ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಎರಡನೇ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದೆ. ಈ ವೇಳೆ ಯಜುವೇಂದ್ರ ಚಾಹಲ್ ಮತ್ತು ರಿಯಾನ್ ಪರಾಗ್, ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಮತ್ತು ಇತರ ಫ್ರಾಂಚೈಸಿ ಸಿಬ್ಬಂದಿ ತಮ್ಮ ಆರ್ ಆರ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಶ್ಲಾಘಿಸಿದ್ದಾರೆ. ಯಾಕೆಂದರೆ ಸ್ಯಾಮ್ಸನ್ ಮಂಗಳವಾರ ರಾಯಲ್ಸ್ ತಂಡ ಸೇರಿದ ಬಳಿಕ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.
"Captain I want to win matches for….": RR players, personnel praise Samson as he celebrates 10 years with franchise
— ANI Digital (@ani_digital) April 16, 2024
Read @ANI Story | https://t.co/6OzWsFkrfz#RajasthanRoyals #KKRvsRR #KolkataKnightRiders #IPL2024 #cricket #SanjuSamson pic.twitter.com/HC31Ev4gUm
ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಸಂಜು ಅವರ 10 ವರ್ಷದ ಪಯಣಕ್ಕೆ ಶುಭ ಹಾರೈಸಿದ್ದಾರೆ. “ವಿಕೆಟ್ ಕೀಪರ್ ಆಗಿ ಫ್ರಾಂಚೈಸಿಯನ್ನು ಮುಂದುವರಿಸುವಂತೆ ನಾನು ಅವರಿಗೆ ಹೇಳಿದ್ದೆ. ಐಪಿಎಲ್ನಲ್ಲಿ ಆಡಿದ ನಂತರ, ಅವರು ಭಾರತಕ್ಕಾಗಿ 100 ಪ್ರತಿಶತ ಆಡುತ್ತಾರೆ ಎಂದು ನನಗೆ ತಿಳಿದಿತ್ತು, ಎಂದು ದಿಶಾಂತ್ ಹೇಳಿದ್ದಾರೆ.
ಇದನ್ನೂ ಓದಿ: MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…
ರಾಹುಲ್ ದ್ರಾವಿಡ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ಸಂಜು ಸ್ಯಾಮ್ಸನ್ ಅವರನ್ನು ಗುಲಾಬಿ ಬಣ್ಣ ಆವರಿಸಿದೆ ಎಂದು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ “ರಾಹುಲ್ ಭಾಯ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ರಾಯಲ್ ಆಗಲು ಸಂಜು ಮನಸ್ಸು ಹೊಂದಿದ್ದರು. ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.
ಸ್ಯಾಮ್ಸನ್ ಐಪಿಎಲ್ ದಾಖಲೆಗಳು
ರಾಯಲ್ಸ್ ಪರ 130 ಪಂದ್ಯಗಳನ್ನಾಡಿರುವ ಸ್ಯಾಮ್ಸನ್ 31.02ರ ಸರಾಸರಿಯಲ್ಲಿ 3,475 ರನ್ ಗಳಿಸಿದ್ದಾರೆ. ಅವರು ಎರಡು ಶತಕಗಳು ಮತ್ತು 20 ಅರ್ಧಶತಕಗಳನ್ನು ಹೊಂದಿದ್ದಾರೆ, 119 ಅವರ ಗರಿಷ್ಠ ಸ್ಕೋರ್ ಆಗಿದೆ. ಪ್ರಸ್ತುತ ಐಪಿಎಲ್ 2024 ರಲ್ಲಿ, ಆರ್ಆರ್ ನಾಯಕ ಮೂರು ಅರ್ಧಶತಕಗಳೊಂದಿಗೆ 66.00 ಸರಾಸರಿಯಲ್ಲಿ 264 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 82 ರನ್.
ಐಪಿಎಲ್ 2024 ರಲ್ಲಿ ರಾಜಸ್ಥಾನ್ ಅಭಿಯಾನ
ರಾಯಲ್ಸ್ 10 ಅಂಕಗಳೊಂದಿಗೆ ಮತ್ತು 0.767 ನೆಟ್ ರನ್ ರೇಟ್ನೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಐದು ಗೆಲುವುಗಳನ್ನು ಹೊಂದಿದ್ದಾರೆ ಮತ್ತು ಇನ್ನೊಂದರಲ್ಲಿ ಸೋತಿದ್ದಾರೆ.