Site icon Vistara News

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

IPL 2024

ನವ ದೆಹಲಿ : ಜಿದ್ದಾಜಿದ್ದಿನಿಂದ ಕೂಡಿದ್ದ ಐಪಿಎಲ್​ 17ನೇ ಆವೃತ್ತಿಯ (IPL 2024) 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ 20 ರನ್​ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಆಟಗಾರರು ಗೆಲುವು ತಮ್ಮದಾಗಿಸಿಕೊಂಡು. ಇದು ಡೆಲ್ಲಿ ತಂಡದಕ್ಕೆ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6ನೇ ಗೆಲುವಾಗಿದೆ. 12 ಅಂಕಗಳನ್ನು ಸಂಪಾದಿಸಿರುವ ರಿಷಭ್​ ಪಂತ್ ಬಳಗ ಲಕ್ನೊ ಸೂಪರ್ ಜೈಂಟ್ಸ್​ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಅತ್ತ ರಾಜಸ್ಥಾನ್ ತಂಡ ಆಡಿರುವ 11 ಪಂದ್ಯಗಳಲ್ಲಿ 3ನೇ ಸೋಲಿಗೆ ಒಳಗಾಯಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಬಿಟ್ಟುಕೊಟ್ಟಿಲ್ಲ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಸಂಜು ಹೋರಾಟ ವ್ಯರ್ಥ

ಸಂಜು ಸ್ಯಾಮ್ಸನ್​ 46 ಎಸೆತಕ್ಕೆ 86 ರನ್ ಬಾರಿಸಿದ್ದ ತನಕ ಪಂದ್ಯ ರಾಜಸ್ಥಾನ್ ತಂಡದ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನಗೊಳ್ಳುತ್ತಿದ್ದಂತೆ ಏಕಾಏಕಿ ಕುಸಿತ ಕಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೋಲಿಗೆ ಸಿಲುಕಿತು. ಕುಲ್ದೀಪ್​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಏತನ್ಮಧ್ಯೆ ಸಂಜು ಸ್ಯಾಮ್ಸನ್​ ವಿಕೆಟ್ ವಿವಾದಾತ್ಮಕ ವಿಕೆಟ್ ಆಗಿ ಪರಿವರ್ತನೆಗೊಂಡಿತು. ಮುಖೇಶ್ ಕುಮಾರ್​ ಎಸೆತವನ್ನು ಸಂಜು ಬೌಂಡರಿ ಲೈನ್ ಮೇಲೆ ಹೊಡೆಯಲು ಯತ್ನಿಸಿದ್ದರು. ಆದರೆ, ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಶಾಯ್​ ಹೋಪ್ ಕ್ಯಾಚ್ ನೀಡಿದರು. ಥರ್ಡ್​ ಅಂಪೈರ್ ಅದನ್ನು ಮರುಪರಿಶೀಲಿಸಿ ಔಟ್​ ನೀಡಿದರು. ಆದರೆ, ಸಂಜು ಸ್ಯಾಮ್ಸನ್​ ಫೀಲ್ಡರ್ ಕಾಲು ಬೌಂಡರಿ ಲೈನ್​ಗೆ ತಾಗಿದೆ ಎಂದು ಅಂಪೈರ್​ಗಳ ಜತೆ ವಾದ ಮಾಡಿದರು.

ರಾಜಸ್ಥಾನ್ ರಾಯಲ್ಸ್​ ಗುರಿ ಬೆನ್ನಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್​ 4 ರನ್​ಗೆ ಔಟಾದರೆ ಜೋಸ್ ಬಟ್ಲರ್​ 19 ರನ್ ಬಾರಿಸಿದರು. ರಿಯಾನ್ ಪರಾಗ್​ 27 ಹಾಗೂ ಶುಭಂ ದುಬೆ 25 ರನ್ ಬಾರಿಸಿ ಗೆಲುವಿನ ಕನಸು ಬಿತ್ತಿದರು. ಆದರೆ, ಕೊನೇ ಹಂತದಲ್ಲಿ ಡೆಲ್ಲಿ ಬೌಲರ್​ಗಳು ಗೆಲುವಿನ ಅವಕಾಶವನ್ನು ತಮ್ಮದಾಗಿಸಿಕೊಂಡರು.

ಉತ್ತಮ ಆರಂಭ

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಆರ್​ ಅಶ್ವಿನ್​ 24 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಉರುಳಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

Exit mobile version