Site icon Vistara News

IPL 2024 : ಕೆಕೆಆರ್​ ಬೌಲರ್​ಗೆ ದಂಡ ವಿಧಿಸಿದ ಬಿಸಿಸಿಐ

Harshit Rana

ಈಡನ್​ಗಾರ್ಡನ್ಸ್​: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಐಪಿಎಲ್​ (IPL 2024) ಪಂದ್ಯದ ವೇಳೆ ಟೂರ್ನಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತಾ ನೈಟ್ ರೈಡರ್ಸ್ ಸ್ಟಾರ್ ಬೌಲರ್​ ಹರ್ಷಿತ್ ರಾಣಾಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಎಸ್ಎಚ್​ಆರ್ ಬ್ಯಾಟರ್​ಗಳಾದ ಮಯಾಂಕ್ ಅಗರ್ವಾಲ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡಿದ ಬಳಿಕ ಅವರು ತೋದಿದ ಸನ್ನೆಯೇ ದಂಡ ವಿಧಿಸಲು ಕಾರಣ.

ಯುವ ವೇಗಿ ಎಸ್​ಆರ್ಎಚ್​ ವಿರುದ್ಧದ ಪಂದ್ಯದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಅವರ ಅಂತಿಮ ಓವರ್ ವೀರೋಚಿತವಾಗಿತ್ತು. ಆದರೆ, ಅವರ ನಡವಳಿಕೆ ಅನೇಕರನ್ನು ನಿರಾಶೆಗೊಳಿಸಿದೆ. ಅಂತೆಯೇ ಐಪಿಎಲ್ ಅವರ ಪಂದ್ಯದ ಶುಲ್ಕದ ಶೇಕಡಾ 60 ಕಡಿತಗೊಳಿಸಿದೆ.

ಇದನ್ನೂ ಓದಿ : IPL 2024 : ಸಂಜು ಬಳಗದ ಸವಾಲು ಮೀರುವುದೇ ರಾಹುಲ್ ಪಡೆ?

“ಐಪಿಎಲ್​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ರಾಣಾ ಎರಡು ಬಾರಿ ಲೆವೆಲ್ 1 ಅಪರಾಧಗಳನ್ನು ಮಾಡಿದ್ದಾರೆ . ಎರಡು ಅಪರಾಧಗಳಿಗಾಗಿ ಅವರಿಗೆ ಪಂದ್ಯದ ಶುಲ್ಕದ 10 ಪ್ರತಿಶತ ಮತ್ತು 50 ಪ್ರತಿಶತದಷ್ಟು ದಂಡ ವಿಧಿಸಲಾಯಿತು. ರಾಣಾ ಎರಡು ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿಯ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ನಿರ್ಧಾರವು ಅಂತಿಮ” ಎಂದು ಐಪಿಎಲ್​ ತನ್ನ ಪ್ರಕಟಣೆ ತಿಳಿಸಿದೆ.

ಅಂತಿಮ ಓವರ್​ನಲ್ಲಿ ಹರ್ಷಿತ್ 13 ರನ್​ಗಳನ್ನು ರಕ್ಷಿಸುವ ಮೂಲಕ ಎಸ್ಎಚ್​ಆರ್​ ತಂಡದ ಸೋಲಿಗೆ ಕಾರಣವಾಗಿದ್ದರು. ಕೆಕೆಆರ್ 4 ರನ್​ಗಳೀಗೆ ಗೆಲುವು ಸಾಧಿಸಿತ್ತು. ಆಂಡ್ರೆ ರಸೆಲ್ ಅವರ ಆಲ್ರೌಂಡ್ ಪ್ರದರ್ಶನದ ಹೊರತಾಗಿಯೂ, ಹೆನ್ರಿಕ್ ಕ್ಲಾಸೆನ್ ಅವರ ಏಕವ್ಯಕ್ತಿ ಪ್ರದರ್ಶನದಿಂದ ಕೆಕೆಆರ್ ಬಹುತೇಕ ಆತಂಕಕ್ಕೆ ಬಿತ್ತು. ಆದರೆ ಅವರು ಕೊನೇ ಓವರ್​​ನಲ್ಲಿ ಔಟಾಗುವ ಮೂಲಕ ಎಸ್​ಎಚ್​ಆರ್​ ಗೆ ಜಯ ಸಿಗಲಿಲ್ಲ.

ಪಂದ್ಯದ ಬಳಿಕ ಮಾತನಾಡಿದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, “17ನೇ ಓವರ್​ನಿಂದ ತಳಮಳ ಸೃಷ್ಟಿಯಾಯಿತು. ಕೊನೆಯ ಓವರ್​ನಲ್ಲಿ ಏನು ಬೇಕಾದರೂ ಆಗಬಹುದು ಎಂದು ಭಾವಿಸಿದೆ. ಅವರಿಗೆ 13 ರನ್ ಗಳ ಅಗತ್ಯವಿತ್ತು. ನಮ್ಮಲ್ಲಿ ಅನುಭವಿ ಬೌಲರ್ ಇರಲಿಲ್ಲ. ಆದರೆ ನನಗೆ ಹರ್ಷಿತ್ ಮೇಲೆ ನಂಬಿಕೆ ಇತ್ತು. ಅವರಿಗೂ ಆತಂಕ ಇತ್ತು. ಆದಾಗ್ಯೂ ನಿಮ್ಮ ಕ್ಷಣ ಎಂದು ಹೇಳಿ ಬೌಲಿಂಗ್ ನೀಡಿದೆ. ಆಟದಲ್ಲಿ ಏನಾಗುತ್ತದೆ ಎಂಬುದು ಮುಖ್ಯವಲ್ಲ ಮತ್ತು ನಾನು ಅವರನ್ನು ಬೆಂಬಲಿಸುವುದು ಮುಖ್ಯ ಎಂದು ಹೇಳಿದರು.

ರಸೆಲ್ ಮತ್ತು ಸುನಿಲ್ ನರೈನ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ನರೈನ್, “ಅವರು ತಮ್ಮ ಸ್ಪೆಲ್​ನಲ್ಲಿ ಬೌಂಡರಿ ನೀಡಲಿಲ್ಲ. ಆಂಡ್ರೆ ಬ್ಯಾಟ್ ಮತ್ತು ಬಾಲ್​ನೊಂದಿಗೆ ಉತ್ತಮ ಪ್ರದರ್ಶನ ನೀಡುವುದನ್ನು ನೋಡಲು ಅದ್ಭುತವಾಗಿದೆ, ಅವರನ್ನು ಹೊಂದಿರುವುದು ಅದ್ಭುತ ಅವಕಾಶ ಎಂದು ಹೇಳಿದರು.

” ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸಿದಾಗ ನಿಮಗೆ ಪ್ರೇರಣೆ ಸಿಗುತ್ತದೆ. ಈ ಆಟವು ನಮಗೆ ಸಾಕಷ್ಟು ಕಲಿಕೆಗಳನ್ನು ನೀಡಿದೆ. ಈ ಮೈದಾನದಿಂದ ನಾವು ಬಹಳಷ್ಟು ಕಲಿಯುತ್ತೇವೆ. ಫೀಲ್ಡಿಂಗ್ ನಾವು ಸುಧಾರಿಸಬೇಕಾದ ಕ್ಷೇತ್ರವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅಯ್ಯರ್ ಹೇಳಿಕೊಂಡಿದ್ದಾರೆ.

Exit mobile version