ಬೆಂಗಳೂರು : ಕ್ರಿಕೆಟ್ನ ಯಾವುದೇ ಸ್ವರೂಪದಲ್ಲಿ ವಿಕೆಟ್ ಕೀಪರ್ ಪಾತ್ರ ಬಹುಮುಖ್ಯ. ವಿಕೆಟ್ ಹಿಂದೆ ಕ್ಯಾಚ್, ಸ್ಪಂಪ್, ರನ್ಔಟ್ ಹಾಗೂ ಫೀಲ್ಡ್ ಸೆಟ್ಟಿಂಗ್ ಹಾಗೂ ಬೌಲರ್ಗಳಿಗೆ ಯೋಜನೆ ಹಾಕಿ ಕೊಡುವಲ್ಲಿ ವಿಕೆಟ್ ಕೀಪರ್ಪಾತ್ರ ಮಹತ್ವದ್ದು. ಅಂತೆಯೇ ಐಪಿಎಲ್ ಟೂರ್ನಿಯಲ್ಲೂ ಹಲವಾರು ಪಂದ್ಯಗಳನ್ನು ವಿಕೆಟ್ ಕೀಪರ್ಗಳು ಗೆಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಟೂರ್ನಿಯುದ್ದಕ್ಕೂ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಎದುರಾಳಿ ತಂಡದ ಹಲವಾರು ಬ್ಯಾಟರ್ಗಳನ್ನು ಔಟ್ ಮಾಡಿ ಗೆಲುವಿನ ಶ್ರೇಯಸ್ಸು ಪಡೆದುಕೊಂಡಿದ್ದರು. ಈ ರೀತಿಯಾಗಿ ಗರಿಷ್ಠ ಬ್ಯಾಟರ್ಗಳನ್ನು ಔಟ್ ಮಾಡಿದ ಐವರು ವಿಕೆಟ್ಕೀಪರ್ಗಳ ವಿವರ ಇಲ್ಲಿದೆ.
ಇದನ್ನೂ ಓದಿ : WPL 2024 : ಆರ್ಸಿಬಿ ಚಾಂಪಿಯನ್ ಆದ ಬಳಿಕ ಸೃಷ್ಟಿಯಾದ ಕೆಲವು ಮೀಮ್ಸ್ಗಳು ಇಲ್ಲಿವೆ
ಎಂಎಸ್ ಧೋನಿ – 180 ಔಟ್
ಭಾರತದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವಿಕೆಟ್ ಕೀಪರ್ ಆಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ಬ್ಯಾಟರ್ಗಳನ್ನು (180) ಔಟ್ ಮಾಡಿದ್ದಾರೆ. ಇವುಗಳಲ್ಲಿ 138 ಕ್ಯಾಚ್ ಗಳು ಮತ್ತು ಉಳಿದ 42 ಸ್ಟಂಪಿಂಗ್ ಗಳಾಗಿವೆ. ಧೋನಿ 2008 ರಿಂದ ಐಪಿಎಲ್ನ ಎಲ್ಲಾ ಋತುಗಳಲ್ಲಿ ವಿಶೇಷ ವಿಕೆಟ್ ಕೀಪರ್ ಆಗಿ ಆಡಿದ್ದಾರೆ. ನಾಯಕನಾಗಿ ಮತ್ತು ಕೀಪರ್ ಆಗಿ ಸಿಎಸ್ಕೆ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ದಿನೇಶ್ ಕಾರ್ತಿಕ್- 169 ಔಟ್
ದಿನೇಶ್ ಕಾರ್ತಿಕ್ ಐಪಿಎಲ್ನ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಐಪಿಎಲ್ನಲ್ಲಿ ವಿಕೆಟ್ ಕೀಪರ್ ಆಗಿ ಒಟ್ಟು 242 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 133 ಕ್ಯಾಚ್ಗಳು ಮತ್ತು 36 ಸ್ಟಂಪಿಂಗ್ಗಳು ಸೇರಿದಂತೆ 169 ಔಟ್ ಮಾಡಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ ವಿಕೆಟ್ ಹಿಂದೆ ಎರಡನೇ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಅವರ ಹೆಸರಿನಲ್ಲಿದೆ. ಕಾರ್ತಿಕ್ ಕಳೆದ ಕೆಕೆಆರ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ವೃದ್ಧಿಮಾನ್ ಸಹಾ -106 ಔಟ್
ವೃದ್ಧಿಮಾನ್ ಸಹಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಕೆಟ್ ಹಿಂದಿನ ಉತ್ತಮ ಆಟಗಾರ ಪರಿಗಣಿಸಲ್ಪಟ್ಟಿದ್ದಾರೆ. ಐಪಿಎಲ್ ಗ್ಲವ್ಸ್ ಧರಿಸಿ ಅವರು ತಮ್ಮ ಕೌಶಲ ಪ್ರದರ್ಶಿಸಿದ್ದಾರೆ. ಅವರು 82 ಕ್ಯಾಚ್ಗಳು ಮತ್ತು 24 ಸ್ಟಂಪಿಂಗ್ಗಳು ಸೇರಿದಂತೆ ಒಟ್ಟು 106 ಬ್ಯಾಟರ್ಗಳನ್ನು ಔಟ್ಮಾ ಡಿದ್ದಾರೆ. ಅವರು 2020 ರ ಋತುವಿನಲ್ಲಿ ಎಸ್ಆರ್ಎಚ್ ಪರ ಬ್ಯಾಟ್ನೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದರು.
ರಾಬಿನ್ ಉತ್ತಪ್ಪ- 90 ಔಟ್ಗಳು
ರಾಬಿನ್ ಉತ್ತಪ್ಪ ತಮ್ಮ ಐಪಿಎಲ್ ತಂಡಗಳಿಗಾಗಿ ನಿಯಮಿತವಾಗಿ ವಿಕೆಟ್ ಕೀಪಿಂಗ್ ಮಾಡದಿದ್ದರೂ, ಆಗಾಗ ಪ್ರಭಾವಿ ಕೆಲಸ ಮಾಡಿದ್ದಾರೆ. ಲೀಗ್ ಇತಿಹಾಸದಲ್ಲಿ ಅವರು ಇಲ್ಲಿಯವರೆಗೆ 90 ಔಟ್ಗಳನ್ನು ಮಾಡಿದ್ದಾರೆ. ಅದರಲ್ಲಿ 58 ಕ್ಯಾಚ್ಗಳು ಮತ್ತು 32 ಸ್ಟಂಪಿಂಗ್ ಸೇರಿವೆ. ಲೀಗ್ನಲ್ಲಿ ಹೆಚ್ಚಿನ ಸ್ಟಂಪಿಂಗ್ಗಳ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2022 ಆವೃತ್ತಿಯಲ್ಲಿ ಕಾಣಿಸಿಕೊಂಡ ನಂತರ ಅವರು ನಿವೃತ್ತಿ ಘೋಷಿಸಿದ್ದಾರೆ.
ಪಾರ್ಥಿವ್ ಪಟೇಲ್- 81 ಔಟ್
ಭಾರತದ ಅನುಭವಿ ಕೀಪರ್ ಎಲ್ಲಾ ರೀತಿಯ ಆಟದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಐಪಿಎಲ್ 2020 ರಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದರು. ಅವರು ಲೀಗ್ ಇತಿಹಾಸದಲ್ಲಿ 6 ವಿಭಿನ್ನ ತಂಡಗಳಿಗಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಥಿವ್ ವಿಕೆಟ್ ಹಿಂದೆ ಒಟ್ಟು 81 ಔಟ್ಗಳನ್ನು ಮಾಡಿದ್ದಾರೆ. ಅದರಲ್ಲಿ 65 ಕ್ಯಾಚ್ಗಳು. ಉಳಿದವು ಸ್ಟಂಪಿಂಗ್ಗಳಾಗಿವೆ.