ಮುಂಬಯಿ: ಮುಂಬೈ ಇಂಡಿಯನ್ಸ್ (Mumbai Indians ) ತಂಡ ತನ್ನ ಹೊಸ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೂಲಕ ಐಪಿಎಲ್ 2024 ರಲ್ಲಿ (IPL 2024) ರಲ್ಲಿ ಉತ್ತಮ ಆರಂಭ ಪಡೆದಿಲ್ಲ. ಮೊದಲೇ ನಾಯಕತ್ವ ಬದಲಾವಣೆ ಅಭಿಮಾನಿಗಳನ್ನು ಕೆರಳಿಸಿದ್ದರೆ ಇತ್ತ ಎರಡೆರಡು ಸೋಲು ಇನ್ನಷ್ಟು ಕೆರಳುವಂತೆ ಮಾಡಿದೆ. ಹೀಗಾಗಿ ಕಂಡ ಕಂಡಲ್ಲಿ ಹಾರ್ದಿಕ್ ಪಾಂಡ್ಯನನ್ನು ತಮಾಷೆ ಮಾಡಲು ಅರಂಭಿಸಿದೆ.
𝙔𝙤𝙪 𝙙𝙤𝙣'𝙩 𝙙𝙚𝙨𝙚𝙧𝙫𝙚 𝙩𝙝𝙞𝙨 𝙝𝙖𝙩𝙚 𝙢𝙖𝙣.😢#HardikPandya pic.twitter.com/U9NSqZtv6f
— 𝗜𝗡𝗗𝗥𝗔𝗦𝗘𝗡𝗔 𝗥𝗘𝗗𝗗𝗬🌶️ (@IndraSena_Redee) March 28, 2024
ಮುಂಬಯಿ ಇಂಡಿಯನ್ಸ್ ತಂಡ ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2024 ಋತುವಿನ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಂಬಯಿ ಸೋತಿತ್ತು. ನಂತರ ಹೈದರಾಬಾದ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲನುಭವಿಸಿದೆ.
ಇದನ್ನೂ ಓದಿ : Mayank Yadav : ಪಂಜಾಬ್ ವಿರುದ್ಧ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಮಯಾಂಕ್ ಯಾದವ್ ಯಾರು?
ಹಾರ್ದಿಕ್ ಪಾಂಡ್ಯ ಅಹಮದಾಬಾದ್ ಮತ್ತು ಹೈದರಾಬಾದ್ ಎರಡೂ ಕಡೆ ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಪದಚ್ಯುತಗೊಳಿಸಿದ ಬಗ್ಗೆ ಅಭಿಮಾನಿಗಳು ಬೇಸರಗೊಂಡಿರುವ ಕಾರಣ ಪಾಂಡ್ಯ ಎರಡೂ ಸ್ಥಳಗಳಲ್ಲಿ ನಿಂದನೆಯನ್ನು ಎದುರಿಸುವಂತಾಗಿದೆ.
ಮುಂಬೈ ಇಂಡಿಯನ್ಸ್ ಸೋಮವಾರ ರಾಜಸ್ಥಾನ್ ರಾಯಲ್ಸ್ (Rajastan Royasl) ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಈ ವೇಳೆ ಪಾಂಡ್ಯೆ ಮತ್ತೆ ಅಭಿಮಾನಿಗಳಿಂದ ತೊಂದರೆ ಆಗಬಹುದು ಎಂದು ವರದಿಯಾಗಿದೆ. ಈ ನಡುವೆ, ಪಾಂಡ್ಯಗೆ ತೊಂದರೆ ಕೊಡುವ ಅಭಿಮಾನಿಗಳನ್ನು ಮೈದಾನದಿಂದ ಹೊರಕ್ಕೆ ಹಾಕಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮುಂದಾಗಿದೆ ಎಂಬುದಾಗಿ ವರಿಯಾಗಿದ್ದವು. ಅವೆಲ್ಲವೂ ಸುಳ್ಳು ಎಂಬುದಾಗಿ ಮೂಲಗಳು ತಿಳಿಸಿವೆ.
ಇಲ್ಲ ಹೆಚ್ಚುವರಿ ಭದ್ರತೆ ಇಲ್ಲ
ಏಪ್ರಿಲ್ 1 ರಂದು ನಡೆಯಲಿರುವ ಪಂದ್ಯಕ್ಕೆ ಹೆಚ್ಚುವರಿ ಪೊಲೀಸ್ ಪಡೆ ಯೋಜಿಸಲಾಗಿದೆ ಎಂಬ ವದಂತಿಗಳನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಭಾನುವಾರ ತಳ್ಳಿಹಾಕಿದೆ.
ನಿರ್ದಿಷ್ಟ ಆಟಕ್ಕೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಹಲವು ವರ್ಷಗಳಿಂದ ಪ್ರೇಕ್ಷಕರ ವರ್ತನೆಯ ಬಗ್ಗೆ ಬಿಸಿಸಿಐ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಅದನ್ನೇ ಅನುಸರಿಸುತ್ತಿದ್ದೇವೆ ಎಂದು ಎಂಸಿಎ ಹೇಳಿಕೆಯಲ್ಲಿ ತಿಳಿಸಿದೆ.
ರೋಹಿತ್ ಶರ್ಮಾ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಪರ ತಮ್ಮ 200 ನೇ ಪಂದ್ಯವನ್ನು ಆಡಿದ್ದಾರೆ. ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಆಧಾರಸ್ತಂಭ ಎಂದು ಕರೆದಿದೆ.