ಹೈದರಾಬಾದ್: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ (Child Trafficking Racket) ಜಾಲವೊಂದನ್ನು ಭೇದಿಸಿದ ಹೈದರಾಬಾದ್ ಪೊಲೀಸರು 11ಮಕ್ಕಳನ್ನು ರಕ್ಷಿಸಿದ್ದಾರೆ. ಗ್ರೇಟರ್ ಹೈದರಾಬಾದ್ನ ಪೊಲೀಸರು ಕಾರ್ಯಾಚರಣೆ ನಡೆಸಿದ ನಮ್ಮ ಮಕ್ಕಳು ಎಂದು ಹೇಳಿಕೊಂಡು ಸಾಗಣೆ ಮಾಡಲು ಯತ್ನಿಸುತ್ತಿದ್ದ ಹಲವರನ್ನು ಬಂಧಿಸಿದ್ದಾರೆ. ಆರೋಪಿಗಳು ಮಗುವನ್ನು 4.50 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೇ 22 ರಂದು ಆರ್ಎಂಪಿ ವೈದ್ಯೆಯೊಬ್ಬರನ್ನು ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ವೇಳೆ ಉಳಿದ ಆರೋಪಿಗಳ ಹೆಸರು ಬಹಿರಂಗಗೊಂಡಿದ್ದು ಅವರೆಲ್ಲರನ್ನೂ ಬಂಧಿಸಿ ಮಕ್ಕಳನ್ನು ರಕ್ಷಿಸಲಾಗಿದೆ.
ದೆಹಲಿ ಮತ್ತು ಪುಣೆಯ ಮೂವರು ಆರೋಪಿಗಳಿಂದ ಮಕ್ಕಳನ್ನು ಖರೀದಿಸಿದ ಎಂಟು ಮಹಿಳೆಯರು ಸೇರಿದಂತೆ 11 ಜನರನ್ನು ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೆಡಿಪಲ್ಲಿ ಪೊಲೀಸರು ಬಂಧಿಸಲಾಗಿದೆ. ಅವರು (ಮಕ್ಕಳನ್ನು) ಬಡ ಕುಟುಂಬಗಳಿಂದ 1.8 ಲಕ್ಷ ರೂಪಾಯಿಗೆ ಖರೀದಿ ಮಾಡುತ್ತಿದ್ದರು. ಬಳಿಕ 5.5 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ. ಎರಡು ತಿಂಗಳಿನಿಂದ ಎರಡು ವರ್ಷದ 13 ಶಿಶುಗಳನ್ನು ರಕ್ಷಿಸಲಾಗಿದ್ದು, ವೈದ್ಯರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ತರುಣ್ ಜೋಶಿ ತಿಳಿಸಿದ್ದಾರೆ.
ಬಂಧಿತರೆಲ್ಲರೂ ತೆಲಂಗಾಣ ಮತ್ತು ನೆರೆಯ ಆಂಧ್ರಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ. ದೆಹಲಿ ಮತ್ತು ಪುಣೆಯ ಮೂವರು ವ್ಯಕ್ತಿಗಳು ಶಿಶುಗಳನ್ನು ಅವರಿಗೆ ಸರಬರಾಜು ಮಾಡುತ್ತಿದ್ದರು ಎಂದು ಅವರ ವಿಚಾರಣೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Harish Poonja: ಪೊಲೀಸರಿಗೆ ಧಮ್ಕಿ ಪ್ರಕರಣ; ಶಾಸಕ ಹರೀಶ್ ಪೂಂಜಾ, 40 ಮಂದಿ ವಿರುದ್ಧ ಚಾರ್ಜ್‌ಶೀಟ್
ದೆಹಲಿ ಮತ್ತು ಪುಣೆಯಿಂದ ಕರೆತಂದ ಮಕ್ಕಳನ್ನು ಕೆಲವರು ಅಕ್ರಮವಾಗಿ ಸಾಗಿಸಿ ವಿಜಯವಾಡ ಮತ್ತು ಹೈದರಾಬಾದ್ನಲ್ಲಿ ಮಾರಾಟ ಮಾಡುತ್ತಿದ್ದರು. ದತ್ತು ಸ್ವೀಕಾರಕ್ಕಾಗಿ ಕಾಯಲು ಬಯಸದ ದಂಪತಿಗಳು ಅವರಿಂದ ಮಕ್ಕಳನ್ನು ಖರೀದಿಸುತ್ತಿದ್ದರು. ಅವರಿಗೆ 5-4 ಲಕ್ಷ ರೂ.ಗಳನ್ನು ಪಾವತಿಸುತ್ತಿದ್ದರು ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ರಕ್ಷಿಸಲಾದ ಮಕ್ಕಳು ಒಂದು ತಿಂಗಳಿನಿಂದ ಎರಡೂವರೆ ತಿಂಗಳ ವಯಸ್ಸಿನವರಾಗಿದ್ದಾರೆ. ಅವರಲ್ಲಿ ಒಂಬತ್ತು ಹೆಣ್ಣು ಮಕ್ಕಳು ಮತ್ತು ಉಳಿದ ಇಬ್ಬರು ಗಂಡು ಮಕ್ಕಳು. ಅವರ ಮೂಲ ಪೋಷಕರು ಪತ್ತೆಯಾಗುವವರೆಗೂ ಅವರನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಆರ್ಎಂಪಿ ವೈದ್ಯರಿಂದ ಮಗುವನ್ನು ಖರೀದಿಸಿದ್ದೇವೆ. ಆಕೆಯ ಹೆಸರು ಶೋಭಾರಾಣಿ. ಮಗುವಿಗೆ ₹ 4 ಲಕ್ಷ ನೀಡುವಂತೆ ಒತ್ತಾಯಿಸಿದ್ದರು. ನಾವು ನಾಲ್ಕು ಲಕ್ಷ ಕೊಟ್ಟು ಮಗುವನ್ನು ತೆಗೆದುಕೊಂಡೆವು. ಪೋಷಕರು ತುಂಬಾ ಬಡವರು ಎಂದು ಅವಳು ನಮಗೆ ಹೇಳಿದ್ದರು. ಆದ್ದರಿಂದ ನಾವು ಕಳೆದ 1 ವರ್ಷದಿಂದ ಮಗುವನ್ನು ನೋಡಿಕೊಂಡಿದ್ದೇವೆ. ನಿಜವಾದ ಪೋಷಕರು ಕಂಡುಬಂದರೆ, ನಾವು ಮಗುವನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ” ಎಂದು ಪೋಷಕರೊಬ್ಬರು ಹೇಳಿದ್ದಾರೆ.