ಬೆಂಗಳೂರು: ಐಪಿಎಲ್ 2024ರ (IPL 2024 ) ಅತ್ಯಂತ ರೋಚಕ ಪಂದ್ಯವಾಗಿರುವ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಕದನದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೈದರಾಬಾದ್ ತಂಡದ ಮಾಜಿ ಮುಖ್ಯ ಕೋಚ್ ಬ್ರಿಯಾನ್ ಲಾರಾ (Brian Lara) ಊಹಿಸಿದ್ದಾರೆ. ಅವರು ಆರ್ಸಿಬಿಗೆ ಬೆಂಬಲ ವ್ಯಕ್ತಪಡಿಸಿದ್ದು ರಿವರ್ಸ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಮಿಂಚಲಿರುವ ಆರ್ಸಿಬಿ ಪ್ಲೇಆಫ್ಗೇರಲಿದೆ ಎಂದು ಹೇಳಿದ್ದಾರೆ.
ಐಪಿಎಲ್ 2024 ರ ಕೊನೆಯ ಲೀಗ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅತಿಥ್ಯ ನೀಡಲಿದೆ. ನಾಳೆ ರಾತ್ರಿ ಗೆಲುವಿನೊಂದಿಗೆ ಕೊನೆಯ 4 ರ ಪಟ್ಟಿಗೆ ಪ್ರವೇಶ ಪಡೆಯಲು ಕಾಯುತ್ತಿದೆ. ಪ್ಲೇಆಫ್ಗೆ ಎರಡೂ ತಂಡಗಳಿಗೆ ಅವಕಾಶ ಇರುವುದರಿಂದ ಈ ಪಂದ್ಯದಲ್ಲಿ ನಿರೀಕ್ಷೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಇದಕ್ಕೂ ಮುನ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಸಿಎಸ್ಕೆ ಗೆಲುವು ಸಾಧಿಸಿತ್ತು. ಆದಾಗ್ಯೂ, ಶನಿವಾರದ ರಿವರ್ಸ್ ಪಂದ್ಯದಲ್ಲಿ ಬೆಂಗಳೂರು ತಂಡ ವಿಭಿನ್ನ ಮನಸ್ಥಿತಿ ಮತ್ತು ಕಳೆದ 5 ಪಂದ್ಯಗಳ ಉಜ್ವಲ ಫಾರ್ಮ್ನೊಂದಿಗೆ ಆಡಲಿದೆ.
ಲಾರಾ ಅಭಿಮತನವೇನು?
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಬ್ರಿಯಾನ್ ಲಾರಾ ಪಂದ್ಯದ ಫಲಿತಾಂಶದ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ಲಾರಾ ಬೆಂಗಳೂರು ಮೂಲದ ಫ್ರಾಂಚೈಸಿಯನ್ನು ಬೆಂಬಲಿಸಿದ್ದಾರೆ. ಸೂಪರ್ ಕಿಂಗ್ಸ್ಗೆ ಪ್ಲೇ ಆಫ್ ಸ್ಥಾನ ನಿರಾಕರಿಸಲು ಆರ್ಸಿಬಿ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ
ಋತುವಿನ ದ್ವಿತೀಯಾರ್ಧ ಪ್ರಾರಂಭವಾದಾಗಿನಿಂದ ಆರ್ಸಿಬಿ ಸಂಪೂರ್ಣವಾಗಿ ವಿಭಿನ್ನ ತಂಡವಾಗಿ ಕಾಣುತ್ತಿದೆ ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ. ಬೆಂಗಳೂರು ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ಕಾರಣ ಅವರು ಪ್ರಶಸ್ತಿ ಗೆಲ್ಲಲು ಹಸಿದಿದ್ದಾರೆ ಎಂದು ಲಾರಾ ಹೇಳಿದ್ದಾರೆ. ಈ ಪಂದ್ಯವು ಪ್ಲೇಆಫ್ ತಲುಪಲು ಅವರಿಗೆ ಸಹಾಯ ಮಾಡಲಿದೆ. ಹೀಗಾಗಿ ಪಂದ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಸಿಎಸ್ಕೆ ವಿರುದ್ಧದ ಪಂದ್ಯವು ಆರ್ಸಿಸಿ ತಮ್ಮ ರೆಡ್-ಹಾಟ್ ಫಾರ್ಮ್ ಅನ್ನು ಮುಂದುವರಿಸಲು ಉತ್ತಮ ಅವಕಾಶವಾಗಿದೆ ಎಂದು ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಮತ್ತು ಕೆಲವು ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬೆಂಗಳೂರು ಸಿಎಸ್ಕೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಅವರು ಹೇಳಿದ್ದಾರೆ.
“ಆರ್ಸಿಬಿ ಎಂದಿಗೂ ಐಪಿಎಲ್ ಗೆದ್ದಿಲ್ಲ ಮತ್ತು ಅದನ್ನು ಗೆಲ್ಲಲು ಅವರು ಹಸಿದಿದ್ದಾರೆ. ಈ ಪಂದ್ಯವು ಪ್ಲೇಆಫ್ ತಲುಪಲು ಅವರಿಗೆ ಸಹಾಯ ಮಾಡುತ್ತದೆ. ಇದು ಉತ್ತಮ ಅವಕಾಶ, ತಂಡದ ಫಾರ್ಮ್ ಉತ್ತಮವಾಗಿದೆ, ಗೆಲುವಿನ ಹಸಿವು ಇದೆ. ಡು ಪ್ಲೆಸಿಸ್, ಸಿರಾಜ್ ಮತ್ತು ವಿರಾಟ್ ಅವರಂತಹ ಹಿರಿಯ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಲಾರಾ ಸ್ಟಾರ್ ಸ್ಪೋರ್ಟ್ಸ್ ಮೂಲಕ ಹೇಳಿದರು.
ದೊಡ್ಡ ಅಂತರದ ಗೆಲುವು ಸಾಧಿಸಬೇಕು
ಪ್ಲೇ ಆಫ್ಗೆ ಅರ್ಹತೆ ಪಡೆಯಲು ಆರ್ಸಿಬಿಗೆ ಇರುವ ಏಕೈಕ ಮಾರ್ಗವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವುದು. ಫಾಫ್ ಡು ಪ್ಲೆಸಿಸ್ ಪಡೆ 2ನೇ ಇನ್ನಿಂಗ್ಸ್ನ್ಲಿ ಸಿಎಸ್ಕೆ ತಂಡವನ್ನು 18 ರನ್ಗಳಿಂದ ಸೋಲಿಸಬೇಕು ಮತ್ತು ಮೊತ್ತವನ್ನು ಬೆನ್ನಟ್ಟಬೇಕಾದರೆ ಅವರು ಪಂದ್ಯವನ್ನು 18.1 ಓವರ್ಗಳಲ್ಲಿ ಗುರಿ ಮುಟ್ಟಬೇಕು.
ಆ ಸಂದರ್ಭದಲ್ಲಿ, ಬೆಂಗಳೂರಿನ ನೆಟ್ ರನ್ ರೇಟ್ ಸುಧಾರಿಸುತ್ತದೆ ಮತ್ತು ಅವರು ಸಿಎಸ್ಕೆ ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಹಿಂದಿಕ್ಕಿ ಕೊನೆಯ ಹಂತಕ್ಕೆ ಅರ್ಹತೆ ಪಡೆಯುತ್ತಾರೆ.