ಧರ್ಮಶಾಲಾ: ಮೇ 9 ರಂದು ನಡೆದ ಐಪಿಎಲ್ 2024 ರ (IPL 2024) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challegers Bangalore) ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ಆಟದ ವಿಧಾನದ ಬಗ್ಗೆ ಮಾತನಾಡಿದ ಅವರು ಅಭ್ಯಾಸದ ಸಮಯ ಹಾಗೂ ವ್ಯಾಪಕ ಅನುಭವವು ಹೇಗೆ ತಮ್ಮ ನ್ನು ಶಕ್ತಗೊಳಿಸಿದೆ ಎಂಬುದನ್ನು ವಿವರಿಸಿದ್ದಾರೆ. ಇದೇ ವೇಳೆ ತಮ್ಮನ್ನು ಅನವಶ್ಯಕವಾಗಿ ಟೀಕೆ ಮಾಡುವ ಸುನಿಲ್ ಗವಾಸ್ಕರ್ ವಿರುದ್ಧ ಕೆಂಡ ಕಾರಿದ್ದಾರೆ.
I bet that no Virat Kohli fan will pass without liking this. #ViratKohli pic.twitter.com/HZ9KJQVmo5
— Mayur A. (@133_AT_Hobart) May 9, 2024
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಟಿ20 ಸ್ವರೂಪದಲ್ಲಿ ನಿರಂತರ ಸುಧಾರಣೆಯ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ ತಮ್ಮ ಕೌಶಲಗಳನ್ನು ಪರಿಷ್ಕರಿಸಲು ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸಲು ತೋರಿದ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2024 ರ ರೋಮಾಂಚಕ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ಕಿಂಗ್ಸ್ (PBKS) ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರ ಹಿಂದೆ ಕೊಹ್ಲಿಯ 92 ರನ್ಗಳ ಶ್ರಮವಿದೆ.
ಗುಣಮಟ್ಟ ನನಗೆ ಚೆನ್ನಾಗಿ ಕೆಲಸ ಮಾಡುತ್ತದೆ: ವಿರಾಟ್ ಕೊಹ್ಲಿ
ಕೊಹ್ಲಿಯ 92 ರನ್ಗಳ ರೋಚಕ ಇನ್ನಿಂಗ್ಸ್ ತಂತ್ರಗಾರಿಕೆ ಮತ್ತು ಲೆಕ್ಕಾಚಾರದ ಆಕ್ರಮಣಶೀಲತೆಯ ಫಲವಾಗಿದೆ. ಅಲ್ಲದೆ ಅವರು ತಮ್ಮ ಭಯಂಕರ ಇನಿಂಗ್ಸ್ ಮೂಲಕ ಸ್ಟ್ರೈಕ್ ರೇಟ್ ಅನ್ನು ಪ್ರಶ್ನಿಸಿದ ಟೀಕಾಕಾರರನ್ನು ಮೌನಗೊಳಿಸಿದ್ದಾರೆ. 195 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಕೊಹ್ಲಿ ಅವರ 47 ಎಸೆತಗಳು ಪರಿಣಾಮಕಾರಿ ಸ್ಟ್ರೋಕ್ಗಳಿಮದ ತುಂಬಿದ್ದ ರನ್ ಬಾರಿಸಿದ್ದಾರೆ. ಡ್ಯಾಶಿಂಗ್ ಬಲಗೈ ಬ್ಯಾಟರ್ ತಮ್ಮ ಅದ್ಭುತ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಸಿಡಿಸಿದ್ದರು.
ಪಂದ್ಯದ ನಂತರ ಮಾತನಾಡಿದ ಕೊಹ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಮ್ಮ ಆಟದ ಗುಣಮಟ್ಟ ಹೆಚ್ಚಿಸುವ ಬದ್ಧತೆ ಪುನರುಚ್ಚರಿಸಿದರು. ಆತಿಥೇಯ ಪಿಬಿಕೆಎಸ್ ವಿರುದ್ಧದ ಪಂದ್ಯ ವಿಜೇತ ಇನ್ನಿಂಗ್ಸ್ಗಾಗಿ ಮಾಜಿ ಆರ್ಸಿಬಿ ನಾಯಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಗುಣಮಟ್ಟವೇ ನನಗೆ ಮುಖ್ಯ
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, “ನನಗೆ ದಾಖಲೆಗಿಂತ ಗುಣಮಟ್ಟದ ಕ್ರಿಕೆಟ್ ಮುಖ್ಯ. ನನ್ನ ವೃತ್ತಿಜೀವನದ ಮಹತ್ವದ ಹಂತದಲ್ಲಿದ್ದೇನೆ. ನಾನು 35 ವರ್ಷದವನಾಗಿದ್ದೇನೆ. ಹೀಗಾಗಿ ದೊಡ್ಡ ರನ್ಗಿಂತ ಗುಣಮಟ್ಟವು ನನಗೆ ಬೆಂಬಲವಾಗಿರುತ್ತದೆ. ಅನೇಕ ವರ್ಷಗಳ ಆಟದ ಅರಿವು ಮಾನಸಿಕವಾಗಿ ಬಲಗೊಳಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: IPL 2024: ಕೆ.ಎಲ್ ರಾಹುಲ್ಗೆ ಬೈದ ಎಲ್ಎಸ್ಜಿ ಮಾಲೀಕ ಗೋಯೆಂಕಾ ವರ್ತನೆಗೆ ಮೊಹಮ್ಮದ್ ಶಮಿ ಆಕ್ರೋಶ
ಇದನ್ನು ನಾನು ಪ್ರತಿ ಪಂದ್ಯದಲ್ಲಿ ಪುನರಾವರ್ತಿಸಲು ಪ್ರಯತ್ನಿಸಿದ್ದೇನೆ..ನನ್ನ ಆಟವನ್ನು ಸುಧಾರಿಸುವ ವಿಷಯದಲ್ಲಿ ಕೆಲವು ಹೆಚ್ಚುವರಿ ಸವಾಲುಗಳಿವೆ ಇದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಪ್ರಕ್ರಿಯೆ. ನಾನು ಉತ್ತಮವಾಗಿ ಆಡುವವ. ಸುಮ್ಮನೆ ವಿವರಣೆ ನೀಡುವ ವ್ಯಕ್ತಿಯಲ್ಲ ಎಂದು ಗವಾಸ್ಕರ್ ಮತ್ತು ಹರ್ಷ ಭೋಗ್ಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಹೊಡೆಗಳ ಬಗ್ಗೆ ಮಾತನಾಡಿದ ಕೊಹ್ಲಿ
ಐಪಿಎಲ್ 2024 ರಲ್ಲಿ ಕೊಹ್ಲಿ ಆಗಾಗ್ಗೆ ಸ್ಲಾಗ್-ಸ್ವೀಪ್ಗಳನ್ನು ಬಳಸುತ್ತಿದ್ದಾರೆ. ಇದು ಅನೇಕರನ್ನು ಆಶ್ಚರ್ಯಗೊಳಿಸಿದೆ. ಭಾರತದ ಮಾಜಿ ನಾಯಕ ಎಂದಿಗೂ ಅಂಥ ಶಾಟ್ ಅನ್ನು ನಿರ್ದಿಷ್ಟವಾಗಿ ಅಭ್ಯಾಸ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಬದಲಾಗಿ, ಬ್ಯಾಟಿಂಗ್ ಮಾಂತ್ರಿಕ ಅವುಗಳನ್ನು ತಿಳಿವಳಿಕೆ ಮೇಲೆ ಮಾಡಿದ್ದಾರೆ.
ಇದು ಪ್ರತಿ ಶಾಟ್ ಅನ್ನು ನಿಖರವಾಗಿ ಅಭ್ಯಾಸ ಮಾಡುವ ಬಗ್ಗೆ ಅಲ್ಲ, ಆದರೆ ಪರಿಸ್ಥಿತಿಗೆ ಅಗತ್ಯವಿರುವಾಗ ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು. ನಾನು ಸ್ಪಿನ್ನರ್ಗಳ ವಿರುದ್ಧ ಸ್ಲಾಗ್-ಸ್ವೀಪ್ ಅನ್ನು ಬಳಸುತ್ತಿದ್ದೇನೆ. ಮಾನಸಿಕವಾಗಿ ಆ ಪರಿಸ್ಥಿತಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದರು.