Site icon Vistara News

IPL 2024 : ಐಪಿಎಲ್​ ಇತಿಹಾಸದ ಬೃಹತ್​ ಜೊತೆಯಾಟದ ದಾಖಲೆಗಳ ವಿವರ ಇಲ್ಲಿದೆ

RCB partnership

ಬೆಂಗಳೂರು: ಯಾವುದೇ ಟಿ 20 ಪಂದ್ಯದಲ್ಲಿ, ಬ್ಯಾಟಿಂಗ್ ಮಾಡುವ ತಂಡವು ದೊಡ್ಡ ಮೊತ್ತವನ್ನು ಬಾರಿಸಬೇಕಾದರೆ ಇನಿಂಗ್ಸ್ ಮಧ್ಯೆ ಉತ್ತಮ ಪಾಲುದಾರಿಕೆ ಮಾಡುವುದು ಬಹಳ ಮುಖ್ಯ. ಇದು ಅತ್ಯಂತ ಜನಪ್ರಿಯ ಟಿ 20 ಲೀಗ್ ಐಪಿಎಲ್ಗೂ ಅನ್ವಯಿಸುತ್ತದೆ. ಬ್ಯಾಟಿಂಗ್​ ಜೋಡಿಯು ಕ್ರೀಸ್ ಮೇಲೆ ತಳವೂರಿದರೆ ದೊಡ್ಡ ಶಾಟ್​ಗಳನ್ನು ಬಾರಿಸಿದರೆ ಬೃಹತ್​ ಮೊತ್ತ ದಾಖಲಾಗುವುದು ಖಚಿತ. ಈ ರೀತಿಯ ಜತೆಯಾಟದಿಂದ ಬೌಲಿಂಗ್ ಮಾಡುವ ತಂಡಕ್ಕೆ ರನ್​ ಹರಿವು ನಿಯಂತ್ರಣ ಮಾಡುವುದು ಕೂಡ ಕಷ್ಟ. ಅಂತೆಯೇ 17ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜತೆಯಾಟವನ್ನು ಮೆಲುಕು ಹಾಕುಬೇಕಾಗಿದೆ. ಅಂಥ ಐದು ಜತೆಯಾಟಗಳ ವಿವರ ಇಲ್ಲಿದೆ.

ವಿರಾಟ್​, ವಿಯಲರ್ಸ್​​ 229 ರನ್ ಜತೆಯಾಟ

ದಾಖಲೆಯ ಜೊತೆಯಾಟಗಳಲ್ಲಿ ಒಂದು ವಿಷಯವೆಂದರೆ ವಿರಾಟ್ ಕೊಹ್ಲಿಯ ನೆರವು. ಭಾರತ ತಂಡದ ಮಾಜಿ ನಾಯಕ ಐದು ಅತ್ಯುತ್ತಮ ಜತೆಯಾಟದ ಪಟ್ಟಿಯಲ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ 2016ರ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ ಅವರೊಂದಿಗೆ ಎರಡನೇ ವಿಕೆಟ್​ಗೆ ವಿರಾಟ್​ ಕೊಹ್ಲಿ 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್​ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರೆ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

ಇದನ್ನೂ ಓದಿ : IPL 2024 : ಐಪಿಎಲ್​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸರ್​ಗಳನ್ನು ಬಾರಿಸಿದ ಆಟಗಾರರ ವಿವರ ಇಲ್ಲಿದೆ

ಕೊಹ್ಲಿ – ವಿಲಿಯರ್ಸ್​​ 215 ರನ್​

2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಎರಡನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಗಳಿಸಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಲಿಂದ ಗೆದ್ದುಕೊಂಡಿತು.

ಕ್ವಿಂಟನ್​ ಡಿ ಕಾಕ್​, ಕೆ ಎಲ್ ರಾಹುಲ್​ 210 ರನ್​

ಐಪಿಎಲ್ 2022 ರಲ್ಲಿ, ಕ್ವಿಂಟನ್ ಡಿ ಕಾಕ್ ಮತ್ತು ಕೆಎಲ್ ರಾಹುಲ್ ಆ ವರ್ಷ ಹೊಸದಾಗಿ ಸೇರ್ಪಡೆಗೊಂಡ ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ್ದರು. ಅಂತೆಯೇ ಕೆಕೆಆರ್ ವಿರುದ್ಧ ಹೊಸದಾಗಿ ಲಕ್ನೋ ಸೂಪರ್ ಜೈಂಟ್ಸ್ ಪರ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್​ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಈ ಸಹಭಾಗಿತ್ವವು ಇಂಡಿಯನ್ ಟಿ 20 ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯುತ್ತಮ ಜೊತೆಯಾಟ.

ಗಿಲ್​ಕ್ರಿಸ್ಟ್​​- ಶಾನ್​ ಮಾರ್ಷ್​​ 206 ರನ್​

ಐಪಿಎಲ್ 2011 ರಲ್ಲಿ ಆ ರ್​ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಮ್ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ ಎರಡನೇ ವಿಕೆಟ್ ಗೆ 206 ರನ್ ಸೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ ನಾಲ್ಕನೇ ಅತಿ ದೊಡ್ಡ ಜತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

ಗೇಲ್​- ವಿರಾಟ್​ 2024 ರನ್​

ಐಪಿಎಲ್ 2012 ರ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ವಿರಾಟ್ ಮತ್ತು ಕ್ರಿಸ್ ಗೇಲ್ ಎರಡನೇ ವಿಕೆಟ್​​ಗೆ 204 ರನ್​​ಗಳ ಜೊತೆಯಾಟವನ್ನು ಪೇರಿಸಿದ್ದರು. ಗೇಲ್ 62 ಎಸೆತಗಳಲ್ಲಿ 128 ರನ್ ಗಳಿಸಿದ್ದರೆ ವಿರಾಟ್ 53 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಜಹೀರ್ ಖಾನ್ 3 ವಿಕೆಟ್ ಕಬಳಿಸುವ ಮೂಲಕ ಆರ್​ಸಿಬಿ ಈ ಪಂದ್ಯದಲ್ಲಿ 21 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲ ಇನ್ನಿಂಗ್ಸ್​​ನಲ್ಲಿ ಆರ್​ಸಿಬಿ 1 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತ್ತು. ಡೆಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಸೋಲುಂಡಿತ್ತು.

ಐಪಿಎಲ್​ನಲ್ಲಿ ದಾಖಲಾದ ಬೃಹತ್​ ಜತೆಯಾಟಗಳು

Exit mobile version