ಬೆಂಗಳೂರು: ಲಕ್ನೊ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಮಯಾಂಕ್ ಯಾದವ್ (Mayank Yadav) ಮತ್ತೆ ಗಾಯಗೊಂಡರೇ? ಏಪ್ರಿಲ್ 30 ರ ಮಂಗಳವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆ ಅನುಭವಿಸಿದ್ದ ಅವರು ಈ ಪಂದ್ಯಕ್ಕೆ ಮರಳಿದ್ದರು. ಅವರು 10 ಡಾಟ್ ಬಾಲ್ ಗಳನ್ನು ಎಸೆದಿದ್ದರೂ ತಮ್ಮ ಮೊದಲ 3 ಓವರ್ ಗಳಲ್ಲಿ 31 ರನ್ ಗಳನ್ನು ಸೋರಿಕೆ ಮಾಡಿದ್ದರು.
18ನೇ ಓವರ್ನ ಮೊದಲ ಎಸೆತದಲ್ಲಿ ಮಯಾಂಕ್ ಅನುಭವಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಅವರು ಒಂದು ರೀತಿಯ ಅನನುಕೂಲತೆ ಅನುಭವಿಸಿದರು. ಅಲ್ಲದೆ, ಸ್ಟೇಡಿಯಮ್ ಬಿಟ್ಟು ಹೊರಗೆ ನಡೆದಿದ್ದಾರೆ. ಅವರು ಮೆಟ್ಟಿಲುಗಳ ಮೇಲೆ ಓಡುತ್ತಿರುವ ವಿಡಿಯೊ ಕಂಡು ಬಂದಿದೆ. ಆದರೆ, ಅದು ಯಾಕೆ ಎಂದು ಗೊತ್ತಾಗಿಲ್ಲ. ಆದರೆ, ಗಾಯಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಎನ್ನಲಾಗಿದೆ.
ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಎಲ್ಎಸ್ಜಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಎಲ್ಲಾ ಫಿಟ್ನೆಸ್ಪ ರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ ಮಯಾಂಕ್ ಆಡುತ್ತಿದ್ದಾರೆ ಎಂದು ಹೇಳಿದ್ದರು. ತಂಡದ ಸಹಾಯಕ ಕೋಚ್ ಎಸ್ ಶ್ರೀರಾಮ್ ಕೂಡ ವೇಗದ ಬೌಲರ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಅವರು ನೆಟ್ಸ್ನಲ್ಲಿ ಪೂರ್ಣ ತೀವ್ರತೆಯಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: IPL 2024 : ಗುಜರಾತ್ ಟೀಮ್ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್ ಶೈಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್
ಮುಂಬೈ ಇಂಡಿಯನ್ಸ್ ವಿರುದ್ಧ ಮಯಾಂಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು,.ಆದರೆ ಪಂಜಾಬ್ ಮತ್ತು ಆರ್ಸಿಬಿ ವಿರುದ್ಧದ ಎಲ್ಎಸ್ಜಿ ಪರ ಹಿಂದಿನ ಮುಖಾಮುಖಿಗಳಲ್ಲಿ ಅವರು ಬೌಲಿಂಗ್ ಮಾಡಿದಷ್ಟು ವೇಗದಲ್ಲಿ ಬೌಲಿಂಗ್ ಮಾಡಲಿಲ್ಲ.
ಮಯಾಂಕ್ ಯಾದವ್: ಸೂಪರ್ ಜೈಂಟ್ಸ್ಗೆ ನಿರ್ಣಾಯಕ
ಐಪಿಎಲ್ 2024 ರಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ವೇಗದ ಚೆಂಡನ್ನು ಎಸೆಯುವ ಮೂಲಕ ಯುವ ಆಟಗಾರ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಸಾಧನೆಗಳನ್ನು ಮಾಡಿದ್ದರು . ಅವರ ಆರಾಧ್ಯ ದೈವ ಡೇಲ್ ಸ್ಟೇನ್ ಸೇರಿದಂತೆ ಕ್ರಿಕೆಟ್ ಕ್ಷೇತ್ರದಿಂದ ಗೌರವ ಪಡೆದುಕೊಂಡಿದ್ದರು.
ಪ್ಲೇಆಫ್ಗೆ ಅರ್ಹತೆ ಪಡೆಯಲು ಎಲ್ಎಸ್ಜಿ ಇನ್ನೂ ಸ್ವಲ್ಪ ದೂರದಲ್ಲಿದೆ. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರಂತಹ ಭಾರತೀಯ ವೇಗಿಗಳನ್ನು ಹೊಂದಿದ್ದರೂ, ಮಯಾಂಕ್ ಫಿಟ್ ಆಗಿ ಉಳಿಯುವುದು ಆ ತಂಡಕ್ಕೆ ಸಾಕಷ್ಟು ಪ್ರಾಮುಖ್ಯವಾಗಿದೆ.