ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ಪರ 900 ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಎಂಬ ಐತಿಹಾಸಿಕ ದಾಖಲೆಯನ್ನು ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಸಾಧಿಸಿದ್ದಾರೆ. ಗುರುವಾರ ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದ್ದಾರೆ. ಈ ಹಾದಿಯಲ್ಲಿ ಅವರು ಆರ್ಸಿಬಿಯ (Royal Challengers Bangalore) ಮಾಜಿ ಬ್ಯಾಟರ್ ಹಾಗೂ ವಿಕೆಟ್ಕೀಪರ್ ರಾಹುಲ್ ದ್ರಾವಿಡ್ ಅವರ ಸಾಧನೆಯನ್ನು ಮೀರಿದ್ದಾರೆ. ಆರ್ಸಿಬಿ ತಂಡದ ಆಟಗಾರರು ಐಪಿಎಲ್ ಹಾಲಿ ಆವೃತ್ತಿಯಲ್ಲಿ (IPL 2024) ಲವಾರು ಸಾಧನೆ ಮಾಡುತ್ತಿರುವ ನಡುವೆ ದಿನೇಶ್ ಕಾರ್ತಿಕ್ ಈ ಒಂದು ದಾಖಲೆ ಸೃಷ್ಟಿಸಿದ್ದಾರೆ.
Dinesh Karthik " I am not big on wickets which are completely in favour of batters,I think there should be an even contest between the bat & ball.What I am hearing people are loving 270-280 totals,At the end of the day,people who watch the sports matter."pic.twitter.com/B6PnJUmYCp
— Sujeet Suman (@sujeetsuman1991) May 10, 2024
ಮೇ 9, ಗುರುವಾರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಆರ್ಸಿಬಿಯ ಐಪಿಎಲ್ 2024 ರ ಮುಖಾಮುಖಿಯಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕಾರ್ತಿಕ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅಂತೆಯೇ ಈ ಫ್ರಾಂಚೈಸಿಗಾಗಿ ಅವರು ಆಡಿದ 57 ಪಂದ್ಯಗಳಲ್ಲಿ 912 ರನ್ ಗಳಿಸಿದ್ದಾರೆ.
ಈ ಮೂಲಕ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ 14 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ ನಂತರ ಐಪಿಎಲ್ನಲ್ಲಿ ಆರ್ಸಿಬಿ ಪರ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ದ್ರಾವಿಡ್ ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ಪರ 898 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.
ರಾಹುಲ್ ದ್ರಾವಿಡ್ ದಾಖಲೆ ಮುರಿದ ದಿನೇಶ್ ಕಾರ್ತಿಕ್
ಕೊಹ್ಲಿ 2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಬೆಂಗಳೂರು ಮೂಲದ ಫ್ರಾಂಚೈಸಿಯ ಭಾಗವಾಗಿದ್ದಾರೆ, ಮತ್ತು ಅವರು ಪ್ರಸ್ತುತ ಐಪಿಎಲ್ 2024 ರಲ್ಲಿ ಆಡಿದ 249 ಪಂದ್ಯಗಳಲ್ಲಿ 7897 ರನ್ಗಳೊಂದಿಗೆ ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಈ ಋತುವಿನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿರುವ ಅವರು ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: T20 World Cup : ವಿಶ್ವ ಕಪ್ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್ಕೆ ಆಟಗಾರನಿಗೂ ಚಾನ್ಸ್
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನ ಅರ್ಶ್ದೀಪ್ ಸಿಂಗ್ ಎಸೆದ 18 ನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕಾರ್ತಿಕ್ ಈ ಮೈಲಿಗಲ್ಲನ್ನು ಸಾಧಿಸಿದರು.
ಧರ್ಮಶಾಲಾದಲ್ಲಿ ನಡೆದ ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 38ರ ಹರೆಯದ ಆರ್ಸಿಬಿ ಸ್ಟಾರ್ ಆಟಗಾರ ಏಳು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 18 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿದರು. ಈ ಮೂಲಕ ಕಳೆದ 17 ವರ್ಷಗಳಲ್ಲಿ ಐಪಿಎಲ್ನಲ್ಲಿ ಆರ್ಸಿಬಿ ಪರ 1000 ರನ್ ಗಡಿ ದಾಟಿದ ಆರು ಬ್ಯಾಟರ್ಗಳ ಎಲೈಟ್ ಗುಂಪಿಗೆ ಕಾರ್ತಿಕ್ ಸೇರ್ಪಡೆಯಾಗಿದ್ದಾರೆ.
ವಿದೇಶಿ ದಿಗ್ಗಜರ ಪಟ್ಟಿಗೆ ದಿನೇಶ್ ಕಾರ್ತಿಕ್ ಸೇರ್ಪಡೆ
ಈ ಎಲೈಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಪ್ರಸ್ತುತ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಐದು ವಿದೇಶಿ ತಾರೆಗಳು ಸೇರಿದ್ದಾರೆ.
ಎಬಿ ಡಿವಿಲಿಯರ್ಸ್ ಆರ್ಸಿಬಿ ಪರ 156 ಐಪಿಎಲ್ ಪಂದ್ಯಗಳಲ್ಲಿ 4491 ರನ್ ಗಳಿಸಿದ್ದರೆ, ಕ್ರಿಸ್ ಗೇಲ್ 85 ಪಂದ್ಯಗಳಲ್ಲಿ 3163 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಫಾಫ್ ಡು ಪ್ಲೆಸಿಸ್ 42 ಪಂದ್ಯಗಳಲ್ಲಿ 1559 ರನ್ ಗಳಿಸಿದ್ದರೆ, ಗ್ಲೆನ್ ಮ್ಯಾಕ್ಸ್ವೆಲ್ 50 ಪಂದ್ಯಗಳಲ್ಲಿ 1250 ರನ್ ಗಳಿಸಿದ್ದಾರೆ. ಜಾಕ್ ಕಾಲಿಸ್ ಆರ್ಸಿಬಿ ಪರ 42 ಐಪಿಎಲ್ ಪಂದ್ಯಗಳಲ್ಲಿ 1132 ರನ್ ಗಳಿಸಿದ್ದಾರೆ.
ಆರ್ಸಿಬಿ ಗುರುವಾರ ಧರ್ಮಶಾಲಾದಲ್ಲಿ ಪಿಬಿಕೆಎಸ್ ಅನ್ನು 60 ರನ್ಗಳಿಂದ ಸೋಲಿಸಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ 7 ನೇ ಸ್ಥಾನಕ್ಕೆ ಏರಿದೆ.. ಆರ್ಸಿಬಿ ತನ್ನ ಅಭಿಯಾನದ ಕಳಪೆ ಆರಂಭದ ನಂತರ ಫಾರ್ಮ್ಗೆ ಮರಳಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದೆ.
ಆರ್ಸಿಬಿ ಪ್ಲೇಆಫ್ ಹಂತಕ್ಕೆ ಏರಬೇಕಾದರೆ ಮೊದಲಾಗಿ ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitlas) ಮತ್ತು ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಗೆಲ್ಲಬೇಕಾಗಿದೆ. ಜತೆಗೆ ಇತರ ತಂಡಗಳ ಫಲಿತಾಂಶಗಳು ಕೂಡ ಪೂರಕವಾಗಿರಬೇಕಾಗುತ್ತದೆ.