ಮುಂಬೈ: ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡದ ಯೋಜನೆ ಸಂಪೂರ್ಣವಾಗಿ ಬುಡಮೇಲಾಗಿದೆ. ಹೀಗಾಗಿ ಐಪಿಎಲ್ 17ನೇ ಆವೃತ್ತಿಯ (IPL 2024) 14 ಪಂದ್ಯಗಳಲ್ಲಿ 10 ಸೋಲು ಮತ್ತು ಕೇವಲ 4 ಗೆಲುವಿನೊಂದಿಗೆ 8 ಅಂಕಗಳೊಂದಿಗೆ ಅಭಿಯಾನ ಮುಗಿಸಿದೆ. ತವರಿನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ 18 ರನ್ಗಳ ಸೋಲಿಗೆ ಒಳಗಾಗಿದೆ. ಎರಡೂ ತಂಡಗಳಿಗೆ ಇದು ಕೊನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆದ್ದಿರುವ ಲಕ್ನೊ ಸೂಪರ್ ಜೈಂಟ್ಸ್ ತಂಡ ಒಟ್ಟು 7 ಗೆಲುವಿನೊಂದಿಗೆ 14 ಅಂಕಗಳ ಸಮೇತ ಏಳನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಮತ್ತೊಂದು ಬಾರಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಅತ್ಯಂತ ನಿರಾಶಾದಾಯಕ ಸೀಸನ್ ಅನ್ನು ಎದುರಿಸಿದರು.
Not going down without a fight 💪
— IndianPremierLeague (@IPL) May 17, 2024
Naman Dhir gets to his maiden IPL FIFTY 👏
Watch the match LIVE on @StarSportsIndia and @JioCinema 💻📱#TATAIPL | #MIvLSG pic.twitter.com/m65qpL3M8f
ಇಲ್ಲಿನ ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಚೇಸಿಂಗ್ ಸುಲಭ ಎಂಬ ಯೋಜನೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿ ಮುಂಬೈ ತನ್ನೆಲ್ಲ ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಸುಲಭ ಎಂದುಕೊಂಡಿದ್ದ ಮುಂಬೈ ತಂಡಕ್ಕೆ ಮಧ್ಯದಲ್ಲಿ ಸುರಿದ ಮಳೆ ಅಡಚಣೆ ಮಾಡಿತು. ಏಕಾಏಕಿ ವಾತಾವರಣ ತಂಪುಗೊಂಡ ಕಾರಣ ಇಬ್ಬನಿ ಪರಿಣಾಮವನ್ನು ಅನುಭವಿಸಿ ಸುಲಭವಾಗಿ ಸ್ಕೋರ್ ಬಾರಿಸಿ ಗೆಲ್ಲುವ ಯೋಜನೆ ವಿಫಲಗೊಂಡಿತು.
Not going down without a fight 💪
— IndianPremierLeague (@IPL) May 17, 2024
Naman Dhir gets to his maiden IPL FIFTY 👏
Watch the match LIVE on @StarSportsIndia and @JioCinema 💻📱#TATAIPL | #MIvLSG pic.twitter.com/m65qpL3M8f
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಅದ್ಭುತ ಆರಂಭ ಪಡೆಯಿತು. ರೋಹಿತ್ ಶರ್ಮಾ 38 ಎಸೆತಕ್ಕೆ 6 ರನ್ ಬಾರಿಸಿ ಮಿಂಚಿದರು. ಡೀವಾಲ್ಡ್ ಬ್ರೇವಿಸ್ 23 ರನ್ ಹೊಡೆದರು. ಈ ಜೋಡಿ 8. 4 ಓವರ್ಗಳಲ್ಲಿ ಮೊದಲ ವಿಕೆಟ್ಗೆ 84 ರನ್ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿತು. ಆದರೆ, ಆ ಬಳಿಕ ಮುಂಬೈ ತಂಡ ಬ್ಯಾಟಿಂಗ್ ವೈಫಲ್ಯ ಪ್ರದರ್ಶನಗೊಂಡಿತು. ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರೆ ಇಶಾನ್ ಕಿಶನ್ 14 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಕೊಡುಗೆ ಕೇವಲ 16 ರನ್. ನೆಹಲ್ ವದೇರಾ 1 ರನ್ಗೆ ಔಟಾಗುವ ಮೂಲಕ ಮುಂಬೈ ಆಸೆ ಕಮರಿತು. ಏತನ್ಮದ್ಯೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಧಿರ್ 28 ಎಸೆತಕ್ಎಕ 68 ರನ್ ಬಾರಿಸಿದರು. ಅದರೆ ಅವರಿಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Rohit Sharma : ಆಡಿಯೊ ಬಂದ್ ಮಾಡಪ್ಪ; ಕ್ಯಾಮೆರಾಮನ್ಗೆ ಕೈಮುಗಿದು ಬೇಡಿಕೊಂಡ ರೋಹಿತ್ ಶರ್ಮಾ
ಪೂರನ್ ಅಬ್ಬರ್
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಲಕ್ನೊ ಪರ ಆರಂಭಿಕ ಬ್ಯಾಟರ್ ರಾಹುಲ್ ಕಷ್ಟಪಟ್ಟು 55 ರನ್ ಬಾರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ 29 ಎಸೆತಗಳಿಗೆ 75 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತೊಂದ ಬಾರಿ ವಿಫಲಗೊಂಡು ಶೂನ್ಯಕ್ಕೆ ಔಟಾದರೆ ಸ್ಟೊಯ್ನಿಸ್ 28 ರನ್ ಚಚ್ಚಿದರು. ದೀಪಕ್ ಹೂಡ 11 ರನ್ ಹೊಡೆದರೆ ಕೊನೆಯಲ್ಲಿ ಆಯುಷ್ ಬದೊನಿ 22 ರನ್ ಔಟಾದರೆ. ಕೃಣಾಲ್ ಪಾಂಡ್ಯ 12 ರನ್ಗೆ ಔಟಾದರು.