Site icon Vistara News

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

IPL 2024

ಚೆನ್ನೈ: ಐಪಿಎಲ್​ 2024ನೇ (IPL 2024) 39ನೇ ಪಂದ್ಯದಲ್ಲಿ ತವರು ಅಭಿಮಾನಿಗಳ ಮುಂದೆಯೇ ಚೆನ್ನೈ ತಂಡವನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡ 6 ವಿಕೆಟ್​ಗಳಿಂದ ಸೋಲಿಸಿದೆ. ಲಕ್ನೊ ತಂಡದ ಬ್ಯಾಟರ್​​ ಮಾರ್ಕಸ್​ ಸ್ಟೊಯ್ನಿಸ್​ 63 ಎಸೆತಕ್ಕೆ ಅಜೇಯ 124 ರನ್ (ಶತಕ) ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಸಂಕಷ್ಟದಲ್ಲಿದ್ದ ಸಮಯದಲ್ಲಿ ತಂಡಕ್ಕೆ ಏಕಾಂಗಿಯಾಗಿ ಹೋರಾಟ ನಡೆಸಿದ ಸ್ಟೊಯ್ನಿಸ್ ಗೆಲುವು ತಂದುಕೊಟ್ಟರು. ಈ ಮೂಲಕ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರ (ಅಜೇಯ 108 ರನ್​) ಶತಕದ ಹೋರಾಟ ವ್ಯರ್ಥಗೊಂಡಿತು. ಇದು ಚೆನ್ನೈ ತಂಡಕ್ಕೆ ಆಡಿರುವ ಎಂಟು ಪಂದ್ಯಗಳಲ್ಲಿ ಐದನೇ ಸೋಲಾಗಿದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ಜಾರಿದೆ. ಅತ್ತ ಲಕ್ನೊ ಸೂಪರ್ ಜೈಂಟ್ಸ್​ ತಂಡ 4ನೇ ಸ್ಥಾನಕ್ಕೇರಿದೆ. ಈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 5 ನೇ ಗೆಲುವಾಗಿದೆ. ಹೀಗಾಗಿ 10 ಅಂಕಗಳನ್ನು ಪಡೆದುಕೊಂಡಿದೆ.

ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 210 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 213 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಲಕ್ನೊ ತಂಡ ಕ್ವಿಂಟನ್ ಡಿ ಕಾಕ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಿಸಿತು. ನಾಯಕ ಕೆ. ಎಲ್ ರಾಹುಲ್ ಕೂಡ 16 ರನ್​ಗೆ ಸೀಮಿತಗೊಂಡರು. ಈ ವೇಳೆ ಆಡಲು ಇಳಿದ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಪಡೆದ ದೇವದತ್​ ಪಡಿಕ್ಕಲ್​ ಪೇಚಾರಿ 19 ಎಸೆತಕ್ಕೆ 13 ರನ್ ಮಾಡಿ ಔಟಾದರು. ಇದು ಲಕ್ನೊ ತಂಡಕ್ಕೆ ಹಿನ್ನಡೆ ಉಂಟು ಮಾಡಿತು.

ನಿಕೋಲಸ್​- ಸ್ಟೊಯ್ನಿಸ್​ ಜತೆಯಾಟ

88 ರನ್​ಗೆ 3 ವಿಕೆಟ್​ ಕಳೆದುಕೊಂಡ ಲಕ್ನೊ ತಂಡ ಅಪಾಯಕ್ಕೆ ಸಿಲುಕಿತು. ಆದರೆ ಈ ವೇಳೆ ಆಡಲು ಬಂದ ನಿಕೋಲಸ್ ಪೂರನ್ ಹಾಗೂ ಸ್ಪೊಯ್ನಿಸ್​ 70 ರನ್​ಗಳ ಜತೆಯಾಟ ಆಡಿದರು. ಆದರೆ, 15 ಎಸೆತಕ್ಕೆ 34 ರನ್ ಬಾರಿಸಿದ ಪೂರನ್​ ಔಟಾದ ಬಳಿಕ ಮತ್ತೆ ತೊಂದರೆ ಎದುರಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಸ್ಟೊಯ್ನಿಸ್​ 56 ಎಸೆತಕ್ಕೆ ಶತಕ ಪೂರೈಸಿದರು. ಕೊನೇ ತನಕ ನಿಂತು ಆಡಿ ಗೆಲ್ಲಿಸಿದರು. ಕೊನೆಯಲ್ಲಿ ದೀಪಕ್ ಹೂಡಾ 6 ಎಸೆತಕ್ಕೆ 17 ರನ್ ಬಾರಿಸಿದರು.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಋತುರಾಜ್ ಶತಕದ ಆಟ

ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವೂ ಉತ್ತಮವಾಗಿ ಆಡಲಿಲ್ಲ. ಅಜಿಂಕ್ಯ ರಹಾನೆ1 ರನ್​ ಗೆ ನಿರ್ಗಮಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಡ್ಯಾರಿಲ್ ಮಿಚೆಲ್​ 11 ಹಾಗೂ ಜಡೇಜಾ 16 ರನ್​ ಬಾರಿಸಿ ಔಟಾದರು. ಆದರೆ, 27 ಎಸೆತಕ್ಕೆ 66 ರನ್ ಬಾರಿಸಿದ ಶಿವಂ ದುಬೆ ದೊಡ್ಡ ಮೊತ್ತ ಪೇರಿಸಲು ನೆರವಾದರು.

Exit mobile version