Site icon Vistara News

IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

IPL 2024

ಬೆಂಗಳೂರು: ತಾವು ಆರಾಧಿಸುವ ಕ್ರಿಕೆಟಿಗರನ್ನು ಸಮಯ ಸಿಕ್ಕಾಗೆಲ್ಲ ನೋಡುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಸಂತೋಷದ ಸುದ್ದಿ. ಆದರೆ ಮೂರು ಪ್ರಖ್ಯಾತ ಕ್ರಿಕೆಟಿಗರನ್ನು ಒಂದೇ ವೇದಿಕೆಯಲ್ಲಿ ನೋಡುವುದರಲ್ಲಿ ಸಿಗುವ ಆನಂದ ಇನ್ನೆಲ್ಲೂ ಸಿಗುವುದಿಲ್ಲ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸಮಯದಲ್ಲಿ ಪ್ರಸಾರವಾದ ಮ್ಯೂಚುವಲ್ ಫಂಡ್​ ಒಂದರ ಜಾಹೀರಾತು ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಈ ಜಾಹೀರಾತಿನಲ್ಲಿ, ಮೂರು ತಲೆಮಾರಿನ ಭಾರತೀಯ ಕ್ರಿಕೆಟ್ ನಾಯಕರಾದ ಸಚಿನ್ ತೆಂಡೂಲ್ಕರ್, ಎಂ. ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಸೇರಿ ಕಾಣಿಸಿಕೊಂಡಿದ್ದಾರೆ. ಇದು ಸಂಚಲನ ಮೂಡಿಸಿದೆ.

ಜಾಹೀರಾತಿನಲ್ಲಿ ತನ್ನ ಮರೆಗುಳಿತನಕ್ಕೆ ಹೆಸರುವಾಸಿಯಾದ ರೋಹಿತ್ ತನ್ನ ಫೋನ್ ಅನ್ನು ತಂಡದ ಬಸ್​ನಲ್ಲಿ ಬಿಟ್ಟು ಹೋಗುವ ಹಾಸ್ಯಮಯವಾಗಿ ಸಂದರ್ಭವನ್ನು ತೋರಿಸಲಾಗಿದೆ. ಇದು ಮ್ಯೂಚುವಲ್​​ಫಂಡ್​ಸಹಿಹೈ ಎಂಬ ಪೋರ್ಟಲ್​ ಕುರಿತಾದ ಜಾಹೀರಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಮೂಲಕ ಇದನ್ನು ಹೆಚ್ಚು ರಸವತ್ತಾಗಿ ತೋರಿಸಲಾಗಿದೆ.

ಭಾರತದ ಮಾಜಿ ಆಟಗಾರರಾದ ಸಚಿನ್ ಮತ್ತು ಎಂ. ಎಸ್. ಧೋನಿ, ನಿವೃತ್ತಿ ನಂತರದ ಹೂಡಿಕೆ ಯೋಜನೆಯ ಬಗ್ಗೆ ರೋಹಿತ್​ಗೆ ಸಲಹೆ ನೀಡಲು ಮುಂದುವರಿಯುತ್ತಾರೆ. ಆದರೆ, ರೋಹಿತ್​ ಅದಾಗಲೇ ತಾವು ಹೂಡಿಕೆ ಮಾಡುತ್ತಿರುವಾಗಿ ಹೇಳುವ ಮೂಲಕ ಜಾಹೀರಾತು ಮುಂದುವರಿಯುತ್ತದೆ.

ಭಾರತದ ಮಾಜಿ ನಾಯಕ ಎಂ. ಎಸ್. ಧೋನಿ ಮತ್ತು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮ್ಯೂಚುವಲ್ ಫಂಡ್​ಗಳನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಆದರೆ, ಈ ಹೊಸ ಜಾಹೀರಾತಿನಲ್ಲಿ ರೋಹಿತ್ ಶರ್ಮಾ ಅವರನ್ನೂ ಸೇರಿಸಿಕೊಳ್ಳಲಾಗಿದೆ.

ಜಾಹೀರಾತಿನಲ್ಲಿ ಹಾಸ್ಯಮಯ ಅಂಶಗಳಿವೆ ಇದು ರೋಹಿತ್ ಅ ಮರೆತುಹೋಗುವ ಅಭ್ಯಾಸವನ್ನು ಎತ್ತಿ ತೋರಿಸುತ್ತದೆ. ಮೂವರು ಕ್ರಿಕೆಟ್ ಐಕಾನ್​ಗಳು ಲಘೂ ಹಾಸ್ಯದಲ್ಲಿ ತೊಡಗಿಕೊಂಡಿರುದು ಕಾಣುತ್ತದೆ. ಈ ಪ್ರಸಿದ್ಧ ಆಟಗಾರರು ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳುವುದು ವೀಕ್ಷಕರಿಗೆ ಒಂದು ಅದ್ಭುತ ಹಳಹಳಿಕೆಯಾಗಿರುತ್ತದೆ.

ಐಪಿಎಲ್ 2024 ನಂತರ ರೋಹಿತ್ ಶರ್ಮಾ ಭವಿಷ್ಯವೇನು?

2024 ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಪಂದ್ಯಾವಳಿಯನ್ನು ಆಕ್ರಮಣಕಾರಿ ವಿಧಾನದೊಂದಿಗೆ ಪ್ರಾರಂಭಿಸಿದರು. ಆದರೆ ಅಂತಿಮ ಹಂತಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಹೆಣಗಾಡಿದರು. ಇದರ ಹೊರತಾಗಿಯೂ, ಅವರು ತವರು ನೆಲದಲ್ಲಿ ಸಿಎಸ್​​ಕೆ ವಿರುದ್ಧ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಎಲ್ಎಸ್​ಜಿ ವಿರುದ್ಧ ಬಲವಾದ ಪ್ರದರ್ಶನದೊಂದಿಗೆ ಋತುವನ್ನು ಮುಗಿಸಿದರು. ಒಟ್ಟಾರೆಯಾಗಿ, ಶರ್ಮಾ 14 ಪಂದ್ಯಗಳಲ್ಲಿ 150 ರ ಸ್ಟ್ರೈಕ್ ರೇಟ್ ನೊಂದಿಗೆ 417 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಋತು ಹೊಂದಿದ್ದು, 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಜೂನ್ 1 ರಿಂದ ಯುಎಸ್ಎಯಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Exit mobile version