಾಂಗ್ (Hong Kong) ಅನ್ನು ಹಿಂದಿಕ್ಕಿ ಮೊದಲ ಬಾರಿಗೆ ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಬ್ಲೂಮ್‌ಬರ್ಗ್ ಮೀಡಿಯಾ ನೀಡಿರುವ ವರದಿಯ ಪ್ರಕಾರ, ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಷೇರುಗಳ ಸಂಯೋಜಿತ ಮೌಲ್ಯ ಸೋಮವಾರದ ಮುಕ್ತಾಯದ ವೇಳೆಗೆ $4.33 ಲಕ್ಷ ಕೋಟಿಗೆ ತಲುಪಿದೆ. ಹಾಂಕಾಂಗ್‌ನಲ್ಲಿ ಅದು $4.29 ಲಕ್ಷ ಕೋಟಿಯಲ್ಲಿತ್ತು.
ಭಾರತದ ಷೇರುಪೇಟೆ ಬಂಡವಾಳೀಕರಣವು ಡಿಸೆಂಬರ್ 5ರಂದು ಮೊದಲ ಬಾರಿಗೆ $4 ಲಕ್ಷ ಕೋಟಿ ದಾಟಿತ್ತು. ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಹೂಡಿಕೆದಾರರ ಪ್ರಮಾಣ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್‌ಐಐ) ನಿರಂತರ ಒಳಹರಿವು, ಬಲವಾದ ಕಾರ್ಪೊರೇಟ್ ಗಳಿಕೆಗಳು ಮತ್ತು ದೃಢವಾದ ಆಡಳಿತದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಬೆಳವಣಿಗೆ ಬಂದಿದೆ.
ಇದನ್ನೂ ಓದಿ : EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ಇದಲ್ಲದೆ, ಭಾರತವು ಚೀನಾಕ್ಕೆ ಪರ್ಯಾಯವಾಗಿ ಸ್ಥಾನ ಪಡೆದಿದೆ. ಜಾಗತಿಕ ಹೂಡಿಕೆದಾರರು ಮತ್ತು ಕಂಪನಿಗಳಿಂದ ತಾಜಾ ಬಂಡವಾಳವನ್ನು ಆಕರ್ಷಿಸುತ್ತಿದೆ. ದೇಶದ ರಾಜಕೀಯ ಸ್ಥಿರತೆ, ವೇಗವಾಗಿ ಬೆಳೆಯುತ್ತಿರುವ ಬಳಕೆ- ಚಾಲಿತ ಆರ್ಥಿಕತೆ ಕಾರಣವಾಗಿದೆ. 2023ರಲ್ಲಿ ಭಾರತೀಯ ಷೇರುಗಳಿಗೆ ಸಾಗರೋತ್ತರ ನಿಧಿಗಳು $21 ಶತಕೋಟಿಗೂ ಹೆಚ್ಚು ಹರಿದುಬಂದಿವೆ. ದೇಶದ ಬೆಂಚ್‌ಮಾರ್ಕ್ BSE ಸೆನ್ಸೆಕ್ಸ್ ಸೂಚ್ಯಂಕ ಸತತ ಎಂಟನೇ ವರ್ಷದ ಲಾಭವನ್ನು ಗಳಿಸಿದೆ.
ಮತ್ತೊಂದೆಡೆ ಹಾಂಕಾಂಗ್ ಮಾರುಕಟ್ಟೆ ಕುಸಿದಿದೆ. ಅಲ್ಲಿ ಚೀನಾದ ಕೆಲವು ಅತ್ಯಂತ ಪ್ರಭಾವಶಾಲಿ ಮತ್ತು ಹೊಸ ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ಚೈನೀಸ್ ಮತ್ತು ಹಾಂಕಾಂಗ್‌ನ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ 2021ರ ಬಳಿಕ $6 ಲಕ್ಷ ಕೋಟಿಗಿಂತಲೂ ಹೆಚ್ಚು ಕುಸಿದಿದೆ.
ಬೀಜಿಂಗ್‌ನ ಕಟ್ಟುನಿಟ್ಟಾದ ಕೋವಿಡ್-19 ವಿರೋಧಿ ನಿರ್ಬಂಧಗಳು, ಸಂಸ್ಥೆಗಳ ಮೇಲಿನ ನಿಯಂತ್ರಕ ದಮನಕಾರಿ ಕ್ರಮಗಳು, ಆಸ್ತಿ- ವಲಯ ಬಿಕ್ಕಟ್ಟು, ಪಶ್ಚಿಮ ದೇಶಗಳ ಜತೆಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚೀನಾದ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಹಾಂಕಾಂಗ್‌ನಲ್ಲಿ ಹೊಸ ಲಿಸ್ಟಿಂಗ್ ಆಗುತ್ತಿಲ್ಲ. ಹೀಗಾಗಿ ಈ ಮೊದಲು ಐಪಿಒಗಳಿಗೆ ʼಏಷ್ಯಾದ ಹಣಕಾಸು ಕೇಂದ್ರʼ ಎಂದು ಕರೆಸಿಕೊಂಡಿದ್ದ ಹಾಂಕಾಂಗ್ ತನ್ನ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದೆ.