ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL 2024) ಮುಕ್ತಾಯಗೊಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮೊದಲು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಆಟಗಾರರನ್ನು ಪ್ರೇರೇಪಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಈ ವೇಳೆ ಅವರು ತಮ್ಮ ತಂಡದ ಆಟಗಾರ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕ್ ಸ್ಟೊಯ್ನಿಸ್ ಕೆನ್ನೆ ಮೇಲೆ ತಮಾಷೆಗೆ ಬಾರಿಸಿರುವ ಸುದ್ದಿ ವೈರಲ್ ಆಗಿದೆ.
Level sabke niklenge, niklenge usike jo khada rahega 😅#SRHvLSG #TATAIPL #IPLonJioCinema | @LucknowIPL pic.twitter.com/20bWRIMU4A
— JioCinema (@JioCinema) May 8, 2024
ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇದು ಇದು ನಿರ್ಣಾಯಕ ಪಂದ್ಯವಾಗಿತ್ತು. ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ತವರಿನ ಪಂದ್ಯವನ್ನು 98 ರನ್ ಗಳಿಂದ ಕಳೆದುಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ 235 ರನ್ಗಳ ಬೃಹತ್ ಮೊತ್ತವನ್ನು ಗಳಿಸಿದ ನಂತರ ಎಲ್ಎಸ್ಜೆ ಕೇವಲ 137 ರನ್ಗಳಗಿಎ ಆಲೌಟ್ ಆಗಿತ್ತು.
ಈ ಸೋಲು ಅವರನ್ನು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ಸ್ಥಾನಗಳಿಂದ ಕೆಳಕ್ಕೆ ಇಳಿಯುವಂತೆ ಮಾಡಿತ್ತು. ಅವರ ನೆಟ್ ರನ್ ರೇಟ್ ಅನ್ನು ಹಾಳುಮಾಡಿತು. ಎಸ್ಆರ್ಎ್್ ವಿರುದ್ಧ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು, ಲ್ಯಾನ್ಸ್ ಕ್ಲೂಸ್ನರ್ ಆಟದ ಪ್ರಾರಂಭಕ್ಕೆ ಸ್ವಲ್ಪ ಅವರನ್ನು ಪ್ರೇರೇಪಿಸಲು ನಿರ್ಧರಿಸಿದರು. ಆದರೆ, ಈ ಪಂದ್ಯದಲ್ಲಿಯೂ ಸೋತ ಲಕ್ನೊ ಭಾರೀ ಹಿನ್ನಡೆಗೆ ಒಳಗಾಯಿತು.
ಇದನ್ನೂ ಓದಿ:
ಆದರೆ, ಪಂದ್ಯಕ್ಕಿಂತ ಮೊದಲು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ತಂಡದ ಗುಂಪಿನ ಮಧ್ಯದಲ್ಲಿ ನಿಂತು ಆಟಗಾರರಿಗೆ ಭಾಷಣ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂತು. ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣದಿಂದ ಎಲ್ಎಸ್ಜಿ ಆಟಗಾರರು ಸ್ಪಷ್ಟವಾಗಿ ಭಾವಪರವಶರಾಗಿದ್ದರು. ಈ ವೇಲೆ ಮಾರ್ಕಸ್ ಸ್ಟೋಯ್ನಿ ಸ್ಗೆ ನಗು ತಡೆಯಲಾಗಲಿಲ್ಲ. ನಂತರ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಭಾಷಣವನ್ನು ಮುಂದುವರಿಸುವ ಮೊದಲು ಆಸ್ಟ್ರೇಲಿಯಾದ ಆಟಗಾರನಿಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದರು.
ಲ್ಯಾನ್ಸ್ ಕ್ಲೂಸ್ನರ್ ಭಾಷಣ ಇಂತಿದೆ
ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣವು ಹೆಚ್ಚಿನ ವ್ಯತ್ಯಾಸವನ್ನುಂಟುಮಾಡಲಿಲ್ಲ, ಏಕೆಂದರೆ ಎಸ್ಆರ್ಹೆಚ್ ಲಕ್ನೋ ಮೂಲದ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಲಕ್ನೊ ಮೊದಲು ಬ್ಯಾಟ್ ಮಾಡಿ 164 ರನ್ ಬಾರಿಸಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 10 ಓವರ್ಗಳಲ್ಲಿ ಈ ಮೊತ್ತವನ್ನು ಎಸ್ಆರ್ಎಚ್ ಬೆನ್ನಟ್ಟಿತು. ಹೆಡ್ ಕೇವಲ 30 ಎಸೆತಗಳಲ್ಲಿ 89 ರನ್ ಗಳಿಸಿದರೆ, ಶರ್ಮಾ 28 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು.