Site icon Vistara News

Mumbai Indians : ಮುಂಬಯಿ ಇಂಡಿಯನ್ಸ್​ ತಂಡಕ್ಕೆ ವೇಗದ ಬೌಲರ್ ಸೇರ್ಪಡೆ

Luke wood

ನವದೆಹಲಿ: ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಹೊರಗುಳಿದಿದ್ದಾರೆ. ಮುಂಬರುವ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಿದ್ದ ಆಟಗಾರರಲ್ಲಿ ಬೆಹ್ರೆನ್ಡಾರ್ಫ್ ಕೂಡ ಒಬ್ಬರು. ಕಳೆದ ವರ್ಷ ಅವರು 12 ಪಂದ್ಯಗಳಲ್ಲಿ 27.64 ಸರಾಸರಿ, 9.21 ಎಕಾನಮಿ ಮತ್ತು 18.00 ಸ್ಟ್ರೈಕ್ ರೇಟ್​ನೊಂದಿಗೆ 14 ವಿಕೆಟ್​ಗಳನ್ನು ಉರುಳಿಸಿದ್ದರು. ಅವರ ಬದಲಿಗೆ ಇದೀಗ ಲ್ಯೂಕ್ ವುಡ್ ತಂಡ ಸೇರಿಕೊಂಡಿದ್ದಾರೆ.

ಬೆಹ್ರೆನ್ಡಾರ್ಫ್ ಅನುಪಸ್ಥಿತಿಯು ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗಕ್ಕೆ ಎರಡನೇ ಹೊಡೆತವಾಗಿದೆ. ಏಕೆಂದರೆ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ದಿಲ್ಶಾನ್ ಮಧುಶಂಕಾ ಕೂಡ ಐಪಿಎಲ್ 2024 ರ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾದ ಸ್ಟಾರ್ ಆಟಗಾರ ದಿಲ್ಶಾನ್ ಮಧುಶಂಕಾ ಎಡಗೈ ಸ್ನಾಯುಸೆಳೆತದ ಗಾಯದಿಂದ ಬಳಲುತ್ತಿದ್ದು, 4-6 ವಾರಗಳ ಕಾಲ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.

ಜೇಸನ್ ಬೆಹ್ರೆನ್ಡಾರ್ಫ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 28 ವರ್ಷದ ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗಿ ಲ್ಯೂಕ್ ವುಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವೇಗಿ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಝಲ್ಮಿ ಪರ ಆಡಿದ್ದರು.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2024ರಲ್ಲಿ 11 ಪಂದ್ಯಗಳಲ್ಲಿ, ಲ್ಯೂಕ್ ವುಡ್ 29.08 ಸರಾಸರಿ, 8.24 ಎಕಾನಮಿ ಮತ್ತು 21.16 ಸ್ಟ್ರೈಕ್ ರೇಟ್ನೊಂದಿಗೆ 12 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಲ್ಯೂಕ್ ವುಡ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು 50 ಲಕ್ಷ ರೂ.ಗೆ ಸೇರಿಕೊಳ್ಳಲಿದ್ದಾರೆ.

ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL2024 ) ಗಾಗಿ ಗಾಯಗೊಂಡ ಜೇಸನ್ ಬೆಹ್ರೆನ್ಡಾರ್ಫ್ ಬದಲಿಗೆ ಮುಂಬೈ ಇಂಡಿಯನ್ಸ್ (ಎಂಐ) ಲ್ಯೂಕ್ ವುಡ್ ಅವರನ್ನು ಹೆಸರಿಸಿದೆ. ಎಡಗೈ ವೇಗಿ – ವುಡ್ ಇಂಗ್ಲೆಂಡ್ ಪರ 5 ಟಿ 20 ಪಂದ್ಯಗಳನ್ನು ಆಡಿದ್ದಾರೆ, ಜೊತೆಗೆ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಬಳಿ 8 ಟಿ 20 ಐ ವಿಕೆಟ್ ಗಳಿವೆ. ವುಡ್ 50 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಸೇರಲಿದ್ದಾರೆ, “ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಟಿ 20 ಕ್ರಿಕೆಟ್​​ ಲ್ಲಿ 140 ಪಂದ್ಯಗಳನ್ನು ಆಡಿರುವ ವುಡ್ 25.87 ಸರಾಸರಿಯಲ್ಲಿ 147 ವಿಕೆಟ್​ಗಳನ್ನು ಪಡೆದಿದ್ದಾರೆ, 8.45 ಎಕಾನಮಿ ಮತ್ತು 18.3 ಸ್ಟ್ರೈಕ್ ರೇಟ್, 50 ರನ್​ಗೆ 5 ವಿಕೆಟ್​ ಪಡೆದ ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಹೊಂದಿದ್ದಾರೆ.

ಹಾರ್ದಿಕ್ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 5 ಬಾರಿ ಐಪಿಎಲ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕುವ ಮೂಲಕ ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ನೇಮಿಸಿದೆ.

ಇದನ್ನೂ ಓದಿ : IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

ಮುಂಬೈ ಇಂಡಿಯನ್ಸ್ (ಎಂಐ) ಕಳೆದ ಕೆಲವು ಋತುಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಫೈನನ್​ಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವನ್ನು ಸೋಲಿಸಿದ ನಂತರ 2020ರ ನಂತರ ಟ್ರೋಫಿ ಗೆದ್ದಿಲ್ಲ.

ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಖ್ಯ ಕೋಚ್ ಮಾರ್ಕ್ ಬೌಷರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ವಿಷಯಗಳ ಬಗ್ಗೆ ಮಾತನಾಡಿದರು. ಸಂವಾದದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿದೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ತಂಡವನ್ನು ಮುನ್ನಡೆಸುವಾಗ ಮಾಜಿ ಮುಂಬೈ ಇಂಡಿಯನ್ಸ್ ನಾಯಕನ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಮಾರ್ಚ್ 18 ರ ಸೋಮವಾರ ಫ್ರಾಂಚೈಸಿಗೆ ಸೇರಿದರು.

Exit mobile version