Site icon Vistara News

IPL 2024 : ಐಪಿಎಲ್​ ಯಶಸ್ಸಿನ ಖುಷಿ; ಪಿಚ್ ಸಿದ್ಧಪಡಿಸಿದವರಿಗೂ 25 ಲಕ್ಷ ರೂ. ಇನಾಮು ಕೊಟ್ಟ ಬಿಸಿಸಿಐ!

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಋತುವಿನ ಮುಕ್ತಾಯದ ನಂತರ ವಿಶೇಷ ಬೋನಸ್ ಮೊತ್ತವನ್ನು ಘೋಷಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೈದಾನದ ಸಿಬ್ಬಂದಿಯ ಅಮೂಲ್ಯ ಕೊಡುಗೆಯನ್ನು ಸ್ಮರಿಸಿಕೊಂಡಿದೆ. ಉತ್ತಮ ಪಿಚ್​ ರೆಡಿ ಮಾಡಿದ ಮೈದಾನದ ಸಿಬ್ಬಂದಿಯೂ ಟೂರ್ನಿಯ ಯಶಸ್ಸಿನಲ್ಲಿ ಪಾಲು ಪಡೆಯುತ್ತಾರೆ ಎಂಬುದನ್ನು ಬಿಸಿಸಿಐ ಎತ್ತಿ ತೋರಿಸಿದೆ. ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಂದ್ಯಾವಳಿಯುದ್ದಕ್ಕೂ ಉನ್ನತ ದರ್ಜೆಯ ಆಟವನ್ನು ಖಚಿತಪಡಿಸಿದ ಮೈದಾನದ ಸಿಬ್ಬಂದಿ ಮತ್ತು ಕ್ಯುರೇಟರ್​ಗಳ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ನಮ್ಮ ಯಶಸ್ವಿ ಟಿ 20 ಋತುವಿನ ಅಪ್ರತಿಮ ಹೀರೋಗಳು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪಿಚ್​​ಗಳನ್ನು ಒದಗಿಸಿದ್ದಾರೆ. ದಣಿವರಿಯದೆ ಕೆಲಸ ಮಾಡಿದ ವಿಶೇಷ ಸಾಮರ್ಥ್ಯದ ಸಿಬ್ಬಂದಿ” ಎಂದು ಶಾ ಹೇಳಿದ್ದಾರೆ.
ಮೆಚ್ಚುಗೆಯ ಸಂಕೇತವಾಗಿ, ಬಿಸಿಸಿಐ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ ಸೇರಿದಂತೆ 10 ನಿಯಮಿತ ಐಪಿಎಲ್ ತಾಣಗಳ ಪಿಚ್​ಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಮೈದಾನದ ಸಿಬ್ಬಂದಿಗೆ ಆರ್ಥಿಕ ಬಹುಮಾನವನ್ನು ಘೋಷಿಸಿದೆ. ಪ್ರತಿ ಸಿಬ್ಬಂದಿಗೆ 25 ಲಕ್ಷ ರೂಪಾಯಿ ದೊರಕಲಿದೆ.

ಇದನ್ನೂ ಓದಿ: IPL 2024 : ಇದು ಕೂಡ ವಿಶೇಷ; ಕೆಕೆಆರ್​ ಕಪ್​ ಗೆದ್ದ ಮರುದಿನವೇ ಮೊದಲ ಟ್ರೋಫಿಯ 12ನೇ ವಾರ್ಷಿಕೋತ್ಸವ

ಹೆಚ್ಚುವರಿಯಾಗಿ, ಋತುವಿನಲ್ಲಿ ಬಳಸಲಾದ ಮೂರು ಹೆಚ್ಚುವರಿ ಸ್ಥಳಗಳಲ್ಲಿನ ಮೈದಾನದ ಸಿಬ್ಬಂದಿಗೆ ತಲಾ 10 ಲಕ್ಷ ರೂಪಾಯಿ ಬೋನಸ್ ದೊರೆಯಲಿದೆ. ಈ ಮೂಲಕ ಐಪಿಎಲ್ ಸುಗಮವಾಗಿ ನಡೆಯುವಲ್ಲಿ ಮೈದಾನದ ಸಿಬ್ಬಂದಿ ವಹಿಸುವ ನಿರ್ಣಾಯಕ ಪಾತ್ರವನ್ನು ಗುರುತಿಸುವ ತನ್ನ ಬದ್ಧತೆಯನ್ನು ಬಿಸಿಸಿಐ ಎತ್ತಿ ತೋರಿಸಿದೆ.

ಜಯ್ ಶಾ ಹೇಳಿದ್ದೇನು?

ನಮ್ಮ ಯಶಸ್ವಿ ಟಿ 20 ಋತುವಿನ ಅಪ್ರತಿಮ ಹೀರೋಗಳು ಮೈದಾನದ ಸಿಬ್ಬಂದಿಗಳು. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪಿಚ್​ಗಳ ನ್ನು ಒದಗಿಸಲು ದಣಿವರಿಯದೆ ಕೆಲಸ ಮಾಡಿದ್ದರೆ. ನಮ್ಮ ಮೆಚ್ಚುಗೆಯ ಸಂಕೇತವಾಗಿ, 10 ನಿಯಮಿತ ಐಪಿಎಲ್ ಸ್ಥಳಗಳ ಗ್ರೌಂಡ್ಸ್​ಮನ್​ ಮತ್ತು ಕ್ಯರೇಟರ್​ಗಳಿಗೆ ತಲಾ 25 ಲಕ್ಷ ರೂ., ಮತ್ತು 3 ಹೆಚ್ಚುವರಿ ಸ್ಥಳಗಳಲ್ಲಿ ತಲಾ 10 ಲಕ್ಷ ರೂಪಾಯಿ ನೀಡಲಾಗುವುದ. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಪಿಚ್​ ತಯಾರಿಸುವ ಸವಾಲು

ದೇಶಾದ್ಯಂತ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಂತಹ ಸವಾಲುಗಳನ್ನು ಎದುರಿಸುತ್ತಿದ್ದರೂ, ಮೈದಾನದ ಸಿಬ್ಬಂದಿ ಐಪಿಎಲ್ ಋತುವಿನಾದ್ಯಂತ ಅತ್ಯಾಕರ್ಷಕ ಮತ್ತು ಉತ್ತಮ ಗುಣಮಟ್ಟದ ಕ್ರಿಕೆಟ್​ಗೆ ಅನುಕೂಲವಾಗುವ ಪಿಚ್​​ಗಳನ್ನು ನಿರಂತರವಾಗಿ ನೀಡಿದ್ದರು. ಬಿಸಿಸಿಐನ ಆರ್ಥಿಕ ಬಹುಮಾನವು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಅರ್ಹವಾದ ಮನ್ನಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಕೆಕೆಆರ್​ಗೆ ಸ್ಮರಣೀಯ ವರ್ಷ

ಕೋಲ್ಕತಾ ನೈಟ್ ರೈಡರ್ಸ್ ತಂಡವು 2024ರ ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದಾಗ್ಯೂ, ಬಿಸಿಸಿಐ ಮೈದಾನದ ಸಿಬ್ಬಂದಿಗೆ ಮಾನ್ಯತೆ ನೀಡುವುದರಿಂದ ತೆರೆಮರೆಯಲ್ಲಿ ಇರುವವರ ಕೊಡುಗೆಗಳನ್ನು ಮರೆಯಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

Exit mobile version