Site icon Vistara News

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

IPL 2024

ಅಹಮದಾಬಾದ್ : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಿನ ಐಪಿಎಲ್ 2024 ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಎಲ್​ಬಿಡಬ್ಲ್ಯು ಡಿಆರ್​ಎಷ್​ ಪರಿಶೀಲೆನ ವಿವಾದಕ್ಕೆ ಕಾರಣವಾಯಿತು. ಆರ್​ಸಿಬಿ ಇನ್ನಿಂಗ್ಸ್​ನ 15 ನೇ ಓವರ್​ನಲ್ಲಿ ಕಾರ್ತಿಕ್ ಎದುರಿಸಿದ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯು ಔಟ್​ ನೀಡಲಾಯಿತು. ಪರಿಶೀಲನೆಯ ನಂತರ ಮೂರನೇ ಅಂಪೈರ್ ನಿರ್ಧಾರವನ್ನು ಬದಲಿಸುವಂತೆ ಫೀಲ್ಡ್​ ಅಂಪೈರ್​ಗೆ ಸೂಚಿಸಿದರು. ಅವೇಶ್ ಖಾನ್​ಗೆ ಮತ್ತೊಂದು ವಿಕೆಟ್ ನೀಡಲು ನಿರಾಕರಿಸಿದರು. ಥರ್ಡ್ ಅಂಪೈರ್ ಅನಿಲ್ ಚೌಧರಿ ಅವರ ನಿರ್ಧಾರವು ವೀಕ್ಷಕ ವಿವರಣೆಗಾರರಾದ ಸುನಿಲ್ ಗವಾಸ್ಕರ್ ಮತ್ತು ರವಿ ಶಾಸ್ತ್ರಿ ಸೇರಿದಂತೆ ಹಲವರಿಗೆ ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿತು.

ಆನ್-ಫೀಲ್ಡ್ ಅಂಪೈರ್​ ನೀಡಿದ ಎಲ್ಬಿಡಬ್ಲ್ಯು ಕರೆಯನ್ನು ಪರಿಶೀಲಿಸಲು ಪಾಲುದಾರ ಮಹಿಪಾಲ್ ಲೊಮ್ರೊರ್ ಮನವೊಲಿಸಬೇಕಾಗಿ ಬಂದಿತ್ತು. ಹೀಗಾಗಿ ದಿನೇಶ್ ಕಾರ್ತಿಕ್​ಗೆ ತಾವು ಔಟ್ ಆಗಿರುವುದು ಮನವರಿಕೆಯಾಯಿತು. ಹಿಂದಿನ ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದ್ದ ಅವೇಶ್ ಖಾನ್ ಖುಷಿಯಲ್ಲಿದ್ದರು.

ದಿನೇಶ್ ಕಾರ್ತಿಕ್ ವಿಮರ್ಶೆ ತೆಗೆದುಕೊಂಡ ನಂತರ, ಮೂರನೇ ಅಂಪೈರ್ ಎಸೆತದ ರಿಪ್ಲೇ ನೋಡಿದರು. ಈ ನಿರ್ಧಾರವು ಬರಿಗಣ್ಣಿಗೆ ಪ್ಲಮ್ ಆಗಿ ಕಂಡರೂ, ಅಲ್ಟ್ರಾ-ಎಡ್ಜ್ ತಂತ್ರಜ್ಞಾನವು ಚೆಂಡು ಬ್ಯಾಟ್ ಅನ್ನು ದಾಟುವಾಗ ಸ್ಪೈಕ್ ಅನ್ನು ತೋರಿಸಿರು. ಅದೇ ಸಮಯದಲ್ಲಿ, ಬ್ಯಾಟ್ ಕೂಡ ಪ್ಯಾಡ್​ಗೆ ಬಡಿದಿತ್ತು. ಆದಾಗ್ಯೂ, ಮೂರನೇ ಅಂಪೈರ್ ಹೆಚ್ಚಿನ ರಿಪ್ಲೇಗಳನ್ನು ನೋಡದೆ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡರು.

ಇದನ್ನೂ ಓದಿ: Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

ಮೂರನೇ ಅಂಪೈರ್ ಅವರು ಅಲ್ಟ್ರಾ-ಎಡ್ಜ್ ಮೂಲಕ ಚೆಂಡು ಹೊಡೆದಿದೆ ಎಂದು ಹೇಳಿದ್ದರು. ಒಂದು ವೇಳೆ ಬ್ಯಾಟ್​​ ಪ್ಯಾಡ್​ಗೆ ಬಡಿಯುವಾಗ ಸದ್ದು ಬಂದಿರಬಹುದು ಎಂಬುದು ಕೆಲವರ ವಾದವಾಗಿತ್ತು. ಅದರಿಂದ ಸ್ಪೈಕ್ ಸಾಧ್ಯತೆಯನ್ನು ಅನಿಲ್ ಚೌಧರಿ ಏಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಭಿಪ್ರಾಯವೇನು?

ಅನಿಲ್ ಚೌಧರಿ ಅವರ ನಿರ್ಧಾರವನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆಘಾತಕಾರಿ ಎಂದರು. “ಇದಕ್ಕೆ ಒಂದು ಪದವಿದ್ದರೆ ಅದು ಸಂಪೂರ್ಣ ಆಘಾತಕಾರಿ” ಎಂದು ಶಾಸ್ತ್ರಿ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಬ್ಯಾಟ್ ಪ್ಯಾಡ್ಗೆ ಹೊಡೆಯುವುದನ್ನು ಸ್ಪಷ್ಟವಾಗಿ ನೋಡಿದ್ದೇನೆ ಮತ್ತು ಚೆಂಡಿನೊಂದಿಗೆ ಬ್ಯಾಟ್​ಗೆ ಯಾವುದೇ ಸಂಪರ್ಕ ಆಗಿಲ್ಲ ಎಂದು ಲೆಜೆಂಡರಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅನಿಲ್ ಚೌಧರಿ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ರಾಜಸ್ಥಾನದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ನಿರ್ಧಾರದಿಂದ ನಿರಾಶೆಗೊಂಡಿದ್ದರು. ನಿರ್ಧಾರ ತೆಗೆದುಕೊಂಡ ನಂತರ ಅವರು ಸ್ಥಳದಲ್ಲಿ ಪಂದ್ಯದ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.

Exit mobile version