ಚೆನ್ನೈ: ಗುಜರಾತ್ ಟೈಟಾನ್ಸ್ ವಿರುದ್ಧ 63 ರನ್ಗಳ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ (IPL 2024 Points Table) ಅಗ್ರಸ್ಥಾನ ಮರಳಿ ಪಡೆದುಕೊಂಡಿದೆ. ಋತುರಾಜ್ ಗಾಯಕ್ವಾಡ್ ಪಡೆ ಈಗ 2 ಪಂದ್ಯಗಳಲ್ಲಿ ಅಜೇಯ ಓಟ ಓಡಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಆರಂಭಿಕ ಪಂದ್ಯಗಳನ್ನು ಗೆದ್ದು 2 ಮತ್ತು 3 ನೇ ಸ್ಥಾನದಲ್ಲಿವೆ. ಇದರೊಂದಿಗೆ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪ್ರಾಬಲ್ಯ ಸಾಧಿಸುವುದನ್ನು ಮುಂದುವರಿಸಿದೆ.
2⃣ in 2⃣ for Chennai Super Kings 👏👏
— IndianPremierLeague (@IPL) March 26, 2024
That's some start to #TATAIPL 2024 for the men in yellow 💛
Scorecard ▶️ https://t.co/9KKISx5poZ#TATAIPL | #CSKvGT | @ChennaiIPL pic.twitter.com/njrS8SkqcM
ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಐಪಿಎಲ್ 17ನೇ ಆವೃತ್ತಿಯ (IPL 2024) 7ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans ) ವಿರುದ್ಧ 63 ರನ್ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ನರು ಸತತವಾಗಿ ಎರಡನೇ ವಿಜಯವನ್ನು ತನ್ನದಾಗಿಸಿಕೊಂಡಿದ್ದಾರೆ. ಶಿವಂ ದುಬೆ (23 ಎಸೆಕ್ಕೆ 52 ರನ್) ಅರ್ಧ ಶತಕದೊಂದಿಗೆ ಮಿಂಚಿದರು ಹಾಗೂ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
ಅಂಕಪಟ್ಟಿ ಈ ರೀತಿ ಇದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಚೆನ್ನೈ ಸೂಪರ್ ಕಿಂಗ್ಸ್ | 2 | 2 | 0 | 4 (+1.979) |
ರಾಜಸ್ಥಾನ್ ರಾಯಲ್ಸ್ | 1 | 1 | 0 | 2 (+1.000) |
ಕೋಲ್ಕತ್ತಾ ನೈಟ್ ರೈಡರ್ಸ್ | 1 | 1 | 0 | 2 (+0.200) |
ಪಂಜಾಬ್ ಕಿಂಗ್ಸ್ | 1 | 1 | 0 | 2(+0.025) |
ಆರ್ಸಿಬಿ | 2 | 1 | 1 | 2(-0.180) |
ಗುಜರಾತ್ ಟೈಟಾನ್ಸ್ | 2 | 1 | 1 | 2 (-1.425) |
ಸನ್ರೈಸರ್ಸ್ ಹೈದರಾಬಾದ್ | 1 | 0 | 1 | 0 (-0.200) |
ಮುಂಬೈ ಇಂಡಿಯನ್ಸ್ | 1 | 0 | 1 | 0 (-0.300) |
ಡೆಲ್ಲಿ ಕ್ಯಾಪಿಟಲ್ಸ್ | 1 | 0 | 1 | 0 (-0.455) |
ಲಕ್ನೋ ಸೂಪರ್ ಜೈಂಟ್ಸ್ | 1 | 0 | 1 | 0 (-1.000) |
ಪಂದ್ಯದಲ್ಲಿ ಏನಾಯಿತು?
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ತನ್ನೆಲ್ಲಾ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 143 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Shubman Gill : ರೋಹಿತ್ ರೀತಿಯಲ್ಲೇ ಟಾಸ್ ವೇಳೆ ತಪ್ಪು ಮಾಡಿದ ಶುಬ್ಮನ್ ಗಿಲ್
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ಗುಜರಾತ್ ತಂಡ ಹೆಚ್ಚು ದಿಟ್ಟತನ ತೋರಲಿಲ್ಲ. ಚೆನ್ನೈನ ಸಂಘಟಿತ ಬೌಲಿಂಗ್ ಸಾಮರ್ಥ್ಯಕ್ಕೆ ಬೆದರಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 21 ರನ್ ಬಾರಿಸಿದರೆ, ಶುಬ್ಮನ್ ಗಿಲ್ ಮತ್ತೊಮ್ಮೆ ವೈಫಲ್ ಎದುರಿಸಿ 8 ರನ್ಗೆ ಔಟಾದರು. ಸಾಯಿ ಸುದರ್ಶನ್ 37 ರನ್ ಬಾರಿಸಿದರು. ವಿಜಯ ಶಂಕರ್ 12 ರನ್ ಬಾರಿಸಿ ಧೋನಿ ಹಿಡಿದ ಅದ್ಬುತ ಕ್ಯಾಚ್ಗೆ ಬಲಿಯಾದರು. ಒಮರ್ಜೈ ಕೊಡುಗೆ 11 ರನ್.
ಭರ್ಜರಿ ಬ್ಯಾಟಿಂಗ್ ಮಾಡಿದ ಚೆನ್ನೈ
ಟಾಸ್ ಸೋತು ಮೊದಲು ಮೊದಲು ಬ್ಯಾಟ್ ಮಾಡಿದ ಚೆನ್ನೈಉತ್ತಮ ಆರಂಭವನ್ನೇ ಪಡೆಯಿತು. ನ್ಯೂಜಿಲ್ಯಾಂಡ್ ಎಡಗೈ ಆಟಗಾರ ರಚಿನ್ ರವೀಂದ್ರ 20 ಎಸೆತಗಳಲ್ಲಿ 47 ರನ್ ಬಾರಿಸಿ ಚೆನ್ನೈ ಅಭಿಮಾನಿಗಳ ಮನ ಸೆಳೆದರು. ಮತ್ತೊಬ್ಬ ಆರಂಭಿಕ ಆಟಗಾರ ಹಾಗೂ ನಾಯಕ ಋತುರಾಜ್ ಕೂಡ 46 ರನ್ ಬಾರಿಸಿದರು. ಮೊದಲ ವಿಕೆಟ್ಗೆ 62 ರನ್ ಬಾರಿಸಿ ಚೆನ್ನೈ ಅಜಿಂಕ್ಯ ರಹಾನೆ ಅವರನ್ನು 12 ರನ್ಗಳಿಗೆ ಕಳೆದುಕೊಳ್ಳುವ ಮೂಲಕ ಬೇಸರಕ್ಕೆ ಒಳಗಾಯಿತು.
ದುಬೆ ಅರ್ಧ ಶತಕ
ಮುಂಬಡ್ತಿ ಪಡೆದು ಬ್ಯಾಟ್ ಮಾಡಲು ಬಂದ ಎಡಗೈ ಬ್ಯಾಟರ್ ಶಿವಂ ದುಬೆ ಮತ್ತೊಮ್ಮೆ ಮಿಂಚಿದರು. ಚೆನ್ನೈ ಸ್ಟೇಡಿಯಮ್ನ ಎಲ್ಲ ಕಡೆಗೆ ಬೌಂಡರಿ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಗಮನ ಸೆಳದರು. ಅವರು ಔಟಾಗುವ ಮೊದಲು 23 ಎಸೆತಗಳಿಗೆ 51 ರನ್ ಬಾರಿಸಿದರು. ಅವರ ಅಬ್ಬರದಿಂದಾಗಿ ಚೆನ್ನೈ ಸ್ಕೋರ್ ಬೋರ್ಡ್ ಬೆಳೆಯಿತು. ಇದು ಹಾಲಿ ಆವೃತ್ತಿಯ ದುಬೆ ಪಾಲಿನ ಸತತ ಎರಡು ಅರ್ಧ ಶತಕ. ಈ ಮೂಲಕ ಅವರು ಮುಂಬರುವ ಟಿ20 ವಿಶ್ವ ಕಪ್ ತಂಡದ ಬಾಗಿಲು ಬಡಿದರು.
ಡ್ಯಾರಿಲ್ ಮಿಚೆಲ್ 20 ಎಸೆತಕ್ಕೆ 24 ರನ್ ಬಾರಿಸಿದರೆ, ಯುವ ಬ್ಯಾಟರ್ ಸಮೀರ್ ರಿಜ್ವಿ 6 ಎಸೆತಕ್ಕೆ 14 ರನ್ ಬಾರಿಸಿ ಗಮನ ಸೆಳೆದರು.