Site icon Vistara News

IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀರಸ ಪ್ರದರ್ಶನ ತೋರಿದೆ. ಆಡಿರುವ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಐದು ಬಾರಿಯ ಚಾಂಪಿಯನ್ ತಂಡದ ನಿರಾಶಾದಾಯಕ ಪ್ರದರ್ಶನದ ಬಗ್ಗೆ ಜೋರು ಚರ್ಚೆಗಳು ನಡೆದಿವೆ. ಫ್ರಾಂಚೈಸಿಯ ಅಭಿಮಾನಿಗಳು ಮತ್ತು ಕೆಲವು ಪಂಡಿತರು ಎಂಐ ನಾಯಕ ಹಾರ್ದಿಕ್ ಪಾಂಡ್ಯ ಅವರ ಸಾಮಾನ್ಯ ನಾಯಕತ್ವದ ಕೌಶಲ್ಯಕ್ಕಾಗಿ ಅವರನ್ನು ಟೀಕಿಸಿದ್ದಾರೆ. ಅವರ ಹುಂಬತನದಿಂದಾಗಿ ತಂಡ ಸೋತಿದೆ ಎಂಬುದಾಗಿ ಎಲ್ಲರೂ ಹೇಳಿಕೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಂಡ್ಯ ಬೆಂಬಲಕ್ಕೆ ನಿಂತ ಅವರು ಸೋಲಿಗೆ ರೋಹಿತ್​ ಶರ್ಮಾ ಕಾರಣ ಎಂದು ಹೇಳಿದ್ದಾರೆ.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಮುಂಬೈ ಇಂಡಿಯನ್ಸ್ ದಾಖಲೆಯ ಒಪ್ಪಂದಕ್ಕೆ ಖರೀದಿಸಿತ್ತು. ನಂತರ, ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಮುಂಬೈ ನಾಯಕನನ್ನಾಗಿ ಮಾಡಲಾಯಿತು. ಈ ವೇಳೆ ಅಭಿಮಾನಿಗಳಿಂದ ಕೆಟ್ಟ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಈ ಕುರಿತ ಕೋಲಾಹಲ ಉಂಟಾಯಿತು. ಅದಕ್ಕೆ ತಕ್ಕ ಹಾಗೆ ತಂಡ ಕೆಟ್ಟದಾಗಿ ಸೋತಿತು. ಎಂಐ ಶಿಬಿರದ ಭಾಗವಾಗಿದ್ದ ಹರ್ಭಜನ್ ಸಿಂಗ್ ಈ ಕುರಿತು ಮಾತನಾಡಿದ್ದು, ಮುಂದಿನ ಋತುವಿನಲ್ಲಿ ಬಲವಾಗಿ ಪುಟಿದೇಳಲು ಪಾಂಡ್ಯ ಮತ್ತು ಮ್ಯಾನೇಜ್ಮೆಂಟ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಗೆಲುವಿನ ಕೆಚ್ಚು ತೋರಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್​ ದೊಡ್ಡ ಬಳಗವನ್ನು ಹೊಂದಿದೆ. ನಾನು ಆ ತಂಡಕ್ಕೆ ಆಡಿದ್ದೇನೆ. ಮ್ಯಾನೇಜ್ಮೆಂಟ್ ಉತ್ತಮವಾಗಿದೆ. ತಂಡವನ್ನು ಉತ್ತಮವಾಗಿ ನಡೆಸುತ್ತದೆ. ಆದರೆ ಈ ನಿರ್ಧಾರವು ಹಿನ್ನಡೆಯನ್ನುಂಟು ಮಾಡಿದೆ. ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇತ್ತು. ಅವರು ಒಗ್ಗಟ್ಟಾಗಿ ಕಾಣದ ಕಾರಣ ಅದು ತಂಡದೊಂದಿಗೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ. ಇಷ್ಟು ದೊಡ್ಡ ತಂಡವಾಗಿದ್ದು ನನ್ನ ಹಳೆಯ ತಂಡವು ಇಂತಹ ಕಳಪೆ ಫಲಿತಾಂಶಗಳನ್ನು ಎದುರಿಸುತ್ತಿರುವುದನ್ನು ನೋಡಿ ನನಗೆ ನೋವಾಗುತ್ತದೆ ಎಂದು ಹರ್ಭಜನ್ ಹೇಳಿದ್ದಾರೆ.

ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

ಬಹುಶಃ ನಿರ್ಧಾರದ ಸಮಯ ಸರಿಯಾಗಿರಲಿಲ್ಲ. ಒಂದು ವರ್ಷದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಉತ್ತಮವಾಗುತ್ತಿತ್ತು. ಇದು ಹಾರ್ದಿಕ್ ಅವರ ತಪ್ಪಲ್ಲ, ಅವರು ಜಿಟಿಯಲ್ಲಿ ನಿಜವಾಗಿಯೂ ಉತ್ತಮವಾಗಿ ನಾಯಕರಾಗಿದ್ದರು. ನಾಯಕ ಯಾರೇ ಆಗಿರಲಿ ಆಟಗಾರರನ್ನು ಒಗ್ಗಟ್ಟಾಗಿಡುವುದು ಹಿರಿಯ ಆಟಗಾರರ ಕರ್ತವ್ಯ. ಕ್ಯಾಪ್ಟನ್ ಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಅವರು ಒಂದು ತಂಡದಂತೆ ಆಡಲಿಲ್ಲ, “ಎಂದು ಸಿಂಗ್ ಹೇಳಿದರು.

2024ರ ಟಿ20 ವಿಶ್ವಕಪ್ ಕಡೆಗೆ ಗಮನ

ಐಪಿಎಲ್ 2024 ತನ್ನ ಟೂರ್ನಿಯ ಅಂತ್ಯವನ್ನು ತಲುಪಿದ್ದು, ಪ್ಲೇಆಫ್ ಹಂತಗಳು ಸಮೀಪಿಸುತ್ತಿರುವುದರಿಂದ, ಗಮನವು ಶೀಘ್ರದಲ್ಲೇ ಐಸಿಸಿ ಟಿ 20 ವಿಶ್ವಕಪ್ 2024 ರತ್ತ ತಿರುಗುತ್ತದೆ. ಜೂನ್ 2ರಿಂದ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಪಾಂಡ್ಯ ಉಪನಾಯಕರಾಗಿದ್ದಾರೆ. ಶುಬ್ಮನ್ ಗಿಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರಿಂದ ಕೆಲವೊಂದು ಪ್ರಶ್ನೆಗಳು ಉಳಿದುಕೊಂಡಿವೆ.

Exit mobile version