ಬೆಂಗಳೂರು: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ (IPL 2024) 15 ಆಟಗಾರರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. 2022 ರ ಟಿ 20 ವಿಶ್ವಕಪ್ (T20 World Cup) ವಿಜೇತ ನಾಯಕ ಜೋಸ್ ಬಟ್ಲರ್ (Jos Butler) ನೇತೃತ್ವದ ತಂಡವು ಪಂದ್ಯಾವಳಿಗೆ ಒಂದು ವಾರ ಮೊದಲು ತವರಿನಲ್ಲಿ ನಾಲ್ಕು ಪಂದ್ಯಗಳ ಟಿ 20ಐ ಸರಣಿಯಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಇಂಗ್ಲೆಂಡ್ನ ಟಿ 20 ವಿಶ್ವಕಪ್ 2024ರ ಹಲವಾರು ಆಟಗಾರರು ಪ್ರಸ್ತುತ ಐಪಿಎಲ್ 2024 ಋತುವಿಗಾಗಿ ಭಾರತದಲ್ಲಿದ್ದಾರೆ. ಹಿಗಾಗಿ ಆಯ್ಕೆಯಾದ ಆಟಗಾರರು ಪ್ಲೇಆಫ್ಗೆ ಮುಂಚಿತವಾಗಿ ಇಂಗ್ಲೆಂಡ್ಗೆ ವಾಪಸ್ ಹೋಗಬೇಕು ಎಂದು ಇಸಿಬಿ ಹೇಳಿದೆ. ಹೀಗಾಗಿ ಐಪಿಎಲ್ ಫೈನಲ್ಗೇರುವ ತಂಡಗಳಲ್ಲಿರುವ ಇಂಗ್ಲೆಂಡ್ ಆಟಗಾರರು ಪ್ರಮುಖ ಹಂತದಲ್ಲಿ ಅಲಭ್ಯರಾಗುತ್ತಾರೆ.
ECB CONFIRMS ENGLAND PLAYERS WONT BE AVAILABLE FOR THE IPL PLAY-OFFS….!!!!! pic.twitter.com/wysje6gkmL
— Johns. (@CricCrazyJohns) April 30, 2024
ಏಪ್ರಿಲ್ 30 ರಂದು, ಇಸಿಬಿಯ ಆಯ್ಕೆ ಸಮಿತಿಯು ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ತಂಡದ ಮುಂಬರುವ ತವರು ಟಿ 20 ಐ ಸರಣಿ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024 ಗಾಗಿ ಸಂಯೋಜಿತ ತಂಡವನ್ನು ಘೋಷಿಸಿದೆ. ವಿಶೇಷವೆಂದರೆ, ಪಾಕಿಸ್ತಾನ ವಿರುದ್ಧದ ಸರಣಿಯು ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನ ಪ್ಲೇಆಫ್ ದಿನಾಂಕದೊಂದಿಗೆ ಸಂಘರ್ಷ ಎದುರಿಸುತ್ತಿದೆ. ಹೀಗಾಗಿ ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರು ಮರಳಬೇಕಾಗುತ್ತದೆ.
ಇಂಗ್ಲೆಂಡ್ ಟಿ 20 ವಿಶ್ವಕಪ್ಗೆ ತೆರಳುವ ಆಟಗಾರರಾದ ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್ಸ್ಟನ್ , ಮೊಯೀನ್ ಅಲಿ, ಫಿಲ್ ಸಾಲ್ಟ್ ಮತ್ತು ಜಾನಿ ಬೈರ್ಸ್ಟೋವ್ ಪ್ರಸ್ತುತ ಐಪಿಎಲ್ 2024 ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದಾರೆ. ಅವರೆಲ್ಲೂ ಈ ಕರ್ತವ್ಯದಿಂದ ವಿಮುಖರಾಗಬೇಕಾಗುತ್ತದೆ.
ಲೀಡ್ಸ್ನಲ್ಲಿ ಮೊದಲ ಪಂದ್ಯ
ಪಾಕಿಸ್ತಾನ ವಿರುದ್ಧದ ಸರಣಿ ಮೇ 22 ರಿಂದ ಲೀಡ್ಸ್ನಲ್ಲಿ ಪ್ರಾರಂಭವಾಗಲಿದ್ದು, ಐಪಿಎಲ್ 2024 ಪ್ಲೇಆಫ್ಗೆ ಮೊದಲು ಇಂಗ್ಲೆಂಡ್ಗೆ ಮರಳುವಂತೆ ಇಸಿಬಿ ತನ್ನ ಆಟಗಾರರಿಗೆ ಸೂಚನೆ ನೀಡಿದೆ. ಇಸಿಬಿಯ ಈ ಮೇಲಿನ ನಿಲುವು ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಂತಹ ಫ್ರಾಂಚೈಸಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಲಿಯಾಮ್ ಲಿವಿಂಗ್ಸ್ಟನ್, ಜಾನಿ ಬೈರ್ಸ್ಟೋವ್ ಮತ್ತು ಸ್ಟ್ಯಾಂಡ್-ಇನ್ ನಾಯಕ ಸ್ಯಾಮ್ ಕರ್ರನ್ ಅವರಂತಹ ಆಟಗಾರರ ಸೇರ್ಪಡೆಯೊಂದಿಗೆ ಪಂಜಾಬ್ ಕಿಂಗ್ಸ್ ತಂಡವೂ ಇಂಗ್ಲೆಂಡ್ ಆಟಗಾರರನ್ನು ನೆಚ್ಚಿಕೊಂಡಿದೆ.
ಇಂಗ್ಲೆಂಡ್ ಜೂನ್ 4 ರಂದು ಸ್ಕಾಟ್ಲೆಂಡ್ ವಿರುದ್ಧ ಗ್ರೂಪ್ ಬಿ ಪಂದ್ಯದೊಂದಿಗೆ ಮುಂಬರುವ 2024 ರ ಆವೃತ್ತಿಯ ಪಂದ್ಯಾವಳಿಯಲ್ಲಿ ತನ್ನ ಟಿ 20 ವಿಶ್ವಕಪ್ ಪ್ರಶಸ್ತಿಯ ಹೋರಾಟ ಪ್ರಾರಂಭಿಸಲಿದೆ.