ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕಾರಿಗಳು ಐಪಿಎಲ್ನ ದ್ವಿತೀಯಾರ್ಧವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸಲಿದ್ದಾರೆ. ಮತದಾನ ಏಪ್ರಿಲ್ 19ರಿಂದ ಆರಂಭಗೊಂಡಂತೆ ಜೂನ್ 1ರ ತನಕ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು (IPL 2024) ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎಂದಿನಂತೆ ಯುಎಇಗೆ ವರ್ಗಾವಣೆಯಾಗಲಿದೆ.
ಏಪ್ರಿಲ್ 19ರಿಂದ ಚುನಾವಣೆ ಆರಂಭಗೊಂಡು ಏಳು ಹಂತದಲ್ಲಿ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇಡೀ ಪಂದ್ಯಾವಳಿಯನ್ನು ಭಾರತದಲ್ಲಿ ಆಯೋಜಿಸುವುದು ಕಷ್ಟಕರವಾಗಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಯುಎಇಗೆ ಸ್ಥಳಾಂತರಗೊಳ್ಳಲಿದೆ.
ವಿಶೇಷವೆಂದರೆ, 2014 ರ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಬಿಸಿಸಿಐ ಐಪಿಎಲ್ನ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸಿತು. ನಂತರ 2020ರಲ್ಲಿ, ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಇಡೀ ಪಂದ್ಯಾವಳಿಯನ್ನು ಅಲ್ಲೇ ಆಯೋಜಿಸಲಾಯಿತು. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲವಾದರೂ ಚುನಾವಣಾ ಆಯೋಗ ದಿನಾಂಕ ಪ್ರಕಟಗೊಳಿಸಿದ ಬಳಿಕ ಸ್ಥಳಾಂತರ ಖಾತರಿಯಾಗಿದೆ.
ವರದಿಗಳ ಪ್ರಕಾರ, ಐಪಿಎಲ್ ತಂಡಗಳು ತಮ್ಮ ಆಟಗಾರರಿಗೆ ತಮ್ಮ ಪಾಸ್ಪೋರ್ಟ್ಗಳನ್ನು ಸಲ್ಲಿಸುವಂತೆ ಕೇಳಿಕೊಂಡಿವೆ. ಮಾರ್ಚ್ 16 ರಂದು ಚುನಾವಣಾ ಆಯುಕ್ತರು ದಿನಾಂಕಗಳನ್ನು ಘೋಷಿಸುವ ಮೊದಲು ಬಿಸಿಸಿಐ ಎಲ್ಲಾ ಆಯ್ಕೆಗಳನ್ನು ತೆರೆದಿಟ್ಟಿದೆ. ಹೀಗಾಗಿ ಸ್ಥಳಾಂತರ ಬಹುತೇಕ ಖಚಿತಗೊಂಡಿದೆ.
ಇದನ್ನೂ ಓದಿ : IPL 2024 : ಐಪಿಎಲ್ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ಗಳನ್ನು ಬಾರಿಸಿದ ಆಟಗಾರರ ವಿವರ ಇಲ್ಲಿದೆ
ಭಾರತದ ಚುನಾವಣಾ ಆಯೋಗವು ಶನಿವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಬೇಕೇ ಎಂದು ಬಿಸಿಸಿಐ ನಿರ್ಧರಿಸಲಿದೆ. ಪ್ರಸ್ತುತ, ಐಪಿಎಲ್ ದ್ವಿತೀಯಾರ್ಧವನ್ನು ದುಬೈನಲ್ಲಿ ಆಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಸಿಸಿಐನ ಕೆಲವು ಉನ್ನತ ಅಧಿಕಾರಿಗಳು ದುಬೈಗೆ ತೆರಳಿದ್ದಾರೆ.
ಪೆಬ್ರವರಿ 22ರಂದು ಮೊದಲ ಪಟ್ಟಿ
ಐಪಿಎಲ್ ವೇಳಾಪಟ್ಟಿಯ ಮೊದಲಾರ್ಧವನ್ನು ಫೆಬ್ರವರಿ 22 ರಂದು ಘೋಷಿಸಲಾಯಿತು ಆದರೆ ಭಾರತದ ಚುನಾವಣಾ ಆಯೋಗವು ದಿನಾಂಕಗಳನ್ನು ಮೊದಲೇ ಘೋಷಿಸದ ಕಾರಣ ಬಿಸಿಸಿಐ ಮುಂದಿನ ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಾರ್ಚ್ 22 ರಂದು ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಮೊದಲ ಲೆಗ್ನ ಕೊನೆಯ ಪಂದ್ಯ ಏಪ್ರಿಲ್ 7 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.
ಜೂನ್ ಆರಂಭದಲ್ಲಿ ಟಿ20 ವಿಶ್ವ ಕಪ್ ನಡೆಯಲಿದೆ. ಅದಕ್ಕಿಂತ ಮೊದಲು ಐಪಿಎಲ್ ಮುಗಿಸಬೇಕಾಗಿದೆ. ಹೀಗಾಗಿ ಬಿಸಿಸಿಐ ಮೇ ತಿಂಗಳ ಮಧ್ಯದಲ್ಲಿ ಐಪಿಎಲ್ ಟೂರ್ನಿಯನ್ನು ವಿದೇಶಿ ನೆಲದಲ್ಲಿ ಮುಗಿಸಲಿದೆ.