Site icon Vistara News

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

IPL 2024

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಾಹರ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಐಪಿಎಲ್ 2024 ರ (IPL 2024) ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್​ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನಲ್ಲಿ ನಡೆದ ಋತುವಿನ ಆರಂಭಿಕ ಪಂದ್ಯದಲ್ಲಿ ಕೊನೆಯ ಬಾರಿಗೆ ಭೇಟಿಯಾದ ಎರಡು ದಕ್ಷಿಣ ಭಾರತದ ಫ್ರಾಂಚೈಸಿಗಳ ನಡುವಿನ ರಿವರ್ಸ್ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ದೀಪಕ್ ಚಾಹರ್ 37 ರನ್ ನೀಡಿ ಗ್ಲೆನ್ ಮ್ಯಾಕ್ಸ್​ವೆಲ್​ ವಿಕೆಟ್ ಪಡೆದಿದ್ದರು.

ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

ಮೇ 1 ರಂದು ಐಪಿಎಲ್ 2024 ರ 49 ನೇ ಪಂದ್ಯಕ್ಕಾಗಿ ಚೆಪಾಕ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೂಪರ್ ಕಿಂಗ್ಸ್ ತಂಡ ಆತಿಥ್ಯ ನೀಡಿದಾಗ ದೀಪಕ್ ಚಾಹರ್​​ ಪೂರ್ತಿ ಸ್ಪೆಲ್​ ಎಸೆಯಲು ವಿಫಲಗೊಂಡಿದ್ದರು. ಅವರು ಗಾಯದಿಂದಾಗಿ ಪೆವಿಲಿಯನ್​ಗೆ ಮರಳಿದ್ದರು.

163 ರನ್​ಗಳ ಗುರಿ ಬೆನ್ನಟ್ಟಿ ಚೆನ್ನೈ ತಂಡಕ್ಕೆ ಸ್ಯಾಮ್ ಕರ್ರನ್ ಪಡೆ 162 ರನ್ಗಳ ಗುರಿ ನೀಡಿತ್ತು. ಗುರಿ ಕಡಿಮೆ ಇತ್ತು. ಹೀಗಾಗಿ ಬೌಲರ್​ಗಳ ನೆರವು ಅಗತ್ಯವಾಗಿತ್ತು. ಆದಾಗ್ಯೂ, ಪಂದ್ಯದ ಮೊದಲ ಓವರ್​ನಲ್ಲಿ ದೀಪಕ್ ಚಹರ್ ಕೇವಲ 2 ಎಸೆತಗಳನ್ನು ಎಸೆದ ನಂತರ ನೋವಿನಿಂದ ಮೈದಾನದಿಂದ ಹೊರನಡೆದಾಗ ಆತಿಥೇಯರಿಗೆ ದೊಡ್ಡ ಹೊಡೆತ ಸಿಕ್ಕಂತಾಯಿತು.

ಇದನ್ನೂ ಓದಿ: IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ದೀಪಕ್ ಚಹರ್ ಮೈದಾನದಿಂದ ನಿರ್ಗಮಿಸಿದ ನಂತರ, ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕವು 113 ರನ್ ಗಳಿಸಿದ ನಂತರ ಕ್ರೀಸ್ ನಿಂದ ನಿರ್ಗಮಿಸಿತು. 4 ಮತ್ತು 5ನೇ ಕ್ರಮಾಂಕದ ಬ್ಯಾಟರ್​ಗಳಾದ ಶಶಾಂಕ್ ಸಿಂಗ್ ಮತ್ತು ಸ್ಯಾಮ್ ಕರ್ರನ್ ತಮ್ಮ ಜೊತೆಯಾಟದ ಮೂಲಕ ಪಂಜಾಬ್ ತಂಡವನ್ನು ಗೆಲುವು ಕಂಡಿತು.

ಗಾಯದ ಆತಂಕ

ಪಂದ್ಯದ ನಂತರ, ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಚಾಹರ್ ಅವರ ಗಾಯದ ಬಗ್ಗೆ ಹೀಗೆ ಹೇಳಿದ್ದರು, ದೀಪಕ್ ಚಹರ್ ಉತ್ತಮವಾಗಿ ಕಾಣುತ್ತಿಲ್ಲ. ಆದ್ದರಿಂದ, ಫಿಸಿಯೋ ಮತ್ತು ವೈದ್ಯರು ನೋಡಿದಾಗ ಹೆಚ್ಚು ಸಕಾರಾತ್ಮಕ ವರದಿಯನ್ನು ನಾನು ಆಶಿಸುತ್ತೇನೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ಸಿಎಸ್​ಕೆ ತಂಡದ ಅಭ್ಯಾಸದ ಸಮಯದಲ್ಲಿ, ದೀಪಕ್ ಚಹರ್ ಪೂರ್ಣ ತೀವ್ರತೆಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದು ವೇಗಿ ಆರ್​ಸಿಬಿ ವಿರುದ್ಧ ಆಡಲು ಫಿಟ್ ಆಗಿದ್ದಾರೆ ಎಂದು ಸೂಚಿಸುತ್ತದೆ. ಅವರು ನೇರವಾಗಿ ಪ್ಲೇಯಿಂಗ್ ಇಲೆವೆನ್​ಗೆ ಬರುತ್ತಾರೆಯೇ ಅಥವಾ ಇಂಪ್ಯಾಕ್ಟ್​ ಪ್ಲೇಯರ್​ ಆಗಿರುತ್ತಾರೆಯೇ ನೋಡಬೇಕಾಗಿದೆ.

Exit mobile version