ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ಹಲವಾರು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ಮತ್ತು ಉತ್ಸಾಹದ ಮೂಲವಾಗಿದೆ. ಅತ್ಯಂತ ರೋಮಾಂಚಕಾರಿ ಪಂದ್ಯಗಳು ಇಲ್ಲಿ ನಡೆದಿವೆ. ದೊಡ್ಡ ಸ್ಕೋರ್ಗಳು, ಬಿಗ್ ಹಿಟ್ಗಳು ಹಾಗೂ ಅಸಾಮಾನ್ಯ ಫಲಿತಾಂಶಾಗಳು ಐಪಿಎಲ್ನಲ್ಲಿ ಮೂಡಿ ಬಂದಿದೆ. ಐಪಿಎಲ್ನಲ್ಲಿ ಹಲವಾರು ದಾಖಲೆಗಳೂ ಸೃಷ್ಟಿಯಾಗಿವೆ. ಅವುಗಳು ವರ್ಷ ಕಳೆದಂತೆ ಅಳಿಸಿ ಹೋಗುತ್ತಿವೆ. ಇನ್ನೇನು 17ನೇ ಆವೃತ್ತಿಯ ಐಪಿಎಲ್ (IPL 2024 ) ಹತ್ತಿರ ಬರುತ್ತಿದ್ದು ಇದುವರೆಗೆ 16 ಆವೃತ್ತಿಗಳ ಐಪಿಎಲ್ನಲ್ಲಿ ದಾಖಲಾದ ಅತಿ ದೊಡ್ಡ ಅಂತರದ ಕೆಲವು ವಿಜಯಗಳನ್ನು ಇಲ್ಲಿ ವಿವರಿಸಲಾಗಿದೆ.
ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ; 2013ರಲ್ಲಿ 130 ರನ್
ಈ ಪಂದ್ಯವು ಐಪಿಎಲ್ ಸೇರಿದಂತೆ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ. ಕ್ರಿಸ್ ಗೇಲ್ 66 ಎಸೆತಗಳಲ್ಲಿ 17 ಸಿಕ್ಸರ್ ಮತ್ತು 13 ಬೌಂಡರಿಗಳ ಸಹಾಯದಿಂದ 175 ರನ್ ಗಳಿಸಿದ್ದು ಐಪಿಎಲ್ ಇತಿಹಾಸದ ಅತಿ ದೊಡ್ಡ ವೈಯಕ್ತಿಕ ಇನಿಂಗ್ಸ್. ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತು. ಪುಣೆ ತಂಡವು 9 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 130 ರನ್ಗಳಿಂದ ಸೋತಿತು.
ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ ಆರ್ಸಿಬಿ 2015ರಲ್ಲಿ 138 ರನ್
ಈ ಪಂದ್ಯವೂ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅವರ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಒಳಗೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಗೇಲ್ ಅವರ 117 ರನ್ಗಳ ಸಹಾಯದಿಂದ 3 ವಿಕೆಟ್ಗೆ 226 ರನ್ ಬಾರಿಸಿತು. ಇದರಲ್ಲಿ 12 ಸಿಕ್ಸರ್ಗಲು ಮತ್ತು 7 ಬೌಂಡರಿಗಳು ಸೇರಿಕೊಂಡಿವೆ. ಬಳಿಕ ಎಬಿ ಡಿವಿಲಿಯರ್ಸ್ ಕೇವಲ 24 ಎಸೆತಗಳಲ್ಲಿ 47 ರನ್ ಗಳಿಸಿದರು. ಗುರಿ ಬೆನ್ನತ್ತಿದ ಪಂಜಾಬ್ 13.4 ಓವರ್ಗಳಲ್ಲಿ 88 ರನ್ಗೆ ಆಲೌಟ್ ಆಗಿ 138 ರನ್ಗಳಿಂದ ಸೋಲು ಅನುಭವಿಸಿತು.
ಆರ್ಸಿಬಿ ವಿರುದ್ಧ ಕೆಕೆಆರ್ 2008ರಲ್ಲಿ 140 ರನ್
ಐಪಿಎಲ್ ಮೊದಲ ವರ್ಷದ ಉದ್ಘಾಟನಾ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ 73 ಎಸೆತಗಳಲ್ಲಿ 158 ರನ್ ಗಳಿಸುವ ಮೂಲಕ ಟೂರ್ನಿಗೆ ಅದ್ಭುತ ಆರಂಭ ತಂದುಕೊಟ್ಟಿದ್ದರು. ಮೊದಲ ಇನಿಂಗ್ಸ್ನಲ್ಲಿ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಆರ್ಸಿಬ ವಿರುದ್ಧ 140 ರನ್ಗಳ ವಿಜಯ ದಾಖಲಿಸಿತು.
ಗುಜರಾತ್ ವಿರುದ್ಧ ಅರ್ಸಿಬಿ 2016ರಲ್ಲಿ – 144 ರನ್
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಎಂಬ ಇಬ್ಬರು ಶ್ರೇಷ್ಠ ಕ್ರಿಕೆಟಿಗರು. ಅವರಿಬ್ಬರೂ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುನ್ನು ಕ್ರಿಕೆಟ್ ಅಭಿಮಾನಿಗಳು ಆನಂದಿಸಿದ ಹಲವಾರು ಉದಾಹರಣೆಗಳಿವೆ. ಅಂತೆಯೆ ಗುಜರಾತ್ ಲಯನ್ಸ್ ವಿರುದ್ಧ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸಿದರೆ, ಡಿ ವಿಲಿಯರ್ಸ್ ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದರು. 249 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 104 ರನ್ಗಳಿಗೆ ಆಲೌಟ್ ಆಗಿ 144 ರನ್ಗಳಿಂದ ಸೋಲನುಭವಿಸಿತು.
ಇದನ್ನೂ ಓದಿ : IPL 2024 : ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬಯಿ 2017ರಲ್ಲಿ – 146 ರನ್
2017ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕೇವಲ 66 ರನ್ಗಳಿಗೆ ಆಲೌಟ್ ಆಗಿ 146 ರನ್ಗಳಿಂದ ಸೋಲನುಭವಿಸಿತು. ಇದು ಐಪಿಎಲ್ ಇತಿಹಾಸದ ಅತಿ ಹೆಚ್ಚು ರನ್ ಅಂತರದ ಗೆಲುವು. ಬೌಲಿಂಗ್ ದಾಳಿಯಲ್ಲಿ ಹರ್ಭಜನ್ ಸಿಂಗ್ ಮತ್ತು ಕರಣ್ ಶರ್ಮಾ ತಲಾ 3 ವಿಕೆಟ್ ಪಡೆದರು.
ಐಪಿಎಲ್ ನಲ್ಲಿ ಅತಿ ದೊಡ್ಡ ಗೆಲುವು
- 2017 ವರ್ಷ, ಮುಂಬಯಿ (213 ರನ್) , ಡೆಲ್ಲಿ ಕ್ಯಾಪಿಟಲ್ಸ್ (146 ರನ್)
- 2016 ವರ್ಷ, ಆರ್ಸಿಬಿ(249 ರನ್- ಗುಜರಾತ್ ಲಯನ್ಸ್ (144 ರನ್ )
- 2008 ವರ್ಷ, ಕೆಕೆಆರ್ ( 223 ರನ್) ಆರ್ಸಿಬಿ (140 ರನ್)
- 2015 ವರ್ಷ, ಆರ್ಸಿಬಿ (227 ರನ್) ಪಿಬಿಕೆಎಸ್ (138 ರನ್)
- 2013 ವರ್ಷ, ಆರ್ಸಿಬಿ (264 ರನ್) ಪುಣೆ ವಾರಿಯರ್ಸ್(130 ರನ್)