Site icon Vistara News

Yoga Day 2022 | ಯೋಗ ಸುಸ್ಥಿರ ಬದುಕಿಗೆ ದಾರಿ ಎಂದ ವಿಶ್ವಸಂಸ್ಥೆ

Yoga Day 2022

ನ್ಯೂಯಾರ್ಕ್‌: ಈ ಬಾರಿಯ ಯೋಗ ದಿನಾಚರಣೆಯನ್ನು (Yoga Day 2022) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಘೋಷಿಸಿದ ವಿಶ್ವಸಂಸ್ಥೆಯಲ್ಲಿ ಕೂಡ ಸೋಮವಾರ ಯೋಗ ದಿನಾಚರಣೆ ಆಚರಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ, ರಾಜತಾಂತ್ರಿಕರು, ಅತಿಥಿಗಳು ಭಾಗವಹಿಸಿದ್ದರು. ಕಚೇರಿಯ ಹೊರ ಭಾಗದಲ್ಲಿ ಎಲ್ಲರೂ ಸೇರಿ ಯೋಗ ಮಾಡಿದರು.

ಯೋಗ ಕೇವಲ ಮನಸ್ಸು ಮತ್ತು ದೇಹದ ನಡುವೆ ಸಮತೋಲನ ಸಾಧಿಸಲು ಸಹಕಾರಿಯಾಗಿಲ್ಲ. ಇದು ಮಾನವ ಸಂಬಂಧದಲ್ಲಿ ಸಮತೋಲನ ತರುತ್ತದೆ. ಸುಸ್ಥಿರ ಬದುಕಿಗೆ ದಾರಿಯಾಗಿದೆ.

ವಿಶ್ವಸಂಸ್ಥೆ ಯೋಗ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ.

ವಿಶ್ವಸಂಸ್ಥೆಯೇ ಈ ಬಾರಿಯ ಯೋಗ ದಿನಾಚರಣೆಯನ್ನು ‘ಮಾನವೀಯತೆಗಾಗಿ ಯೋಗ’ (Yoga for Humanity) ಎಂಬ ಥೀಮ್‌ನಡಿ ಆಚರಿಸಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಗತ್ತಿನ ಅನೇಕ ಕಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೋವಿಡ್‌-೧೯ ನಿಂದಾಗಿ ಜಗತ್ತಿನಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಖಿನ್ನತೆ, ಭಯ, ಆತಂಕ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿ ಯೋಗಕ್ಕಿದೆ ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ.

ಯೋಗ ಕೇವಲ ಮನಸ್ಸು ಮತ್ತು ದೇಹದ ನಡುವೆ ಸಮತೋಲನ ಸಾಧಿಸಲು ಸಹಕಾರಿಯಾಗಿಲ್ಲ. ಇದು ಮನುಷ್ಯ ಮನುಷ್ಯರ ನಡುವೆ ಸಮತೋಲನ ಸಾಧಿಸಲೂ ಸಹಕಾರಿಯಾಗಿದೆ. ಪ್ರಪಂಚದೊಂದಿಗಿನ ಮಾನವ ಸಂಬಂಧದಲ್ಲಿ ಸಮತೋಲನ ತರುತ್ತದೆ. ಯೋಗವು ಸಾವಧಾನತೆ, ಸಂಯಮ, ಶಿಸ್ತು ಮತ್ತು ಪರಿಶ್ರಮದ ಮೌಲ್ಯಗಳನ್ನು ಒತ್ತಿಹೇಳುತ್ತದೆ. ಸುಸ್ಥಿರ ಬದುಕಿಗೆ ದಾರಿಯಾಗಿದೆ ಎಂದು ವಿಶ್ವಸಂಸ್ಥೆ ಸಾರಿದೆ.

ಇದನ್ನೂ ಓದಿ|Yoga Day 2022 | ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ ಯೋಗ ದಿನಾಚರಣೆ

Exit mobile version