Site icon Vistara News

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

IPL 2024

ಮುಂಬಯಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್ (Grace Hayden) ಮೇ 6 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಮತ್ತು ಎಸ್​ಆರ್​ಎಚ್ ಐಪಿಎಲ್ (IPL 2024) ಪಂದ್ಯಕ್ಕೆ ಮೊದಲು ಮುಂಬೈ ಇಂಡಿಯನ್ಸ್ (ಎಂಐ) ಅಭಿಮಾನಿಗಳೊಂದಿಗೆ ನಡೆಸಿದ ಸಂವಾದ ವೈರಲ್ ಆಗಿದೆ. ಅವರು ಮುಂಬಯಿ ಇಂಡಿಯನ್ಸ್​ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ‘ಮುಂಬೈ ಚಾ ರಾಜಾ ರೋಹಿತ್ ಶರ್ಮಾ’ ಎಂದು ಕೂಗಿರುವುದು ಅಭಿಮಾನಿಗಳ ಉತ್ಸಾಹಕ್ಕೆ ಕಿಚ್ಚು ಹಚ್ಚಿದೆ.

ಐಪಿಎಲ್ 2024 ಋತುವಿನ ಅಧಿಕೃತ ಪ್ರಸಾರಕ ಸ್ಟಾರ್​ ಸ್ಪೋರ್ಟ್ಸ್​​ ನಿರೂಪಕರಲ್ಲಿ ಒಬ್ಬರಾದ ಗ್ರೇಸ್, ಮುಂಬೈ ಇಂಡಿಯನ್ಸ್ ದಂತಕಥೆ ರೋಹಿತ್ ಶರ್ಮಾ ಅವರನ್ನು ಹೊಗಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಅವರು ಮೈದಾನದ ಹೊರಗೆ ನಿಂತು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಗಳೇ ರೋಹಿತ್​ ಶರ್ಮಾ ಅವರನ್ನು ಹೇಗೆ ಕರೆಬೇಕು ಎಂದು ಗ್ರೇಸ್​ಗೆ ಹೇಳಿಕೊಟ್ಟರು. ಆಸ್ಟ್ರೇಲಿಯಾ ಮೂಲದ ಈ ನಿರೂಪಕಿ ಸಿಕ್ಕಿದ ಅವಕಾಶನವನ್ನು ಚೆನ್ನಾಗಿ ಬಳಸಿಕೊಂದು ಹಿಂದಿಯಲ್ಲಿ ಅವರನ್ನು ಹೊಗಳಿದರು.

ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್​ನ ಭಾಗವಾಗಿ, ಗ್ರೇಸ್ ಹೇಡನ್ ಮೇ 6 ರಂದು ಎಸ್​ಆರ್​ಎಚ್​​ ವಿರುದ್ಧದ ಮುಂಬೈ ಇಂಡಿಯನ್ಸ್ ತವರು ಪಂದ್ಯಕ್ಕಾಗಿ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಹೋಗಿದ್ದರು. ಸ್ಟೇಡಿಯಮ್ ಹೊರಗೆ, ಅವರು ಹಲವಾರು ಸ್ಥಳೀಯ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಮತ್ತು ರೋಹಿತ್ ಶರ್ಮಾ ಉತ್ಸಾಹಿಗಳೊಂದಿಗೆ ಸಂವಹನ ನಡೆಸಿದರು. ಈ ವೇಳೆ ಅವರು ರೋಹಿತ್ ಶರ್ಮಾ ಅವರನ್ನು ಅಭಿಮಾನದಿಂದ ಕೂಗಿದರು.

ಇದನ್ನೂ ಓದಿ: IPL 2024 : ಕೆಕೆಆರ್​ನಲ್ಲಿ ನಾಯಕ ಶ್ರೇಯಸ್​ ಮಾತು ಯಾರೂ ಕೇಳುತ್ತಿಲ್ಲ!

ಸ್ಟಾರ್ ಸ್ಪೋರ್ಟ್ಸ್ ಕ್ರೀಡಾಂಗಣದ ಹೊರಗೆ ಸರತಿ ಸಾಲಿನಲ್ಲಿ ಕಾಯುತ್ತಿರುವ ಅಭಿಮಾನಿಗಳೊಂದಿಗೆ ಬೆರೆಯುವ ಒಂದು ನಿಮಿಷದ ತುಣುಕನ್ನು ಸಹ ಹಂಚಿಕೊಂಡಿದೆ. ವೀಡಿಯೊದ ಒಂದು ಹಂತದಲ್ಲಿ, ಗ್ರೇಸ್ ಮುಂಬೈನ ಮಾಜಿ ನಾಯಕನ ಅಭಿಮಾನಿಗಳೊಂದಿಗೆ “ಮುಂಬೈ ಚಾ ರಾಜಾ ರೋಹಿತ್ ಶರ್ಮಾ” ಎಂಬ ಜನಪ್ರಿಯ ರೋಹಿತ್ ಪರ ಘೋಷಣೆಯನ್ನು ಕೂಗಿದ್ದಾರೆ. ಅವರ ಮಾತು ಅಭಿಮಾನಿಗಳ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತ್ತು.

ಗ್ರೇಸ್ ಹೇಡನ್ ಕಳೆದ ಕೆಲವು ವಾರಗಳಿಂದ ಅಧಿಕೃತ ಪ್ರಸಾರಕರಿಗಾಗಿ ಐಪಿಎಲ್ 2024ರ ನಾನಾ ದೃಶ್ಯಗಳನ್ನು ಸಕ್ರಿಯವಾಗಿ ವರದಿ ಮಾಡುತ್ತಿದ್ದಾರೆ. ಅವರ ತಂದೆ ಮ್ಯಾಥ್ಯೂ ಹೇಡನ್ ಕೂಡ ಭಾರತದಲ್ಲಿದ್ದಾರೆ. ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ ) ಆಟಗಾರರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಾಗಿ ತಮ್ಮ ಅಭಿಯಾನ ಮುಂದುವರಿಸುತ್ತಿದ್ದಾರೆ. ಈ ಐಪಿಎಲ್ 2024 ಋತುವಿನಲ್ಲಿ ಇಲ್ಲಿಯವರೆಗೆ, ಡೈನಾಮಿಕ್ ಆರಂಭಿಕ ಬ್ಯಾಟರ್​ 11 ಇನ್ನಿಂಗ್ಸ್​ಗಳಿಂದ 32.60 ಸರಾಸರಿಯಲ್ಲಿ 326 ರನ್ ಗಳಿಸಿದ್ದಾರೆ. ಪಂದ್ಯಾವಳಿ ಪ್ರಾರಂಭವಾಗುವ ಕೆಲವು ತಿಂಗಳುಗಳ ಮೊದಲು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲಾಗಿತ್ತು. ದಶಕದ ನಾಯಕತ್ವವನ್ನು ತೆಗೆದು ಹಾಕಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು.

Exit mobile version