Site icon Vistara News

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

INDW vs SLW Final

INDW vs SLW Final: India favourites but Sri Lanka won't be pushovers in Women's Asia Cup final

ದಾಂಬುಲಾ,(ಶ್ರೀಲಂಕಾ): ಇಂದು ನಡೆಯುವ 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್​ ಫೈನಲ್​(Womens Asia Cup Final) ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್​ ಭಾರತ(India Women vs Sri Lanka Women Final) ಮುಖಾಮುಖಿಯಾಗಲಿವೆ. 7 ಬಾರಿಯ ಚಾಂಪಿಯನ್​ ಭಾರತವೇ(INDW vs SLW Final) ಈ ಬಾರಿಯ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದೆ. ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಭಾರತ ಪರ ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್​ ಗಳಿಸಿ ಕೂಟದ ಅತ್ಯಧಿಕ ರನ್​ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್​ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್​, ಆಲ್​ರೌಂಡರ್​ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್​ಗಳಾದರೆ, ವೇಗಿ ರೇಣುಕಾ ಸಿಂಗ್​ ಮತ್ತು ಪೂಜಾ ವಸ್ತ್ರಾಕರ್​ ವೇಗಿಗಳಾಗಿದ್ದಾರೆ.

ಎದುರಾಳಿ ಶ್ರೀಲಂಕಾವನ್ನು ಕಡೆಗಣಿಸುವಂತಿಲ್ಲ. ಕೂಟದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿರುವ ನಾಯಕಿ ಚಾಮರಿ ಅತಪಟ್ಟು ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಆಡಿದ 4 ಪಂದ್ಯಗಳಿಂದ 243 ರನ್​ ಕಲೆ ಹಾಕಿದ್ದಾರೆ. ಇವರು ಸಿಡಿದು ನಿಂತರೆ ಪಂದ್ಯದ ಗತಿಯೇ ಬದಲಾಗಬಹುದು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳುವ ಅಗತ್ಯವಿದೆ.

ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

ಇದುವರೆಗಿನ ಮಹಿಳಾ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 5 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತವೇ ಗೆದ್ದು ಬೀಗಿದೆ. ಈ ಬಾರಿಯದ್ದು 6ನೇ ಮುಖಾಮುಖಿ. ಮಹಿಳಾ ಏಷ್ಯಾ ಕಪ್​ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್​ ಪಂದ್ಯದಲ್ಲಿ ಭಾರತ 3 ವಿಕೆಟ್‌ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.

ಸಂಭಾವ್ಯ ತಂಡಗಳು


ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ (ವಾಕ್), ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.

Exit mobile version