Site icon Vistara News

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಬ್ಯಾಟ್ಸ್ಮನ್ ರಜತ್ ಪಾಟಿದಾರ್(Rajat Patidar) ತಮ್ಮ ತಂಡಕ್ಕಾಗಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ವೇಳೆ ಅವರು ತಂಡದ ನೆರವಿಗೆ ನಿಂತರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ರಜತ್ ಪಾಟಿದಾರ್ (Rajat Patidar) ತಮ್ಮ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿದರು.

ರಜತ್ ಪಾಟಿದಾರ್ ತಮ್ಮ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳ ಹುಟ್ಟಡಗಿಸಿದರು. ಪಂದ್ಯಾವಳಿಯಲ್ಲಿ ಅವರು ಮತ್ತೊಂದು ಅರ್ಧಶತಕ ಗಳಿಸಿದರು. ಬಲಗೈ ಬ್ಯಾಟರ್​ ಋತುವಿನಲ್ಲಿ ಸತತ 5 ನೇ ಅರ್ಧಶತಕವನ್ನು ಗಳಿಸಿದರು. ಏತನ್ಮಧ್ಯೆ ಅವರು ಬ್ಯಾಟಿಂಗ್ ಮಾಡುತ್ತಿದ್ದ ರೀತಿಯಿಂದ, ಅವರು ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ತೋರಿತ್ತು. ಆದಾಗ್ಯೂ, ಕ್ರೀಸ್​ನಲ್ಲಿ ಅವರ ಅಬ್ಬರವನ್ನು ಡೆಲ್ಲಿ ಬೌಲರ್​ ರಸಿಕ್ ಸಲಾಮ್ ಮೊಟಕುಗೊಳಿಸಿದರು. ವೇಗದ ಬೌಲರ್ ಎಸೆತವನ್ನು ರಜತ್ ಪಾಟಿದಾರ್ ಜೋರಾಗಿ ಹೊಡೆಯಲು ಪ್ರಯತ್ನಿಸಿದರು. ಆದರೆ ಅದು ತಡವಾಯಿತು. ಚೆಂಡು ನೇರವಾಗಿ ಅಕ್ಷರ್ ಪಟೇಲ್ ಅವರ ಕೈ ಸೇರಿತ. ಅವರು ಅದ್ಭುತ ಕ್ಯಾಚ್ ಪಡೆದರು.

ತಳ್ಳಿದ ಪಾಟೀದಾರ್​

ಔಟ್​ ಆದ ನಂತರ ರಸಿಕ್ ಸಲಾಮ್ ಮತ್ತು ರಜತ್ ಪಾಟಿದಾರ್ ನಡುವಿನ ಮುಖಾಮುಖಿ ಗಮನ ಸೆಳೆಯಿತು. ವೇಗಿ ವಿಕೆಟ್ ಪಡೆದ ಬಳಿಕ ತೋಳು ಅಗಲಿಸಿ ಸಂಭ್ರಮಿಸುತ್ತಿದ್ದರೆ ರಜತ್ ಅವರನ್ನು ತಳ್ಳಿ ತೋಳನ್ನು ಮಡಚಿಹೋದರು. ಸಲಾಮ್ ನಂತರ ಬ್ಯಾಟ್ಸ್ ಮನ್ ಗೆ ಉತ್ತರ ಕೊಡಲು ಹೋದರು. ಆದರೆ ಪಾಟೀದಾರ್ ಸ್ಟೇಡಿಯಮ್​ನಿಂದ ಹೊರ ನಡೆದರು.

ಇದನ್ನೂ ಓದಿ: IPL 2024 : ಸಿಎಸ್​ಕೆ ವರ್ಸಸ್​ ಅರ್​ಆರ್​ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಿತಾ? ಅಭಿಮಾನಿಗಳ ಅನುಮಾನ

ರಜತ್ ಪಾಟಿದಾರ್ 32 ಎಸೆತಗಳಲ್ಲಿ 52 ರನ್ ಸಿಡಿಸಿ ಔಟಾದರು. ಅವರು 162 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟ್​ ಮಾಡಿದರು. ಅವರ ಇನಿಂಗ್ಸ್​ನಲ್ಲಿ 3 ಬೌಂಡರಿಗಳು ಮತ್ತು 3 ಸಿಕ್ಸರ್​ಗಳು ಇದ್ದವು. ಅವರ ವೇಗದ ಇನ್ನಿಂಗ್ಸ್ ನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವೇಗವಾಗಿ 100 ರನ್​ ದಾಟಲು ಸಾಧ್ಯವಾಯಿತು.

ವಿಲ್ ಜಾಕ್ಸ್ 29 ಎಸೆತಗಳಲ್ಲಿ 41 ರನ್ ಸಿಡಿಸಿ ಔಟಾದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ಯಾಮರೂನ್ ಗ್ರೀನ್ 32 ರನ್ ಬಾರಿಸಿತು. ಅರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್ ಬಾರಿಸಿತು.

ನಾವು ಇನ್ನೊಂದು ಪಂದ್ಯ ಗೆಲ್ಲುತ್ತೇವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್ಮನ್ ವಿಲ್ ಜಾಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಹೊಂದುವ ಪ್ರಾಮುಖ್ಯತೆಯ ಬಗ್ಗೆ ಮತ್ತು ಪಂದ್ಯವನ್ನು ಗೆಲ್ಲುವ ವಿಶ್ವಾಸದ ಬಗ್ಗೆ ಅವರು ಮಾತನಾಡಿದ್ದರೆ.

ಈ ಪಂದ್ಯವನ್ನು ಎದುರು ನೋಡುತ್ತಿದ್ದೇನೆ. ಇದು ಅದ್ಭುತವಾಗಿದೆ, ಇದು ನಂಬಲಾಗದಷ್ಟು ಸಂತೋಷವಾಗಿದೆ. ವಿಶೇಷವಾಗಿ ವಿರಾಟ್ ಇನ್ನೊಂದು ತುದಿಯಲ್ಲಿದ್ದಾಗ ಆಡಲು ನಾವು ಅದೃಷ್ಟವಂತರು. ಕೇವಲ 10 ಎಸೆತಗಳನ್ನು ದಾಟಿದರೆ ಸಾಕು. ನಾನು ದೊಡ್ಡ ಸ್ಕೋರ್ ಮಾಡುವೆ ಎಂದು ಆಶಿಸುತ್ತೇನೆ. ನಾವು ಮತ್ತೊಂದು ಗೆಲುವನ್ನು ಸಾಧಿಸಬಹುದು ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.

Exit mobile version