Site icon Vistara News

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

IPL 2024

ಹೈದರಾಬಾದ್​: ಆರ್​ಸಿಬಿ ತಂಡದ ದುರ್ಬಲ ಬೌಲಿಂಗ್ ವಿಭಾಗ ಕೊನೆಗೂ ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ತನ್ನ ಪ್ರತಾಪ ತೋರಿಸಿತು. ಹೀಗಾಗಿ ಬೆಂಗಳೂರು ಮೂಲದ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ 2ನೇ ವಿಜಯಕ್ಕೆ ಪಾತ್ರವಾಯಿತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 35 ರನ್​ಗಳ ಭರ್ಜರಿ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಇದು ಆರ್​ಸಿಬಿ ತಂಡಕ್ಕೆ ಸತತ ಆರು ಸೋಲುಗಳ ಬಳಿಕ ಸಿಕ್ಕ ಗೆಲುವಿನ ಓಯಸಿಸ್​. ಗೆದ್ದ ಆರ್​​ಸಿಬಿ ತಂಡದ ಆಟಗಾರರ ಮುಖದಲ್ಲಿ ನಗು ಮೂಡಿರಲಿಲ್ಲ. ಆದರೆ, ಆರ್​​ಸಿಬಿಯನ್ನೇ ನೆಚ್ಚಿನ ತಂಡವಾಗಿ ಆಯ್ಕೆ ಮಾಡಿಕೊಂಡಿದ್ದ ಲಕ್ಷಾಂತರ ಅಭಿಮಾನಿಗಳ ಮುಖಯದಲ್ಲಿ ಖುಷಿಯ ಛಾಯೆ ಕಂಡು ಬಂತು.

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು. ಆದಾಗ್ಯೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ 10ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಎಸ್​ಆರ್​ಎಚ್​ ಟೂರ್ನಿಯಲ್ಲಿ 3ನೇ ಸೋಲಿಗೆ ಒಳಗಾಯಿತು ಹಾಗೂ ಮೂರನೇ ಸ್ಥಾನದಲ್ಲಿ ಉಳಿಯಿತು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು.

ಇದನ್ನೂ ಓದಿ: World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

ಬ್ಯಾಟಿಂಗ್​ನಲ್ಲಿ ಭರ್ಜರಿ ಶಕ್ತಿ ಹೊಂದಿದ್ದ ಎಸ್​ಆರ್​ಎಚ್​ ತಂಡಕ್ಕೆ ಈ ಮೊತ್ತ ಸವಾಲು ಆಗಿರಲಿಲ್ಲ. ಆದಾಗ್ಯೂ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆರ್​ಸಿಬಿ ಬೌಲರ್​ಗಳಾದ ಸ್ವಪ್ನಿಲ್​ ಸಿಂಗ್​, ಕರಣ್​ ಶರ್ಮಾ ಹಾಗೂ ಕ್ಯಾಮೆರಾನ್​ ಗ್ರೀನ್​ ಅವರ ತಲಾ 2 ವಿಕೆಟ್​ಗಳ ಬಲದಿಂದಾಗಿ ಆರ್​​ಸಿಬಿ ಎದುರಾಳಿ ತಂಡದ ಬಲವನ್ನು ಕುಗ್ಗಿಸಿರು. ಶಹಬಾಜ್​ ಅಹಮದ್​ 40 ರನ್ ಬಾರಿಸಿ ಎಸ್ಆರ್​ಎಚ್​ ಪರ ಗರಿಷ್ಠ ಸ್ಕೋರರ್​​ ಎನಿಸಿಕೊಂಡರು.

Exit mobile version