ಚೆನ್ನೈ: ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಐಪಿಎಲ್ 17ನೇ ಆವೃತ್ತಿಯ (IPL 2024) 7ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans ) ವಿರುದ್ಧ 63 ರನ್ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ನರು ಸತತವಾಗಿ ಎರಡನೇ ವಿಜಯವನ್ನು ತನ್ನದಾಗಿಸಿಕೊಂಡಿದ್ದಾರೆ. ಶಿವಂ ದುಬೆ (23 ಎಸೆಕ್ಕೆ 52 ರನ್) ಅರ್ಧ ಶತಕದೊಂದಿಗೆ ಮಿಂಚಿದರು ಹಾಗೂ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
Now Ajinkya Rahane takes a splendid running catch! 🔥
— IndianPremierLeague (@IPL) March 26, 2024
There's no escape for the ball with @ChennaiIPL's current fielding display 😎
Head to @JioCinema and @StarSportsIndia to watch the match LIVE#TATAIPL | #CSKvGT | @ajinkyarahane88 pic.twitter.com/fu6Irj1WDG
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ತನ್ನೆಲ್ಲಾ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 143 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Shubman Gill : ರೋಹಿತ್ ರೀತಿಯಲ್ಲೇ ಟಾಸ್ ವೇಳೆ ತಪ್ಪು ಮಾಡಿದ ಶುಬ್ಮನ್ ಗಿಲ್
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ಗುಜರಾತ್ ತಂಡ ಹೆಚ್ಚು ದಿಟ್ಟತನ ತೋರಲಿಲ್ಲ. ಚೆನ್ನೈನ ಸಂಘಟಿತ ಬೌಲಿಂಗ್ ಸಾಮರ್ಥ್ಯಕ್ಕೆ ಬೆದರಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 21 ರನ್ ಬಾರಿಸಿದರೆ, ಶುಬ್ಮನ್ ಗಿಲ್ ಮತ್ತೊಮ್ಮೆ ವೈಫಲ್ ಎದುರಿಸಿ 8 ರನ್ಗೆ ಔಟಾದರು. ಸಾಯಿ ಸುದರ್ಶನ್ 37 ರನ್ ಬಾರಿಸಿದರು. ವಿಜಯ ಶಂಕರ್ 12 ರನ್ ಬಾರಿಸಿ ಧೋನಿ ಹಿಡಿದ ಅದ್ಬುತ ಕ್ಯಾಚ್ಗೆ ಬಲಿಯಾದರು. ಒಮರ್ಜೈ ಕೊಡುಗೆ 11 ರನ್.
𝗩𝗶𝗻𝘁𝗮𝗴𝗲 𝗠𝗦𝗗 😎
— IndianPremierLeague (@IPL) March 26, 2024
An excellent diving grab behind the stumps and the home crowd erupts in joy💛
Head to @JioCinema and @StarSportsIndia to watch the match LIVE#TATAIPL | #CSKvGT pic.twitter.com/n5AlXAw9Zg
ಭರ್ಜರಿ ಬ್ಯಾಟಿಂಗ್ ಮಾಡಿದ ಚೆನ್ನೈ
ಟಾಸ್ ಸೋತು ಮೊದಲು ಮೊದಲು ಬ್ಯಾಟ್ ಮಾಡಿದ ಚೆನ್ನೈಉತ್ತಮ ಆರಂಭವನ್ನೇ ಪಡೆಯಿತು. ನ್ಯೂಜಿಲ್ಯಾಂಡ್ ಎಡಗೈ ಆಟಗಾರ ರಚಿನ್ ರವೀಂದ್ರ 20 ಎಸೆತಗಳಲ್ಲಿ 47 ರನ್ ಬಾರಿಸಿ ಚೆನ್ನೈ ಅಭಿಮಾನಿಗಳ ಮನ ಸೆಳೆದರು. ಮತ್ತೊಬ್ಬ ಆರಂಭಿಕ ಆಟಗಾರ ಹಾಗೂ ನಾಯಕ ಋತುರಾಜ್ ಕೂಡ 46 ರನ್ ಬಾರಿಸಿದರು. ಮೊದಲ ವಿಕೆಟ್ಗೆ 62 ರನ್ ಬಾರಿಸಿ ಚೆನ್ನೈ ಅಜಿಂಕ್ಯ ರಹಾನೆ ಅವರನ್ನು 12 ರನ್ಗಳಿಗೆ ಕಳೆದುಕೊಳ್ಳುವ ಮೂಲಕ ಬೇಸರಕ್ಕೆ ಒಳಗಾಯಿತು.
ದುಬೆ ಅರ್ಧ ಶತಕ
ಮುಂಬಡ್ತಿ ಪಡೆದು ಬ್ಯಾಟ್ ಮಾಡಲು ಬಂದ ಎಡಗೈ ಬ್ಯಾಟರ್ ಶಿವಂ ದುಬೆ ಮತ್ತೊಮ್ಮೆ ಮಿಂಚಿದರು. ಚೆನ್ನೈ ಸ್ಟೇಡಿಯಮ್ನ ಎಲ್ಲ ಕಡೆಗೆ ಬೌಂಡರಿ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಗಮನ ಸೆಳದರು. ಅವರು ಔಟಾಗುವ ಮೊದಲು 23 ಎಸೆತಗಳಿಗೆ 51 ರನ್ ಬಾರಿಸಿದರು. ಅವರ ಅಬ್ಬರದಿಂದಾಗಿ ಚೆನ್ನೈ ಸ್ಕೋರ್ ಬೋರ್ಡ್ ಬೆಳೆಯಿತು. ಇದು ಹಾಲಿ ಆವೃತ್ತಿಯ ದುಬೆ ಪಾಲಿನ ಸತತ ಎರಡು ಅರ್ಧ ಶತಕ. ಈ ಮೂಲಕ ಅವರು ಮುಂಬರುವ ಟಿ20 ವಿಶ್ವ ಕಪ್ ತಂಡದ ಬಾಗಿಲು ಬಡಿದರು.
ಡ್ಯಾರಿಲ್ ಮಿಚೆಲ್ 20 ಎಸೆತಕ್ಕೆ 24 ರನ್ ಬಾರಿಸಿದರೆ, ಯುವ ಬ್ಯಾಟರ್ ಸಮೀರ್ ರಿಜ್ವಿ 6 ಎಸೆತಕ್ಕೆ 14 ರನ್ ಬಾರಿಸಿ ಗಮನ ಸೆಳೆದರು.