Site icon Vistara News

IPL 2024 : 250 ​ ಪಂದ್ಯಗಳನ್ನಾಡಿದ ಮುಂಬಯಿ ಇಂಡಿಯನ್ಸ್​, ಉಳಿದ ತಂಡಗಳದ್ದೆಷ್ಟು?

Mumbai Indians

ಮುಂಬಯಿ: ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians ) ಪಂದ್ಯಾವಳಿಯ ಇತಿಹಾಸದಲ್ಲಿ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್​ 2024ರ (IPL 2024) ಪಂದ್ಯದಲ್ಲಿ ಮೆನ್ ಇನ್ ಬ್ಲೂ ಆ್ಯಂಡ್​ ಗೋಲ್ಡ್ ಈ ಸಾಧನೆ ಮಾಡಿದೆ. ಐಪಿಎಲ್​​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಆರ್​ಸಿಬಿ ತಂಡ (244 ಪಂದ್ಯಗಳು), ಡೆಲ್ಲಿ ಕ್ಯಾಪಿಟಲ್ಸ್ (241 ಪಂದ್ಯಗಳು), ಕೋಲ್ಕತಾ ನೈಟ್ ರೈಡರ್ಸ್ (239 ಪಂದ್ಯಗಳು), ಪಂಜಾಬ್ ಕಿಂಗ್ಸ್ (235 ಪಂದ್ಯಗಳು) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (228 ಪಂದ್ಯಗಳು) ನಂತರದ ಸ್ಥಾನಗಳಲ್ಲಿವೆ.

ಹೆಚ್ಚು ಪಂದ್ಯಗಳನ್ನಾಡಿದ ತಂಡಗಳ ಪಟ್ಟಿ ಇಲ್ಲಿದೆ

ರೋಹಿತ್ ಪರ ಪೋಸ್ಟರ್​ಗೆ ವಾಂಖೆಡೆಯಲ್ಲಿ ತಡೆ; ಅಭಿಮಾನಿಗಳ ಆಕ್ರೋಶ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬಯಿ ಇಂಡಿಯನ್ಸ್​ ನಡುವಿನ ಐಪಿಎಲ್​ 2024ರ (IPL 2024 ) ಪಂದ್ಯಕ್ಕೂ ಮುನ್ನ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪರ ಪೋಸ್ಟರ್​ ಹಿಡಿದುಕೊಂಡು ಬಂದ ಅಭಿಮಾನಿಗಳಿಗೆ ಸ್ಟೇಡಿಯಮ್​ ಹೊರಗೆಯೇ ತಡೆಯೊಡ್ಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಮುಂಬಯಿ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಗೊಂಡಿರುವ ನಡುವೆ ಈ ಪ್ರಸಂಗ ನಡೆದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಜೋರು ಚರ್ಚೆ ನಡೆದಿದೆ.

ರೋಹಿತ್ ಅವರನ್ನು ತಂಡದ ನಾಯಕತ್ವದಿಂದ ಕೆಳಕ್ಕೆ ಇಳಿಸಿರುವುದು ಅವರ ಅಭಿಮಾನಿಗಳನ್ನು ಕ್ರೋಧಗೊಳ್ಳುವಂತೆ ಮಾಡಿದೆ. ಅವರೆಲ್ಲರೂ ಪಾಂಡ್ಯ ವಿರುದ್ಧ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಮೈದಾನದಲ್ಲೂ ಅದು ಮುಂದುವರಿದಿದೆ. ಇದಕ್ಕೆ ತಡೆಯೊಡ್ಡಲು ಮುಂದಾಗಿರುವ ಕ್ರಿಕೆಟ್ ಸ್ಟೇಡಿಯಮ್​ ಅಧಿಕಾರಿಗಳು ರೋಹಿತ್​ ಪರ ಪೋಸ್ಟರ್​ಗಳನ್ನು ಒಳಕ್ಕೆ ತೆಗೆದುಕೊಂಡು ಹೋಗಲು ಬಿಟ್ಟಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Rohit Sharma : ‘ಶೂನ್ಯ’ದಲ್ಲಿ ಸಾಧನೆ ಮಾಡಿದ ರೋಹಿತ್ ಶರ್ಮಾ!

ಹಾರ್ದಿಕ್ ಪಾಂಡ್ಯ ಅವರನ್ನು ನಿಂದನೆ ಮಾಡುವುದು ಕಂಡುಬಂದರೆ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ಯಲಾಗುವುದು ಎಂಬ ವರದಿಗಳು ಬಂದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ, ಅಹಮದಾಬಾದ್ ಮತ್ತು ಹೈದರಾಬಾದ್​​ನ ಕ್ರೀಡಾಂಗಣಗಳಲ್ಲಿ ಅವರಿಗೆ ಅಭಿಮಾನಿಗಳು ಕಿಚಾಯಿಸಿದ್ದರು.

Exit mobile version