ಚೆನ್ನೈ: ಐಪಿಎಲ್ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಸಿಕ್ಕಿದ್ದು ಮತ್ತೊಂದು ಉತ್ತಮ ಅಭಿಯಾನ ಆರಂಭಿಸಿದೆ. ಇಲ್ಲಿನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ ಬಾರಿಸಿತು. ಪ್ರತಿಯಾಗಿ ವಿಶ್ವಾಸದಿಂದ ಆಡಿದ ಚೆನ್ನೈ ತಂಡ 18.4 ಓವರ್ಗಳಲ್ಲಿ176 ರನ್ ಬಾರಿಸಿ 6 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ ಕಾರ್ತಿಕ್ ಹಾಗೂ ಅನುಜ್ ರಾವತ್ ಪ್ರಯತ್ನ ವಿಫಲಗೊಂಡಿತು.
Anticipates well 👌
— IndianPremierLeague (@IPL) March 22, 2024
Times his jump to perfection 👍
Completes a superb catch 👏
That was a superb effort in the field from @Gmaxi_32 🙌 🙌
Head to @JioCinema and @StarSportsIndia to watch the match LIVE
Follow the match ▶️ https://t.co/4j6FaLF15Y #TATAIPL | #CSKvRCB |… pic.twitter.com/rZsYIwlhFZ
ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 15, ರನ್, ರಚಿನ್ ರವೀಂದ್ರ 37 ರನ್, ಅಜಿಂಕ್ಯ ರಹಾನೆ 27 ರನ್, ಡ್ಯಾರಿಲ್ ಮಿಚೆಲ್ 22 ರನ್, ಶಿವಂ ದುಬೆ ಹಾಗೂ ಜಡೇಜಾ ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರ್ಸಿಬಿ ಬೌಲರ್ಗಳು ಚೆನ್ನೈ ಸಂಘಟಿತ ಹೋರಾಟಕ್ಕೆ ಮಂಕಾದರು.
ಇದನ್ನೂ ಓದಿ : Virat Kohli: ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದಿದ್ದ ರಾಹುಲ್ ಗಾಂಧಿಯ ಸುದ್ದಿಗೋಷ್ಠಿ ವೀಕ್ಷಿಸಿದ ವಿರಾಟ್ ಕೊಹ್ಲಿ
ಅದಕ್ಕಿಂತ ಮೊದಲು ಆಪದ್ಬಾಂಧವ ಅನುಜ್ ರಾವತ್(48) ಮತ್ತು ದಿನೇಶ್ ಕಾರ್ತಿಕ್(38*) ಅವರ ಕೊನೆಯ ಕ್ಷಣದ ಬ್ಯಾಟಿಂಗ್ ಹೋರಾಟದ ನೆರವಿನಿಂದ ರಾಯಲ್ ಚಾಜೆಂಜರ್ಸ್ ಬೆಂಗಳೂರು 173 ರನ್ಗಳ ಉತ್ತಮ ಮೊತ್ತ ಪೇರಿಸಿತು. ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ(RCB vs CSK) ಉತ್ತಮ ಆರಂಭ ಪಡೆದರೂ ಕೂಡ ಈ ಜೋಶ್ ಹೆಚ್ಚು ಕಾಲ ಉಳಿಯಲಿಲ್ಲ. ನಾಯಕ ಡು ಪ್ಲೆಸಿಸ್(35) ರೂಪದಲ್ಲಿ ಮೊದಲ ವಿಕೆಟ್ ಪತನಗೊಂಡಿತು. ಈ ಆಘಾತವನ್ನು ಅರಗಿಸಿಕೊಳ್ಳವಷ್ಟರಲ್ಲಿ ರಜತ್ ಪಾಟೀದಾರ್(0) ಮತ್ತು ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(0) ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. 42 ರನ್ ರನ್ಗೆ 3 ವಿಕೆಟ್ ಪತನಗೊಂಡಿತು.
6⃣.5⃣ – SIX
— IndianPremierLeague (@IPL) March 22, 2024
6⃣.6⃣ – OUT
That was an interesting passage of play!
Head to @JioCinema and @StarSportsIndia to watch the match LIVE
Follow the match ▶️ https://t.co/4j6FaLF15Y #TATAIPL | #CSKvRCB pic.twitter.com/JjiIclkEoj
2 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಕೇವಲ 21 ರನ್ ಗಳಿಸಿದರು. ಈ ಮೊತ್ತಕ್ಕೆ 20 ಎಸೆತಗಳನ್ನು ಎದುರಿಸಿದರು. ಸಿಡಿದದ್ದು ಒಂದು ಸಿಕ್ಸರ್. ಬಾಂಗ್ಲಾದೇಶದ ಚತ್ತೋಗ್ರಾಮ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಸ್ಟ್ರೆಚರ್ ಮೂಲಕ ಕರೆದೊಯ್ಯಲಾಗಿದ್ದ ಮುಸ್ತಫಿಜುರ್ ರೆಹಮಾನ್ ಅವರು ಘಾತಕ ಬೌಲಿಂಗ್ ನಡೆಸಿ ಅಗ್ರ ಕ್ರಮಾಂಕದ 4 ವಿಕೆಟ್ ಉಡಾಯಿಸಿ ಆರ್ಸಿಬಿಗೆ ಕೊಳ್ಳಿ ಇಟ್ಟರು. ಕ್ಯಾಮರೂನ್ ಗ್ರೀನ್(18) ಕ್ಲೀನ್ ಬೌಲ್ಡ್ ಆದರು.
ತಂಡವನ್ನು ಕಾಪಾಡಿದ ರಾವತ್-ಕಾರ್ತಿಕ್
ಇನ್ನೇನು 100 ರನ್ ಒಳಗಡೆ ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ಆರ್ಸಿಬಿಗೆ ಆಸರೆಯಾದದ್ದು ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್. ಉಭಯ ಆಟಗಾರರು ಸೇರಿಕೊಂಡು ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿ ತಂಡದ ವೈಯಕ್ತಿಕ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 6ನೇ ವಿಕೆಟ್ಗೆ ಈ ಜೋಡಿ ಅತ್ಯಮೂಲ್ಯ 95 ರನ್ ಬಾರಿಸಿತು. ಉಭಯ ಆಟಗಾರರು ನಿಂತು ಆಡಿದ ಪರಿಣಾಮ ತಂಡ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ತುಷಾರ್ ದೇಶ್ಪಾಂಡೆ ಎಸೆತ 18ನೇ ಓವರ್ನಲ್ಲಿ 25 ರನ್ ಹರಿದು ಬಂತು. ಇದರಲ್ಲಿ ರಾವುತ್ 2 ಸಿಕ್ಸರ್ ಮತ್ತು 1 ಫೋರ್ ಬಾರಿಸಿದರೆ, ಕಾರ್ತಿಕ್ ಒಂದು ಸಿಕ್ಸರ್ ಸಿಡಿಸಿದರು. 4 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್ ಬಾರಿಸಿದ ಅನುಜ್ ರಾವತ್ 48 ರನ್ ಗಳಿಸಿ ಅಂತಿಮ ಎಸೆತದಲ್ಲಿ ಧೋನಿ ಅವರಿಂದ ರನೌಟ್ ಆದರು. ದಿನೇಶ್ ಕಾರ್ತಿಕ್ 26 ಎಸೆತಗಳಿಂದ 38 ರನ್ ಬಾರಿಸಿ ಅಜೇಯರಾಗಿ ಉಳಿದರು. ಸ್ಪಿನ್ ಟ್ರ್ಯಾಕ್ ಆಗಿದ್ದರೂ ಕೂಡ ಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಾಡೇಜ ತಲಾ 4 ಓವರ್ ಎಸೆದರೂ ವಿಕೆಟ್ ಕೀಳುವಲ್ಲಿ ವಿಫಲರಾದರು.
THE DHONI MAGIC AT THE AGE OF 42. 🔥🤯pic.twitter.com/yRRzcqzMmi
— Johns. (@CricCrazyJohns) March 22, 2024
ಅದ್ಧೂರಿ ಉದ್ಘಾಟನಾ ಸಮಾರಂಭ
ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ದೊರಕಿತು. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್(Akshay Kumar), ಟೈಗರ್ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್ ವಿಜೇತ ಎ.ಆರ್ ರೆಹಮಾನ್(AR Rahman), ಖ್ಯಾತ ಗಾಯಕ ಸೋನು ನಿಗಮ್(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್ ಪಾಪ್ ಗಾಯನ ಕಣ್ಮನಸೆಳೆಯಿತು.