ಬೆಂಗಳೂರು: ಮೇ 12ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಐಪಿಎಲ್ ಪಂದ್ಯದಲ್ಲಿ (IPL 2024) ಆರ್ಸಿಬಿ ತಂಡ ಡಿಸಿ ತಂಡವನ್ನು ಮಣಿಸಿತ್ತು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. 188 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವನ್ನು ಕೇವಲ 140 ರನ್ಗಳಿಗೆ ಆಲೌಟ್ ಮಾಡಿದ ಆರ್ಸಿಬಿ ಆಟಗಾರರು ಸಂಭ್ರಮಿಸಿದರು. ಆಟಗಾರರು ಗೆಲುವನ್ನು ಆಚರಿಸುತ್ತಿದ್ದಂತೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಡೆಗೆ ಕ್ಯಾಮೆರಾ ತಿರುಗಿಸಿದರು. ಈ ವೇಳೆ ಅವರಿಬ್ಬರ ನಡುವಿನ ಸಂಕಚೇ
Wrapped up in style ⚡️
— IndianPremierLeague (@IPL) May 12, 2024
High fives 🙌 all around as #RCB make it FIVE 🖐️ in a row 🔥
A comfortable 4️⃣7️⃣-run win at home 🥳
Scorecard ▶️ https://t.co/AFDOfgLefa#TATAIPL | #RCBvDC pic.twitter.com/qhCm0AwUIE
ಐಪಿಎಲ್ 2024 ರಲ್ಲಿ ಆರ್ಬಿಯ ಅಭಿಯಾನ ರೋಚಕ ತಿರುವು ಪಡೆದಿದ್ದರಿಂದ ತಂಡದ ಗೆಲುವಿನ ನಂತರ ಸ್ಟಾರ್ ದಂಪತಿಗಳ ಮುಖದಲ್ಲಿ ನೆಮ್ಮದಿ ಕಾಣಿಸಿತು. ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾರೋ ಒಬ್ಬರಿಗೆ ಸಂಕೇತ ಮಾಡಿ ಏನನ್ನೋ ತೋರಿಸುತ್ತಿದ್ದರು. ಅದು ನಾವು ಹಡಗನ್ನೇ ತಿರುಗಿಸುತ್ತೇವೆ. ಅಥವಾ ಇಡೀ ಪ್ರಸಂಗವನ್ನೇ ಬದಲಾಯಿಸುತ್ತೇವೆ ಎಂಬ ಅರ್ಥದಲ್ಲಿತ್ತು. ಕ್ಯಾಮೆರಾ ಕೊಹ್ಲಿ ಕೈ ತೋರಿಸಿದ ಕಡೆಗೆ ತಿರುಗಿಸಿದಾಗ ಅದು ಪತ್ನಿ ಅನುಷ್ಕಾ ಶರ್ಮಾಗೆ ಎಂಬುದು ಗೊತ್ತಾಯಿತು. ಬ್ಯಾಟ್ ಮತ್ತು ಬಾಲ್ನಲ್ಲಿ ಅದ್ಭುತ ಪ್ರಯತ್ನಕ್ಕಾಗಿ ಆರ್ಸಿಬಿಯು ಭರ್ಜರಿ ಗೆಲುವಿನ ಕ್ರೆಡಿಟ್ ಕ್ಯಾಮರೂನ್ ಗ್ರೀನ್ಗೆ ಸಲ್ಲುತ್ತದೆ.
ಇದನ್ನೂ ಓದಿ: Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ
ಭಾನುವಾರ ಡಿಸಿ ವಿರುದ್ಧ 47 ರನ್ಗಳ ಜಯದೊಂದಿಗೆ ಆರ್ಸಿಬಿ ತನ್ನ ಗೆಲುವಿನ ಓಟ ಮುಂದುವರಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 5 ನೇ ಸ್ಥಾನಕ್ಕೆ ಜಿಗಿಯಿತು. ಪಂದ್ಯಾವಳಿಯ ಆರಂಭದಲ್ಲಿ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕಾರಣ ಪ್ಲೇಆಫ್ ಆಸೆ ದೂರದ ಕನಸಿನಂತೆ ತೋರಿತು. ರಜತ್ ಪಾಟಿದಾರ್ ಅವರ ಅರ್ಧಶತಕ ಮತ್ತು ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನವು ಕೊನೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟಿತು.
ಆರ್ಸಿಬಿ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯವನ್ನು ಸಿಎಸ್ಕೆ ವಿರುದ್ಧ ತವರಿನಲ್ಲಿ ಆಡಲಿದೆ. ಒಂದು ವೇಳೆ ಆರ್ಸಿಬಿ 18 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಗೆದ್ದರೆ, ಅವರು ಸಿಎಸ್ಗಿಂತ ಉತ್ತಮ ನೆಟ್ರನ್ರೇಟ್ ಹೊಂದಿದರೆ ಪ್ಲೇಆಫ್ಗೆ ಅರ್ಹತೆ ಪಡೆಯುತ್ತದೆ.