ಚೆನ್ನೈ: ಇಲ್ಲಿನ ಚೆಪಾಕ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Cheallengers Bangalore) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಲಪತಿ ವಿಜಯ್ (Thalapthy Vijay) ಅವರ ಚಿತ್ರದ ಹಾಡಿಗೆ ನೃತ್ಯ ಮಾಡುವ ಮೂಲಕ ಚೆನ್ನೈ ಪ್ರೇಕ್ಷಕರನ್ನು ರಂಜಿಸಿದರು. ಆಕ್ರಮಣಕಾರಿಯಾಗಿಯೇ ಆಡಿದ ಅವರು ತಮ್ಮ ವಿವಿಧ ವರ್ತನೆಗಳನ್ನು ಮೈದಾನದಲ್ಲಿ ತೋರಿಸಿದರು.
.@imVkohli grooves for Apadi Podu 😂❤️ pic.twitter.com/2kj0Mpu0Hd
— Saravanan (@Saravananxx) March 22, 2024
ಕೊಹ್ಲಿಯ 2 ತಿಂಗಳ ಅನುಪಸ್ಥಿತಿಯ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಆರಂಭಕ್ಕೆ ಮೊದಲು, ಬ್ಯಾಟಿಂಗ್ ಸೂಪರ್ಸ್ಟಾರ್ ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯಲ್ಲಿ ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಟಿ 20ಐ ಸ್ವರೂಪಕ್ಕೆ ಮರಳಿದ್ದರು. ಇದು ಭಾರತದ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ತಂಡಕ್ಕೆ ಅವರ ಆಯ್ಕೆಯ ಸುಳಿವು ಎಂದು ಹಲವರು ಭಾವಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಯ ನಂತರ, ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. ಮೊದಲನೆಯದಾಗಿ, ಕೊಹ್ಲಿ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದರು. ನಂತರ ಸರಣಿಯ ಸಂಪೂರ್ಣ ಭಾಗಕ್ಕೆ ಅಲಭ್ಯರಾದರು.
ಅಕಾಯ್ ಜನನ
ಇಂಗ್ಲೆಂಡ್ ಟೆಸ್ಟ್ನಿಂದ ಅವರ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಸ್ವತಃ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಅವರು ಮತ್ತು ಅನುಷ್ಕಾ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳ ಮೂಲಕ ಘೋಷಿಸಿದರು.
ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದರು. ವಿರಾಟ್ ಕೊಹ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರೊಂದಿಗಿ 27 ಎಸೆತಗಳಲ್ಲಿ 41 ರನ್ಗಳ ಜೊತೆಯಾಟದಲ್ಲಿ 4 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದರು. ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ಅವರ ಅಸಾಧಾರಣ ಕ್ಯಾಚ್ನಿಂದಾಗಿ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ಆಕ್ರಮಣಕಾರಿ ಆಟ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೈದಾನಕ್ಕಿಳಿಯುವ ಸರದಿ ಬಂದಾಗ, ವಿರಾಟ್ ಕೊಹ್ಲಿ ಸಂಪೂರ್ಣ ಉತ್ಸಾಹಭರಿತರಾಗಿದ್ದರು. ಅವರು ವಿಶಿಷ್ಟ ವಿನೋದ ಮತ್ತು ಆಕ್ರಮಣಕಾರಿ ಮನಸ್ಥಿತಿಯಲ್ಲಿದ್ದರು ಮತ್ತು ಸಿಎಸ್ಕೆ ಆಟಗಾರರನ್ನು ಕೆರಳಿಸುತ್ತಿದ್ದರು. ರಚಿನ್ ರವೀಂದ್ರಗೆ ಕೋಪದ ಬೀಳ್ಕೊಡುಗೆ ಕೊಟ್ಟರು.
ಇದನ್ನೂ ಓದಿ : IPL 2024 : ಮುಂಬಯಿ ತಂಡದಿಂದ ರೋಹಿತ್ ಶರ್ಮಾ ಸದಾ ದೂರ ದೂರ
ತೀವ್ರವಾದ ಪಂದ್ಯದ ನಡುವೆ, ವಿರಾಟ್ ಕೊಹ್ಲಿ ಚೆಪಾಕ್ ಪ್ರೇಕ್ಷಕರಿಗೆ ತಮ್ಮ ವಿನೋದವನ್ನೂ ಪ್ರದರ್ಶಿಸಿದರು. ತಲಪತಿ ವಿಜಯ್ ಅವರ ಚಿತ್ರದ ಹಾಡಿಗೆ ಡಾನ್ಸ್ ಮಾಡಿದರು.
ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಸ್ಟೀವ್ ಸ್ಮಿತ್, ಬ್ಯಾಟಿಂಗ್ ದಿಗ್ಗಜ ಲಯವನ್ನು ಕಂಡುಕೊಳ್ಳಲು ನೋಡುತ್ತಿದ್ದರು, ಅದನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ವಿರಾಟ್ ಕೊಹ್ಲಿ ಕೆಲವು ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವಿರುವುದರಿಂದ ಅವರಿಗೆ ಪ್ರದರ್ಶನ ನೀಡಲು ಕಷ್ಟವಾಗುತ್ತಿದೆ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
“ನೀವು ನೆಟ್ಸ್ನಲ್ಲಿ ಎಷ್ಟು ಸಮಯ ಬ್ಯಾಟಿಂಗ್ ಮಾಡಿದರೂ ಹೆಚ್ಚು ಸಮಯ ಆಟದಿಂದ ಹೊರಗುಳಿದರೆ ಸಮಸ್ಯೆಯಾಗುತ್ತದೆ ಎಂದು ರವಿ ಶಾಸ್ತ್ರಿ ಹೇಳಿದರು. ಅವರು ಇಂದು ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆದರೆ ಅವರ ಆಟ ಉತ್ತಮವಾಗುತ್ತದೆ ಎಂದು ಹೇಳಿದರು.