Site icon Vistara News

Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ

Unemployment Rate

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತವು ಉದ್ಯೋಗದ ಪ್ರಮಾಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ವರದಿಯೊಂದು ಹೇಳಿದೆ ಭಾರತದ ನಿರುದ್ಯೋಗ ದರವು 2023ರಲ್ಲಿ ಶೇಕಡಾ 3.1 ಕ್ಕೆ ಇಳಿಕೆಯಾಗಿದ್ದು. ಇದು 2022 ರಲ್ಲಿ ಶೇಕಡಾ 7 ರಷ್ಟಿತ್ತು ಎಂದು ಕ್ಯಾಪ್​ಜೆಮಿನಿ ರೀಸರ್ಚ್​ ಸೆಂಟರ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿಡಿಪಿಯಲ್ಲಿನ ಒಟ್ಟು ಶೇಕಡಾವಾರು ರಾಷ್ಟ್ರೀಯ ಉಳಿತಾಯವು 2022 ರಲ್ಲಿ ಶೇಕಡಾ 29.9 ಕ್ಕೆ ಹೋಲಿಸಿದರೆ 2023 ರಲ್ಲಿ ಶೇಕಡಾ 33.4 ಕ್ಕೆ ಏರಿಕೆಯಾಗಿದೆ ಎಂದೂ ವರದಿ ಹೇಳಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಭಾರತದಲ್ಲಿ ಹೈ ನೆಟ್​ ವರ್ಥ್​ ಇಂಡಿವಿಜುಯಲ್ಸ್- HNWI (10 ಲಕ್ಷ ಡಾಲರ್​ಗೂ ಹೆಚ್ಚು ಆಸ್ತಿ ಹೊಂದಿರುವ ವ್ಯಕ್ತಿಗಳನ್ನು ಈ ರೀತಿ ಹೇಳಲಾಗುತ್ತದೆ) ​ ಸಂಖ್ಯೆ ಶೇಕಡಾ 12.2 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಎಚ್ಎನ್​ಡಬ್ಲ್ಯು ಐ ಸಂಪತ್ತು 2022 ರಲ್ಲಿ 1,286.7 ಬಿಲಿಯನ್ ಡಾಲರ್​ನಿಂದ 2023 ರಲ್ಲಿ ಶೇಕಡಾ 12.4 ರಷ್ಟು ಏರಿಕೆಯಾಗಿದ್ದು, 1,445.7 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವಿಚಾರದಲ್ಲಿ ಜಾಗತಿಕವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯುತ್ತಮವಾಗಿದೆ. ಇಲ್ಲಿ ಎಚ್ಎನ್​ಡಬ್ಲ್ಯುಐ ಸಂಪತ್ತಿನ ಬೆಳವಣಿಗೆಯನ್ನು ಕ್ರಮವಾಗಿ ಶೇಕಡಾ 12.4 ಮತ್ತು ಶೇಕಡಾ 7.9 ಮತ್ತು ಎಚ್​ಎನ್​ಡಬ್ಲ್ಯು ಜನಸಂಖ್ಯೆಯ ಬೆಳವಣಿಗೆ ಕ್ರಮವಾಗಿ ಶೇಕಡಾ 12.2 ಮತ್ತು ಶೇಕಡಾ 7.8 ರಷ್ಟು ದಾಖಲಾಗಿದೆ.

ಈ ಎರಡೂ ದೇಶಗಳಲ್ಲಿನ ಸಂಪತ್ತಿನ ಬೆಳವಣಿಗೆಯು ಸ್ಥಿರ ಆರ್ಥಿಕತೆ ಮತ್ತು ಈಕ್ವಿಟಿ ಮಾರುಕಟ್ಟೆಗಳ ದೃಢವಾದ ಕಾರ್ಯಕ್ಷಮತೆ ಆಗಿದೆ ಎಂದು ವರದಿ ತೋರಿಸಿವೆ. ಕಳೆದ ಆರು ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆಯು ತನ್ನ ತ್ವರಿತ ಗತಿಯಲ್ಲ ಬೆಳೆದಿದೆ. ಇದು ದೃಢವಾದ ಖಾಸಗಿ ಬಳಕೆ ಮತ್ತು ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಗಳಿಂದ ಆಗಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

2022 ರಲ್ಲಿ ಶೇಕಡಾ 6 ರಷ್ಟು ಹೆಚ್ಚಳದ ನಂತರ ದೇಶದ ಮಾರುಕಟ್ಟೆ ಬಂಡವಾಳೀಕರಣವು ಕಳೆದ ವರ್ಷ ಶೇಕಡಾ 29 ರಷ್ಟು ಹೆಚ್ಚಾಗಿದೆ. ಸುಧಾರಿತ ಬಂಡವಾಳ ವೆಚ್ಚ, ಬಲವಾದ ಬ್ಯಾಂಕಿಂಗ್ ವ್ಯವಸ್ಥೆ, ಸಾಲದ ಬೆಳವಣಿಗೆ, ವಾಹನಗಳು ಮತ್ತು ವಿದ್ಯುತ್​ಗೆ ಹೆಚ್ಚಿದ ಬೇಡಿಕೆ ಮತ್ತು ಡಿಜಿಟಲೀಕರಣ-ಚಾಲಿತ ಉತ್ಪಾದನೆಗಳ ಹೆಚ್ಚಳದಂತಹ ಅಂಶಗಳು ಈ ಪ್ರವೃತ್ತಿಯನ್ನು ಹೆಚ್ಚಿಸಿದೆ ಎಂದು ವರದಿಯು ತಿಳಿಸಿದೆ.

ವಿದೇಶಿ ಬಂಡವಾಳ ಹೂಡಿಕೆ (ಎಫ್ಪಿಐ) ಹರಿವು 2023-24ರಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಒಟ್ಟು ಎಫ್ಪಿಐ ಒಳಹರಿವು 24.9 ಬಿಲಿಯನ್ ಡಾಲರ್ (ಡಿಸೆಂಬರ್ 6 ರವರೆಗೆ) ಹಿಂದಿನ ಎರಡು ವರ್ಷಗಳ ನಿವ್ವಳ ಹೊರಹರಿವಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Exit mobile version