Site icon Vistara News

IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ವಿಫಲಗೊಂಡಿದ್ದಾರೆ. ಪ್ಲೇ ಆಫ್ ರೇಸ್ ನಿಂದ ಹೊರಗುಳಿದ ಮೊದಲ ತಂಡ ಎಂಬ ಕುಖ್ಯಾತಿಗೆ ಮುಂಬಯಿ ತಂಡ ಪಾತ್ರವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕನಾ ಬಳಿಕದಿಂದ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಅಭಿಮಾನಿಗಳ ಕೀಟಲೆಗಳ ಜತೆಗೆ ಅನೇಕ ಹಿರಿಯ ಆಟಗಾರರ ಮೂದಲಿಕೆಗಳನ್ನೂ ಕೇಳುವಂತಾಗಿದೆ. ಇಂಗ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾರ್ದಿಕ್ ನಾಯಕತ್ವದ ಶೈಲಿಯನ್ನು ಸತತವಾಗಿ ಪ್ರಶ್ನಿಸಿದ್ದರು. ತಮ್ಮ ತಂಡದ ವೈಫಲ್ಯಕ್ಕೆ ಹಾರ್ದಿಕ್ ಕಾರಣ ಎಂದು ಇಬ್ಬರೂ ಷರಾ ಬರೆದಿದ್ದರು.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಇದೀಗ ಆಲ್​ರೌಂಡರ್​ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ. ಅವರು ಎಬಿ ಡಿವಿಲಿಯರ್ಸ್ ಮತ್ತು ಪೀಟರ್ಸನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರಿಬ್ಬರ ಹೇಳಿಕೆಗಳು ಸರಿಯಲ್ಲ ಎಂದು ಹೇಳಿದ್ದಾರೆ. ಆ ರೀತಿ ಹೇಳುವುದಕ್ಕೆ ನಾಯಕರಾಗಿ ಅವರಿಬ್ಬರ ಟ್ರ್ಯಾಕ್ ರೆಕಾರ್ಡ್ ಎಷ್ಟಿದೆ ಎಂಬುದನ್ನು ಪ್ರಶ್ನಿಸಿದ್ದಾರೆ.

ಈ ಇಬ್ಬರು ನಾಯಕರಾಗಿದ್ದ ವೇಳೆ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕೆವಿನ್ ಪೀಟರ್ಸನ್ ಮತ್ತು ಎಬಿ ಡಿವಿಲಿಯರ್ಸ್ ನಾಯಕರಾಗಿ ಗಮನಾರ್ಹವಾಗಿ ಏನನ್ನೂ ಸಾಧಿಸಿಲ್ಲ. ನೀವು ಅವರ ದಾಖಲೆಗಳನ್ನು ಮೊದಲು ನೋಡಿಕೊಳ್ಳಿ. ಅದು ಚೆನ್ನಾಗಿದ್ದರೆ ಉಳಿದವರ ದಾಖಲೆಗಳನ್ನು ವಿಮರ್ಶೆ ಮಾಡುವುದು ಸೂಕ್ತ ಎಂದು ಗಂಭೀರ್ ಟೀಕಿಸಿದ್ದಾರೆ.

ಇದನ್ನೂ ಓದಿ: Team India New Head Coach: ಭಾರತ ತಂಡಕ್ಕೆ ಆಸೀಸ್ ಮಾಜಿ​ ಆಟಗಾರ ಕೋಚ್​ ಆಗುವುದು ನಿಶ್ಚಿತ

ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್ ಎಂದಿಗೂ ನಾಯಕತ್ವ ವಹಿಸಿಲ್ಲ. ಎಬಿಡಿ ಸಾಧನೆ ಎಂದರೆ ಸ್ವಂತ ಸ್ಕೋರ್​ಗಳು. ಅದನ್ನು ಹೊರತುಪಡಿಸಿ ಅವರು ಏನನ್ನೂ ಸಾಧಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಗಂಭೀರ್​ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಐಪಿಎಲ್ ವಿಜೇತ ನಾಯಕ. ಆದ್ದರಿಂದ ನೀವು ಕಿತ್ತಳೆಯನ್ನು ಕಿತ್ತಳೆಗೆ ಹೋಲಿಸಬೇಕು ಮತ್ತು ಕಿತ್ತಳೆಯನ್ನು ಸೇಬುಗಳಿಗೆ ಹೋಲಿಸಬಾರದು ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.

Exit mobile version