Site icon Vistara News

IPL 2024 : ಕೆಕೆಆರ್​ನಲ್ಲಿ ನಾಯಕ ಶ್ರೇಯಸ್​ ಮಾತು ಯಾರೂ ಕೇಳುತ್ತಿಲ್ಲ!

IPL 2024

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್​ನ ಅನ್​ಕ್ಯಾಪ್ಟ್ ವೇಗದ ಬೌಲರ್ ಹರ್ಷಿತ್ ರಾಣಾ ಅವರು ತಾವು ನಾಯಕ ಶ್ರೇಯಸ್ ಮಾತು ಕೇಳುತ್ತಿಲ್ಲ ಎಂಬುದಾಗಿ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಮೆಂಟರ್​ ಗೌತಮ್ ಗಂಭೀರ್ ಜಾರಿಗೆ ತರಲು ಬಯಸುವ ಆಟದ ಶೈಲಿಯನ್ನು ಮಾತ್ರ ಕಾರ್ಯಗತಗೊಳಿಸುವತ್ತ ಗಮನ ಹರಿಸಿದ್ದೇನೆ ಎಂದಿದ್ದಾರೆ. ಈ ಮೂಲಕ ಐಪಿಎಲ್​ 2024ರಲ್ಲಿ (IPL 2024) ಆ ತಂಡದಲ್ಲಿ ನಾಯಕ ಶ್ರೇಯಸ್​​ ಯೋಜನೆಗಳು ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಗೌತಮ್ ಗಂಭೀರ್ ಅವರ ಮಾಜಿ ಫ್ರಾಂಚೈಸಿ ವಿರುದ್ಧ ನೈಟ್ ರೈಡರ್ಸ್ ಐಪಿಎಲ್ 2024 ಋತುವಿನಲ್ಲಿ 8 ನೇ ಗೆಲುವು ದಾಖಲಿಸಿದ ನಂತರ ಹರ್ಷಿತ್ ರಾಣಾ ಅವರ ಹೇಳಿಕೆ ಬಂದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲು ಕೆಕೆಆರ್ ಏಕನಾ ಕ್ರೀಡಾಂಗಣಕ್ಕೆ ಪ್ರಯಾಣಿಸಿತ್ತು. ಇದಕ್ಕೂ ಮುನ್ನ ಏಪ್ರಿಲ್ 14ರಂದು ನಡೆದ ಪಂದ್ಯದಲ್ಲಿ ಈಸ್ಟ್ ಇಂಡಿಯಾ ತಂಡ 8 ವಿಕೆಟ್ ಗಳಿಂದ ಮೇಲುಗೈ ಸಾಧಿಸಿತ್ತು. ಎಲ್ಲ ಗೆಲುವುಗಳು ಗಂಭೀರ್ ಕೊಡುಗೆ ಎಂಬುದು ಹರ್ಷಿತ್​ ರಾಣಾ ಅಭಿಪ್ರಾಯವಾಗಿದೆ.

ಗೌತಮ್ ಗಂಭೀರ್ ಗೆ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎಂಬುದು ತಿಳಿದಿದೆ: ಹರ್ಷಿತ್ ರಾಣಾ

ಪಂದ್ಯದ ನಂತರ ಐಪಿಎಲ್ 2024 ವೀಕ್ಷಕ ವಿವರಣೆಗಾರರೊಂದಿಗೆ ಮಾತನಾಡಿದ ಹರ್ಷಿತ್ ರಾಣಾ, ಗೌತಮ್ ಗಂಭೀರ್ ಕೆಕೆಅರ್​ ತಂಡಕ್ಕೆ ಎಷ್ಟು ಅಗತ್ಯ ಮತ್ತು ಪ್ರಭಾವಶಾಲಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ 2012 ಮತ್ತು 2014 ರಲ್ಲಿ ಆ ತಂಡ ನಾಯಕರಾಗಿದ್ದ ಅವಧಿಯಲ್ಲಿ 2 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದರು. ಹೀಗಾಗಿ ಇಲ್ಇ ಗಂಭೀರ್ ಅವರ ಪರಂಪರೆಯನ್ನು ಯಾವುದೇ ನಾಯಕನಿಗೆ ಸರಿಗಟ್ಟುವುದು ಕಷ್ಟ.

ಇದನ್ನೂ ಓದಿ: IPL 2024 : ಹಳೆ ಸೇಡು; ರಾಹುಲ್ ವಿರುದ್ಧವೇ ತಿರುಗಿಬಿದ್ದ ನವಿನ್​ ಉಲ್ ಹಕ್​

ಅಂದಿನಿಂದ, ನೈಟ್ ರೈಡರ್ಸ್ 2021 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದೆ. ವಾಸ್ತವವಾಗಿ, 2022 ಮತ್ತು 2023 ರಲ್ಲಿ, ಕೋಲ್ಕತಾ ಪಾಯಿಂಟ್ಸ್ ಟೇಬಲ್​​ ಅಗ್ರ 4 ರಲ್ಲಿ ಸ್ಥಾನ ಪಡೆಯಲು ಕಷ್ಟಪಟ್ಟಿತು. ಕಳೆದ ಎರಡು ಋತುಗಳಲ್ಲಿ 7 ನೇ ಸ್ಥಾನ ಗಳಿಸಿತ್ತು. ಆದಾಗ್ಯೂ, ಗೌತಮ್ ಗಂಭೀರ್ ಎಲ್ಎಸ್ಜಿಯನ್ನು ತೊರೆದು ತಮ್ಮ ಮಾಜಿ ಫ್ರಾಂಚೈಸಿಯನ್ನು ಮಾರ್ಗದರ್ಶಕರಾಗಿ ವಹಿಸಿಕೊಂಡಾಗಿನಿಂದ ಕೆಕೆಆರ್ ವಿಭಿನ್ನ ರೀತಿಯಲ್ಲಿ ಸಾಗುತ್ತಿದೆ.

2024 ರ ಹರಾಜಿನಲ್ಲಿ ಐಪಿಎಲ್​​ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿ ಮಾಡಿದಾಗ ಕೋಲ್ಕತ್ತಾದ ನಿರ್ಭೀತ ಮತ್ತು ದಿಟ್ಟ ವಿಧಾನ ಗೋಚರಿಸಿತ್ತು.. ಆದರೆ ಸೀಸನ್ ಪ್ರಾರಂಭವಾದಾಗ, ಕೆಕೆಆರ್ ಆ ವಿಧಾನವನ್ನು ನಿಜವಾಗಿಯೂ ಉಳಿಸಿಕೊಂಡಿತು. ಹೆಚ್ಚಿನ ಕ್ರೆಡಿಟ್ ಗೌತಮ್ ಗಂಭೀರ್​ಗೆ ಸಲ್ಲುತ್ತದೆ.

ಕ್ಲಿಷ್ಟಕರ ಸಂದರ್ಭಗಳಿಂದ ಪಂದ್ಯಗಳನ್ನು ಹೇಗೆ ಪರಿವರ್ತಿಸಬಹುದು ಎಂಬ ಅರಿವನ್ನು ಗಂಭೀರ್ ತಂಡಕ್ಕೆ ಸಾಕಷ್ಟು ಬಾರಿ ನೀಡಿದ್ದಾರೆ ಎಂದು ಹರ್ಷಿತ್ ರಾಣಾ ದೃಢಪಡಿಸಿದ್ದಾರೆ. 98 ರನ್ಗಳ ಗೆಲುವಿನ ಬಗ್ಗೆ ಮಾತನಾಡಿದ ರಾಣಾ, ಗಂಭೀರ್ ಬೌಲರ್​ಗಳಿಗೆ ಚೆಂಡನ್ನು ಎಲ್ಲಿ ಪಿಚ್ ಮಾಡಬೇಕು ಎಂಬುದರ ವಿಷಯದಲ್ಲಿ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ.

ಲಕ್ನೋ ಫ್ರಾಂಚೈಸಿಯನ್ನು 137 ರನ್​ಗಳಿಗೆ ಆಲೌಟ್ ಮಾಡಿದ ನಂತರ ಅವರು ಈ ಮಾತುಗಳನ್ನು ಹೇಳಿದರು. 236 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಎಲ್ಎಸ್ಜಿ ತಂಡವು ರಾಣಾ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್, ಮಿಚೆಲ್ ಸ್ಟಾರ್ಕ್ ಮತ್ತು ಸುನಿಲ್ ನರೈನ್ ಅವರ 1 ವಿಕೆಟ್ ಮತ್ತು ಆಂಡ್ರೆ ರಸೆಲ್ ಅವರ 2 ವಿಕೆಟ್ ಸಾಧನೆಯಿಂದ ಗೆದ್ದಿತ್ತು.

ಬೌಲರ್​ಗಳು ಎಕಾನಾ ಕ್ರೀಡಾಂಗಣದ ತಿರುವನ್ನು ಚೆನ್ನಾಗಿ ಅರಿತಿದ್ದಾರೆ. ಎಲ್ಎಸ್ಜಿ ಬ್ಯಾಟರ್​ಗಳನ್ನು ಎಲ್ಲಿ ಗುರಿಯಾಗಿಸಬೇಕು ಎಂದು ತಿಳಿದಿತ್ತು ಎಂಬುದಾಗಿ ರಾಣಾ ಹೇಳಿದ್ದಾರೆ.

“ನಾವು ಗೌತಮ್ ಗಂಭೀರ್ ಆಡುವ ಕ್ರಿಕೆಟ್ ಶೈಲಿಯ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಆಟಗಳನ್ನು ನಮ್ಮ ಪರವಾಗಿ ಹೇಗೆ ತಿರುಗಿಸಬೇಕು ಎಂಬುದರ ಬಗ್ಗೆ ಅವರಿಗೆ ಸಾಕಷ್ಟು ಜ್ಞಾನವಿದೆ. ಇಂದಿನಂತೆ ಅವರು ಪಿಚ್​ನಲ್ಲಿ ಯಾವ ಪ್ರದೇಶಗಳನ್ನು ಗುರಿಯಾಗಿಸಬೇಕು ಎಂಬುದರ ಬಗ್ಗೆ ಬೌಲರ್ಗಳಿಗೆ ಮುಕ್ತ ಅವಕಾಶವನ್ನು ನೀಡುತ್ತಾರೆ.” – ಹರ್ಷಿತ್ ರಾಣಾ ಎಲ್ಎಸ್ಜಿ ವಿರುದ್ಧ ಕೆಕೆಆರ್ ಗೆಲುವಿನ ನಂತರ ಹೇಳಿದರು.

Exit mobile version