Site icon Vistara News

IPL 2024 : ಐಪಿಎಲ್​ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ

Chris Gayle

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024 ) ಕೆಲವು ಪಂದ್ಯಗಳು ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ತಿರುವು ಪಡೆದುಕೊಂಡಿವೆ. ಅದಕ್ಕೆ ಕಾರಣ ಸ್ಫೋಟಕ ಬ್ಯಾಟರ್​ಗಳು. ಎದುರಾಳಿ ತಂಡದ ಬೌಲರ್​ಗಳಿಗೆ ಅವಕಾಶವನ್ನೇ ಕೊಡದೇ ಬೌಂಡರಿ ಸಿಕ್ಸರ್ ಬಾರಿಸಿದ್ದಾರೆ. ಟಿ 20 ಕ್ರಿಕೆಟ್​ನಲ್ಲಿ ಬ್ಯಾಟರ್​ ಶತಕ ಬಾರಿಸಿದಾಗ ತಂಡಕ್ಕೆ ಸಾಕಷ್ಟು ನೆರವಾಗುತ್ತದೆ. ಅದರಲ್ಲೂ ವೇಗದ ಶತಕವು ತಂಡದ ಗೆಲುವಿನ ಸಾಧ್ಯತೆ ಹೆಚ್ಚಿಸುತ್ತದೆ.

2024ರ ಮಾರ್ಚ್ 22ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬಯಿ ಹಾಗೂ ಗುಜರಾತ್​ ತಂಡ ಮುಖಾಮುಖಿಯಾಗಲಿವೆ. ಅದಕ್ಕಿಂತ ಮೊದಲು ಐಪಿಎಲ್​ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದವರು ಯಾರು ಎಂಬುದನ್ನು ನೋಡೋಣ.

ಕ್ರಿಸ್​ ಗೇಲ್

ಪುಣೆ ವಾರಿಯರ್ಸ್ ಪರ ಆರ್​​ಸಿಬಿಯಲ್ಲಿದ್ದ ಕ್ರಿಸ್​​ ಗೇಲ್ 66 ಎಸೆತಗಳಲ್ಲಿ 175 ರನ್ ಸಿಡಿಸಿ ಔಟಾಗಿದ್ದು ಇದುವರೆಗಿನ ಗರಿಷ್ಠ ಸ್ಕೋರ್​. ಗೇಲ್ ತಮ್ಮ ಸ್ಮರಣೀಯ ಇನ್ನಿಂಗ್ಸ್​ನಲ್ಲಿ 17 ಸಿಕ್ಸರ್​ ಮತ್ತು 13 ಬೌಂಡರಿಗಳನ್ನು ಬಾರಿಸಿದ್ದಾರೆ. ಎಡಗೈ ಬ್ಯಾಟರ್​ ಕೇವಲ 30 ಎಸೆತಗಳಲ್ಲಿ ಮೂರು ಅಂಕಿಯ ಗಡಿ ದಾಟಿದ್ದಾರೆ. ಗೇಲ್ ಶತಕದ ನೆರವಿನಿಂದ ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಕಲೆಹಾಕಿತು. ಪುಣೆ ತಂಡವು 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಗಿ 130 ರನ್ ಗಳಿಂದ ಸೋಲನುಭವಿಸಿತು.

ಯೂಸುಫ್​ ಪಠಾಣ್​​

ಭಾರತೀಯ ಆಟಗಾರರಲ್ಲಿ ಯೂಸುಫ್ ಪಠಾಣ್ ವೇಗದ ಶತದಕ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2010ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 213 ರನ್​ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿತ್ತು. ಆದರೆ, ರಾಜಸ್ಥಾನ್ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿ ಸೋತಿತು.

ಡೇವಿಡ್​ ಮಿಲ್ಲರ್​

2013ರ ಐಪಿಎಲ್ ಟೂರ್ನಿಯಲ್ಲಿ ಆರ್​ಸಿಬಿ ವಿರುದ್ಧ ಡೇವಿಡ್ ಮಿಲ್ಲರ್ ಕೇವಲ 38 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆರ್​ಸಿಬಿ ವಿರುದ್ಧ 191 ರನ್​​ಗಳ ಗುರಿ ಪಡೆದ ಪಂಜಾಬ್​ 9.5 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತ್ತು. ಮಿಲ್ಲರ್ ಅವರ ಅಮೋಘ ಆಟದ ನೆರವಿನಿಂದ ಪಂಜಾಬ್ 18 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಆ್ಯಡಂ ಗಿಲ್​ಕ್ರಿಸ್ಟ್​​

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಆಡಮ್ ಗಿಲ್​ಕ್ರಿಸ್ಟ್​​ 42 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಮುಂಬೈ ಇಂಡಿಯನ್ಸ್ 20 ಓವರ್​ 155 ರನ್​​ಗಳನ್ನು ಪೇರಿಸಿತ್ತು. ಡೆಕ್ಕನ್​ ಚಾರ್ಜರ್ಸ್​ ಪರ ಗಿಲ್ಕ್ರಿಸ್ಟ್ ಅಬ್ಬರಿಸಿದ ಕಾರಣ ಕೇವಲ 12 ಓವರ್​ಗಳಲ್ಲಿ ಪಂದ್ಯವನ್ನು ಗೆದ್ದಿತು. ಈ ಪಂದ್ಯವನ್ನು ಡಿಸಿ 10 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿತು.

ಎಬಿಡಿ ವಿಲಿಯರ್ಸ್​, ವಾರ್ನರ್​

ಎಬಿ ಡಿವಿಲಿಯರ್ಸ್ ಮತ್ತು ಡೇವಿಡ್ ವಾರ್ನರ್ ಕೇವಲ 43 ಎಸೆತಗಳಲ್ಲಿ ಶತಕಗಳೊಂದಿಗೆ ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟರ್​​ 52 ಎಸೆತಗಳಲ್ಲಿ 129 ರನ್ ಗಳಿಸಿದ್ದರು. ಡೇವಿಡ್ ವಾರ್ನರ್ ಕೇವಲ 59 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 126 ರನ್ ಗಳಿಸಿದದ್ದಾರೆ. ವಾರ್ನರ್​ ಆಟದಿಂದಾಗಿ 2017 ರಲ್ಲಿ ಕೆಕೆಆರ್ ವಿರುದ್ಧ ಎಸ್​ಎಚ್​ಆರ್​ 48 ರನ್​ಗಳಿಂದ ಗೆಲುವು ಪಡೆಯಿತು.

ಅತಿ ವೇಗದ ಶತಕ ಬಾರಿಸಿದವರ ವಿವರ ಇಲ್ಲಿದೆ

Exit mobile version