Site icon Vistara News

IPL 2024 : ಚೆನ್ನೈನಲ್ಲಿ ಫೈನಲ್​, ಐಪಿಎಲ್​ನ ಪೂರ್ಣ ವೇಳಾಪಟ್ಟಿ ಬಿಡುಗಡೆ

Cricket News

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಪ್ಲೇಆಫ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೈನಲ್​ ಚೆನ್ನೈನಲ್ಲಿ (Chennai) ನಡೆಯಿದೆ. ಅದಕ್ಕಿಂತಲೂ ಮುಖ್ಯವಾಗಿ ಎರಡನೇ ಹಂತದ ಐಪಿಎಲ್​ ಭಾರತದಿಂದ ಹೊರಕ್ಕೆ ಹೋಗುತ್ತದೆ ಹಾಗೂ ಯುಎಇನಲ್ಲಿ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಮಾರ್ಚ್​ 22ರಿಂದ ಎರಡನೇ ಹಂತದ ಟೂರ್ನಿ ಆರಂಭಗೊಳ್ಳಲಿದ್ದು, ಮೇ 26ಕ್ಕೆ ಫೈನಲ್​ ಪಂದ್ಯ ನಡೆಯಲಿದೆ.

ಐಪಿಎಲ್ 2024 ರ ಮೊದಲ ಎರಡು ವಾರಗಳ (21 ಪಂದ್ಯಗಳು) ವೇಳಾಪಟ್ಟಿಯನ್ನು ಬಿಸಿಸಿಐ ಈ ಹಿಂದೆ ಬಿಡುಗಡೆ ಮಾಡಿತ್ತು. ದೇಶಾದ್ಯಂತ ಮುಂಬರುವ ಲೋಕಸಭಾ ಚುನಾವಣೆಗೆ ಮತದಾನದ ದಿನಾಂಕಗಳು ಮತ್ತು ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಉದ್ಘಾಟನಾ ಪಂದ್ಯದಂತೆ ಕ್ವಾಲಿಫೈಯರ್ 2 ಹಾಗೂ ಗ್ರ್ಯಾಂಡ್ ಫೈನಲ್ ಪಂದ್ಯಗಳು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತವರು ನೆಲದಲ್ಲಿ ನಡೆಯಲಿವೆ. ಕ್ವಾಲಿಫೈಯರ್ 1 ರಲ್ಲಿ ಸೋತವರು ಮತ್ತು ಎಲಿಮಿನೇಟರ್ ವಿಜೇತರ ನಡುವೆ ಕ್ವಾಲಿಫೈಯರ್ 2 ಮೇ 24 ರ ಶುಕ್ರವಾರ ನಡೆಯಲಿದ್ದು, ನಂತರ ಮೇ 26 ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ವಿಶಾಖಪಟ್ಟಣಂನಲ್ಲಿ ಮೊದಲ ಎರಡು ತವರು ಪಂದ್ಯಗಳನ್ನು ಆಡಲು ಆಯ್ಕೆ ಮಾಡಿಕೊಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಉಳಿದ ಐದು ತವರು ಪಂದ್ಯಗಳನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದೆ.

ಮುಲ್ಲಾನ್ಪುರದ ಪಿಸಿಎ ನ್ಯೂ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ಋತುವನ್ನು ಪ್ರಾರಂಭಿಸಿದ ಪಂಜಾಬ್ ಕಿಂಗ್ಸ್, ಧರ್ಮಶಾಲಾದಲ್ಲಿ ತಮ್ಮ ತವರು ಅಭಿಯಾನವನ್ನು ಕೊನೆಗೊಳಿಸಲಿದೆ. ಅದೇ ರೀತಿ ಮೇ 5 ಮತ್ತು 9 ರಂದು ಕ್ರಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ : IPL 2024 : ಐಪಿಎಲ್​ ಮ್ಯಾಚ್​ ಇದೆ, ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಬೇಡಿ, ಹೋಗಬೇಡಿ

ರಾಜಸ್ಥಾನ್ ರಾಯಲ್ಸ್ ಕೂಡ ಗುವಾಹಟಿಯನ್ನು ತನ್ನ ಎರಡನೇ ತವರು ತಾಣವಾಗಿ ಆಯ್ಕೆ ಮಾಡಿಕೊಂಡಿದೆ ಮತ್ತು ಅಸ್ಸಾಂನಲ್ಲಿ ತನ್ನ ಕೊನೆಯ ಎರಡು ತವರು ಪಂದ್ಯಗಳನ್ನು ಆಡಲಿದೆ. ಮೇ 15 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದ್ದು, ನಂತರ ಮೇ 19 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.

Exit mobile version