Site icon Vistara News

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

IPL 2024

ಬೆಂಗಳೂರು: ಸಂಘಟಿತ ಹೋರಾಟ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Banglore) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ 47 ರನ್​ಗಳ ಗೆಲುವು ದಾಖಲಿಸಿದೆ. ಇದು ಆರ್​ಸಿಬಿಗೆ ಹಾಲಿ ಆವೃತ್ತಿಯಲ್ಲಿ ದೊರಕಿದ ಸತತ ಐದನೇ ಹಾಗೂ ಒಟ್ಟು 6ನೇ ಗೆಲುವಾಗಿದೆ. ಈ ಮೂಲಕ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಫಾಫ್​ ಡು ಪ್ಲೆಸಿಸ್ ಬಳಗ ಪ್ಲೇಆಫ್ ಹಂತಕ್ಕೆ ಏರಬೇಕಾದರೆ ಇನ್ನೊಂದು ಕಡ್ಡಾಯ ಗೆಲುವು ಹಾಗೂ ಇನ್ನೊಂದಿಷ್ಟು ಉಳಿದ ತಂಡಗಳ ಪಂದ್ಯಗಳ ಲೆಕ್ಕಾಚಾರ ಅಗತ್ಯವಿದೆ. ಆದರೆ ಆರ್​ಸಿಬಿ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ಆಡುತ್ತಿರುವ ರೀತಿ ಮಾತ್ರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ. ಅದೇ ರೀತಿ ಆಟಗಾರರಿಗೆ ಅತಿ ಹೆಚ್ಚು ಉತ್ಸಾಹವನ್ನು ನೀಡಿದೆ. ಅಂತೆಯೇ ತವರಿನ ಮೈದಾನದಲ್ಲಿ ಗೆದ್ದಿರುವುದು ಗೆದ್ದಿರುವುದು ಇಡೀ ಆರ್​ಸಿಬಿ ಪಾಳೆಯದ ಖುಷಿ ಹೆಚ್ಚಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

ಇದನ್ನೂ ಓದಿ: Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

ಮೊದಲು ಬ್ಯಾಟ್ ಮಾಡಿದ ಆರ್​​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಫಾಫ್​​ ಡು ಪ್ಲೆಸಿಸ್ ಮತ್ತೆ 6 ರನ್​ಗೆ ಔಟಾದರು. ಅದೇ ರೀತಿ ಉತ್ತಮ ರೀತಿಯಲ್ಲಿ ಬ್ಯಾಟ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ 27 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಜತ್​ ಪಾಟೀದಾರ್​ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅವರು 32 ಎಸೆತಕ್ಕೆ 52 ರನ್​ ಬಾರಿಸಿದರು. ಅವರಿಗೆ ವಿಕ್​ ಜ್ಯಾಕ್ಸ್ ಉತ್ತಮ ಜತೆಯಾಟ ನೀಡಿ 29 ಎಸೆತಕ್ಕೆ 41 ರನ್ ಬಾರಿಸಿ 100 ರನ್ ಗಡಿ ದಾಟಲು ಸಹಾಯ ಮಾಡಿದರು. ಇವರಿಬ್ಬರು ಔಟಾದ ಬಳಿಕ ಆರ್​ಸಿಬಿ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕ್ಯಾಮೆರೂನ್ ಗ್ರೀನ್​ 32 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹಿಪಾಲ್​ ಲಾಮ್ರೋರ್​ 13 ರನ್ ಬಾರಿಸಿದರು.

ಡೆಲ್ಲಿಯ ಕುಸಿತ

ಅರ್​ಸಿಬಿ ತಂಡ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿತು. ಜತೆಗೆ ಅದೃಷ್ಟವೂ ಆರ್​ಸಿಬಿಯ ಪರವಾಗಿತ್ತು. ಡೇವಿಡ್​ ವಾರ್ನರ್​ 1 ರನ್​ ಗೆ ಔಟಾರೆ ಜೇಕ್​ ಫ್ರೇಸರ್ ಮೆಗ್​ಕುರ್ಕ್​ 21 ರನ್ ಬಾರಿಸಿದ ಹೊರತಾಗಿಯೂ ದುರದೃಷ್ಟದ ರನ್​ಔಟ್​ಗೆ ಒಳಗಾಯಿತು. ಶಾಯ್​ ಹೋಪ್​ 29 ರನ್ ಗೆ ಔಟಾದರೆ ಅಭಿಷೇಕ್​ ಪೊರೆಲ್​ 1ರನ್​ ಗೆ ಸೀಮಿತಗೊಂಡರು. ವಿಕೆಟ್​ಗಳು ಉರುಳುತ್ತಿರುವ ನಡುವೆಯೂ ಹಂಗಾಮಿ ನಾಯಕ ಅಕ್ಷರ್​ ಪಟೇಲ್​ 39 ಎಸೆತಕ್ಕೆ 57 ರನ್ ಬಾರಿಸಿದರು. ಅವರು ಇನಿಂಗ್ಸ್ ಆರ್​ಸಿಬಿಗೆ ಭಯ ಉಂಟು ಮಾಡಿದರೂ ಒತ್ತಡದ ನಡುವೆ ಅವರು ಔಟಾದರು.

ಆರ್​ಸಿಬಿ ಪರ ಯಶ್​ ದಯಾಳ್​ 20 ರನ್​ಗೆ 3 ವಿಕೆಟ್​ ಪಡೆದರೆ ಲಾಕಿ ಫರ್ಗ್ಯೂಸನ್​ 23 ರನ್​ ಗೆ 2 ವಿಕೆಟ್​ ಪಡೆದರು.

Exit mobile version