Site icon Vistara News

IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

IPL 2024

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL 2024) 2024 ಫೈನಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024 ಫೈನಲ್ ನಡುವಿನ ಕೆಲವು ವಿಲಕ್ಷಣ ಹೋಲಿಕೆಗಳು ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಒಳಪಡಿಸಿವೆ. ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ (KKR) ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ 18.3 ಓವರ್​ಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡವನ್ನು 113 ರನ್​ ಗಳಿಗೆ ಆಲೌಟ್ ಮಾಡಿತ್ತು. ಏತನ್ಮಧ್ಯೆ, ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಕೂಡ ಮಾರ್ಚ್ 17 ರಂದು ಅಷ್ಟೇ ಓವರ್​​ಗಳಲ್ಲಿ ಡೆಲ್ಲಿ ತಂಡವನ್ನು ಅದೇ ಮೊತ್ತಕ್ಕೆ ಕಟ್ಟಿಹಾಕಿತ್ತು. ಇದು ಎರಡು ಫೈನಲ್ ಗಳ ನಡುವಿನ ಪ್ರಮುಖ ಹೋಲಿಕೆಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಬ್ಲ್ಯುಪಿಎಲ್​ ಮತ್ತು ಐಪಿಎಲ್​ನಲ್ಲಿ ಸೋತ ಎಸ್ಆರ್​ಎಚ್​ ಮತ್ತು ಡಿಸಿ ತಂಡ ನಾಯಕರು ಆಸ್ಟ್ರೇಲಿಯಾದ ಕ್ರಿಕೆಟಿಗರು. ಅವರೆಂದರೆ ಎಸ್​ಆರ್​ಎಚ್​ ತಂಡ ಪ್ಯಾಟ್​ ಕಮಿನ್ಸ್ ಮತ್ತು ಡಿಸಿ ಮಹಿಳಾ ತಂಡ ಮೆಗ್​ ಲ್ಯಾನಿಂಗ್. ಮುಂದುವರಿಂತೆ ಈ ಇಬ್ಬರೂ ಅದಕ್ಕಿಂತ ಹಿಂದೆ ಐಸಿಸಿ ಟೂರ್ನಿಗಳಲ್ಲಿ (ವಿಶ್ವ ಕಪ್​, ಟೆಸ್ಟ್ ಚಾಂಪಿಯನ್​ಷಿಪ್​​) ಭಾರತ ತಂಡವನ್ನು ಸೋಲಿಸಿದ್ದರು. ಕಮಿನ್ಸ್ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​​ನಲ್ಲಿ ಹಾಗೂ 2023 ರ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಭಾರತ ತಂಡವನ್ನು ಸೋಲಿಸಿದ್ದರು. ಲ್ಯಾನಿಂಗ್ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 2022 ರ ಟಿ 20 ಮಹಿಳಾ ವಿಶ್ವಕಪ್ ಫೈನಲ್ ಪ್ರಶಸ್ತಿಗೆ ಕೊಂಡೊಯ್ದಿದ್ದರು. ಅಲ್ಲಿ ಭಾರತ ಸೋತಿತ್ತು . ಇದೀಗ ಭಾರತೀಯ ನಾಯಕರು ಆ ಆಸ್ಟ್ರೇಲಿಯನ್ ಆಟಗಾರರ ನಾಯಕತ್ವದ ತಂಡವನ್ನು ಮಣಿಸಿದ್ದಾರೆ. ಶ್ರೇಯಸ್​ ಅಯ್ಯರ್​ ಪ್ಯಾಟ್​ ಕಮಿನ್ಸ್ ನೇತೃತ್ವದ ಎಸ್​ಆರ್​ಎಚ್​ ತಂಡವನ್ನು ಸೋಲಿಸಿದರೆ, ಸ್ಮೃತಿ ಮಂಧಾನ ಅವರು ಆರ್​ಸಿಬಿ ಮೂಲಕ ಮೆಗ್​ ಲ್ಯಾನಿಂಗ್ ಅವರನ್ನು ಮಣಿಸಿದ್ದರು.

ಕೆಕೆಆರ್ ಬೌಲರ್​ಗಳಿಗೆ ಭರ್ಜರಿ ಖಷಿ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್​ಪ್ಲೇನಲ್ಲಿ ತಲಾ ಮೂರು ಓವರ್​ಗಳನ್ನು ಎಸೆದು ಎಸ್​ಆರ್​ಎಚ್ ತಂಡ ಮೂರು ವಿಕೆಟ್​ಗಳನ್ನು ಪಡೆದರು. ಆರೆಂಜ್ ಆರ್ಮಿ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಆ್ಯಂಡ್ರೆ ರಸೆಲ್ 3 ವಿಕೆಟ್ ಕಿತ್ತರೆ, ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಉತ್ತರವಾಗಿ ಆಡಿದ ಕೆಕೆಆರ್ ಪರ ಸುನಿಲ್ ನರೈನ್ ಬೇಗನೆ ನಿರ್ಗಮಿಸಿದರು. ಆದರೆ ವೆಂಕಟೇಶ್ ಅಯ್ಯರ್ (26 ಎಸೆತಗಳಲ್ಲಿ 52* ರನ್) ಮತ್ತು ರಹಮಾನುಲ್ಲಾ ಗುರ್ಬಾಜ್ (32 ಎಸೆತಗಳಲ್ಲಿ 39 ರನ್) 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ನೀಡಿದರು. ನಂತರ, ಶ್ರೇಯಸ್ ಅಯ್ಯರ್ ಮಧ್ಯದಲ್ಲಿ ವೆಂಕಟೇಶ್ ಅವರೊಂದಿಗೆ ಸೇರಿಕೊಂಡರು ಪಂದ್ಯವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಕೆಕೆಆರ್ 57 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Exit mobile version