ನವದೆಹಲಿ: ಆಧುನಿಕ ಕ್ರಿಕೆಟ್ನಲ್ಲಿ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಪ್ರವೃತ್ತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳ ಗಾತ್ರದ ಪ್ರಾಮುಖ್ಯತೆಯನ್ನು ಕುಗ್ಗಿಸುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ (Rajastan Royals) ಪರ ಆಡುವ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ. ಇದು ಆಟವನ್ನು ಹೆಚ್ಚು ಏಕಪಕ್ಷೀಯವಾಗಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿ ಐಪಿಎಲ್ನಲ್ಲಿ (IPL 2024) ಬೃಹತ್ ಮೊತ್ತಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಉಲ್ಲೇಖಿಸಿದ್ದಾರೆ.
ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ 277 ಮತ್ತು 287 ರನ್ ಗಳಿಸಿದ್ದರೆ, ಈ ಋತುವಿನಲ್ಲಿ ಹಲವು ತಂಡಗಳು 250 ಸ್ಕೋರ್ಗಳ ಗಾಡಿ ಮೀರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 8 ಬ್ಯಾಟರ್ಗಳನ್ನು ಆಡುವ ಸ್ವಾತಂತ್ರ್ಯವನ್ನು ನೀಡಿದೆ. ಇದು ದೊಡ್ಡ ಮೊತ್ತಕ್ಕೆ ಸಹಾಯ ಮಾಡುತ್ತದೆ ಎಂಬುದು ಅಶ್ವಿನ್ ವಾದವಾಗಿದೆ.
ಹಿಂದಿನ ದಿನಗಳಲ್ಲಿ ನಿರ್ಮಿಸಲಾದ ಕ್ರೀಡಾಂಗಣಗಳು ಆಧುನಿಕ ದಿನಗಳಲ್ಲಿ ಪ್ರಸ್ತುತವಲ್ಲ. ಆಗ ಬಳಸಲಾಗುತ್ತಿದ್ದ ಬ್ಯಾಟ್ ಗಳನ್ನು ಈಗ ಉಪಯೋಗಿಸುತ್ತಿಲ್ಲ. ಪ್ರಾಯೋಜಕರ ಎಲ್ಇಡಿ ಬೋರ್ಡ್ಗಳನ್ನು ಬಳಸುವುದರಿಂದ, ಬೌಂಡರಿ ಲೈನ್ 10 ಗಜಗಳಷ್ಟು ಗಾತ್ರ ಚಿಕ್ಕದಾಗಿದೆ. ಹೀಗಾಗಿ ಬೌಲರ್ಗಳು ದಂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮಾನಸಿಕ ಉತ್ತೇಜನದ ಅಗತ್ಯವಿದೆ ಎಂದು ಆರ್ಆರ್ ಪ್ರಚಾರ ಕಾರ್ಯಕ್ರಮದಲ್ಲಿ ಅಶ್ವಿನ್ ಹೇಳಿದರು.
ಪ್ರತಿಭಾವಂತ ಬೌಲರ್ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಾನೆ. ತನ್ನ ಆವಿಷ್ಕಾರಗಳೊಂದಿಗೆ ಮೈದಾನದ ಉಳಿದ ಭಾಗಗಳಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾನೆ ಎಂದು ಅಶ್ವಿನ್ ಹೇಳಿದ್ದಾರೆ. ಇದೇ ವೇಳೆ ಅವರು ಚೆಂಡನ್ನು ಹೊಡೆಯುವ ಬ್ಯಾಟರ್ಗಳ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ದಾಳಿಯು ಇತರ ಕೆಲವು ತಂಡಗಳಂತೆ ತೊಂದರೆ ಅನುಭವಿಸಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Champions Trophy : ಚಾಂಪಿಯನ್ಸ್ ಟ್ರೋಫಿ ಮೂಲಕ ಐಪಿಎಲ್ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು
ಬೌಲರ್ಗಳು ರನ್ ಬಿಟ್ಟುಕೊಟ್ಟಿರುವ ಸರಾಸರಿ ರನ್ ನೋಡಿದರೆ ಅಚ್ಚರಿಯಾಗುತ್ತದೆ. ಅದರಲ್ಲಿ ನಾವು (ರಾಜಸ್ಥಾನ್ ಬೌಲರ್ಗಳು) ಕಡಿಮೆ ರನ್ ನೀಡಿದ್ದೇವೆ. ಜೈಪುರದಲ್ಲಿ ನಡೆದ ಒಂದು ಪಂದ್ಯದಲ್ಲಿ ನಾವು 180 ರನ್ ಗಳನ್ನೂ ರಕ್ಷಿಸಿದ್ದೇವೆ. ಆದಾಗ್ಯೂ ದಿನದ ಕೊನೆಯಲ್ಲಿ, ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್ ಗಳನ್ನು ವೀಕ್ಷಿಸಲು ಬರುತ್ತಾರೆ ಎಂಬುದು ಸತ್ಯ. ಆದರೆ, ಬೌಲರ್ಗಳ ದಂಡನೆ ನಿರಂತರ ಎಂದು ನುಡಿದಿದ್ದಾರೆ.
ಜೈಪುರದ ಮೈದಾನದ ಬೌಂಡರಿ ಲೈನ್ ದೊಡ್ಡದಾಗಿದೆ. ಧ್ರುವ್ ಜುರೆಲ್ “ಇದು ತುಂಬಾ ದೊಡ್ಡದಾಗಿದೆ” ಎಂದು ಹೇಳಿದ್ದರು. ಅದರೆ, ನಾನು ಅದಾದರೂ ಇರಲಿ ಎಂದು ಹೇಳಿದೆ. ಈ ಕ್ರೀಡಾಂಗಣ ಸುತ್ತಲು ಬೈಸಿಕಲ್ ಬೇಕಾಗುತ್ತದೆ ಎಂದು ತಿಳಿದುಕೊಂಡೆ. ಅದರೆ, ಕೆಲವು ಕ್ರೀಡಾಂಗಣಗಳು ಚಿಕ್ಕದಾಗಿವೆ. ಚೂಯಿಂಗ್ ಗಮ್ ಜೋರಾಗಿ ಉಗಿದರೆ ಅದು ಬೌಂಡಿ ಲೈನ್ಗಿಂತ ಆಚೆ ಹೋಗಿ ಬೀಳುತ್ತದೆ ಎಂದು ಹೇಳಿದರು.