Site icon Vistara News

IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

IPL 2024

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೊಂದು ನಿರಾಶಾದಾಯಕ ಸೋಲಿಗೆ ಒಳಗಾಗಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿಯಲ್ಲಿ ಆಘಾತಕಾರಿ ಫಲಿತಾಂಶ ಎದುರಿಸಿದೆ. ಪ್ರತಿ ಋತುವಿನಲ್ಲಿ, ಫ್ರಾಂಚೈಸಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಭರವಸೆಗಳನ್ನು ಮೂಡಿಸುತ್ತದೆ/ ನಂತರ ಕಳಪೆ ಪ್ರದರ್ಶನದಿಂದ ಅವರಿಗೆ ಬೇಸರ ಮೂಡಿಸುತ್ತದೆ. 2024 ರ ಅಭಿಯಾನವು ಅದಕ್ಕಿಂತ ಭಿನ್ನವಾಗಿಲ್ಲ. ಆರ್​ಸಿಬಿ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿ 10 ತಂಡಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಡಿತರು ಆರ್​​ಸಿಬಿಯ ಸೋಲಿಗೆ ಕಾರಣಗಳನ್ನು ಹುಡುಕುತ್ತಲೇ ಇದ್ದಾರೆ. ಅಂತೆಯೇ ಮಾಜಿ ಸ್ಫೋಟಕ ಬ್ಯಾಟರ್​​ ವಿರೇಂದ್ರ ಸೆಹ್ವಾಗ್ ಈ ತಮ್ಮದೇ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವರ ಪ್ರಕಾರ ಆರ್​ಸಿಬಿಯ ದೊಡ್ಡ ಸಮಸ್ಯೆಯೆಂದರೆ ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆ.

ನಿಮ್ಮ ಬಳಿ 12ರಿಂದ 15 ಭಾರತೀಯ ಆಟಗಾರರು ಇದ್ದಾರೆ. ಕೇವಲ 10 ವಿದೇಶಿ ಆಟಗಾರರನ್ನು ಹೊಂದಿದ್ದೀರಿ. ನಿಮ್ಮ ಇಡೀ ಸಹಾಯಕ ಸಿಬ್ಬಂದಿ ವರ್ಗ ವಿದೇಶಿಯರಾಗಿದ್ದರೆ. ಅದುವೇ ಸಮಸ್ಯೆಯಾಗಿದೆ. ಅವರಲ್ಲಿ ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ನೀವು ಅವರನ್ನು ಹೇಗೆ ಪ್ರೇರೇಪಿಸುವಿರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. . ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು,” ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

ಆಟಗಾರರಿಗೆ ಆರಾಮದಾಯಕ ಪರಿಸ್ಥಿತಿ ಸಿಗಬೇಕು. ನಾಯಕ ಫಾಫ್ ಡು ಪ್ಲೆಸಿಸ್ ಅವರ ಮುಂದೆ ನಿಲ್ಲುವುದೇ ಇಲ್ಲ. ಯಾಕೆಂದರೆ ಅವರಿಗೆ ಭಾಷೆ ಬರುವುದಿಲ್ಲ. ಅವರು ಏನನ್ನಾದರೂ ಕೇಳಿದರೆ, ಅವರು ಉತ್ತರಿಸಬೇಕಾಗುತ್ತದೆ. ನಾಯಕ ಭಾರತೀಯನಾಗಿದ್ದರೆ, ಆಟಗಾರನ ಮನಸ್ಸಿನಲ್ಲಿ ಏನಾಗುತ್ತಿದೆ ಹಂಚಿಕೊಳ್ಳಬಹುದು. ವಿದೇಶಿ ಆಟಗಾರರಿಗೆ ಇದೇ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡಬೇಕಾಗಿತ್ತು. ಹೀಗಾಗಿ ಆರ್​ಸಿಬಿಗೆ ಕನಿಷ್ಠ 2-3 ಭಾರತೀಯ ಸಹಾಯಕ ಸಿಬ್ಬಂದಿಯ ಅಗತ್ಯವಿದೆ ಎಂದು ಸೆಹ್ವಾಗ್ ವಿಶ್ಲೇಷಣೆ ಮಾಡಿದ್ದಾರೆ.

ಆಯ್ಕೆಯೇ ಸರಿಲ್ಲಿ

ಭಾರತ ಮತ್ತು ಕೋಲ್ಕತಾ ನೈಟ್ ರೈಡರ್ಸ್​ ತಂಡ ಮಾಜಿ ಬ್ಯಾಟರ್​ ಮನೋಜ್ ತಿವಾರಿ, ಆರ್​ಸಿಬಿಯ ಸಮಸ್ಯೆಗಳು ಭೀಕರವಾಗಿದೆ ಎಂದಿದ್ದಾರೆ. ಹರಾಜು ಟೇಬಲ್​ನಲ್ಲಿಯೇ ಕಳಪೆ ನೇಮಕ ನಡೆಯುತ್ತಿದೆ. ಅದುವೇ ಅವರ ತೊಂದರೆಗಳ ಹಿಂದಿನ ದೊಡ್ಡ ಕಾರಣ ಎಂದ ಹೇಳಿದ್ದಾರೆ.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ; ಏನಿದು ಕೇಸ್​?

“ಸಮಸ್ಯೆ ಎಲ್ಲಿದೆ ಎಂದು ನನಗೆ ತಿಳಿದಿದೆ. ಹರಾಜು ಟೇಬಲ್ ನಿಂದ ನಿರ್ವಹಣೆಯವರೆಗೆ ಎಲ್ಲ ಕಡೆಯೂ ಇದೆ. ಈ ಫ್ರಾಂಚೈಸಿಯ ಎಲ್ಲಾ ಉತ್ತಮ ಆಟಗಾರರು ಇತರ ತಂಡಗಳಿಗಾಗಿ ಹೋಗಿ ಅತ್ಯುತ್ತಮವಾಗಿ ಆಡುತ್ತಾರೆ. ಆ ತಂಡದಲ್ಲಿ ಪ್ರಮುಖ ವಿಕೆಟ್ ಟೇಕಿಂಗ್​ ಬೌಲರ್ (ಯಜುವೇಂದ್ರ ಚಾಹಲ್) ಅವರನ್ನು ಕೈಬಿಡಲಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಮುಂದುವರಿಸುವುದಿಲ್ಲ. ಅವರು ಅವರನ್ನು 2016ರರ ಫೈನಲ್ ಗೆ ಮುನ್ನಡೆಸಿದವರು. 40 ಕೋಟಿ ರೂ.ಗಿಂತ ಹೆಚ್ಚಿನ ಒಟ್ಟು ಹಣ ಪಡೆದಿರುವ ಫ್ರಾಂಚೈಸಿಯ 4 ದುಬಾರಿ ಆಟಗಾರರು ಬೆಂಚ್ ಕಾಯುತ್ತಿದ್ದಾಋಎ. ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್. ಸಿರಾಜ್​​ಗೆ ವಿಶ್ರಾಂತಿ ನೀಡಲಾಗಿದೆ. ತುಂಬಾ ಹಣವನ್ನು ಖರ್ಚು ಮಾಡಿ ಅವರನ್ನು ಹೊರಗೆ ಕೂರಿಸಲಾಗುತ್ತದೆ. ಇವೆಲ್ಲವೂ ಸಮಸ್ಯೆಯೇ ಎಂದು “ಎಂದು ತಿವಾರಿ ಹೇಳಿದ್ದಾರೆ.

ಬ್ಯಾಟಿಂಗ್ ಅಲ್ಲಿ ಸಮಸ್ಯೆಯಲ್ಲ. ಆ ತಂಡದ ಸಮಸ್ಯೆ ಯಾವಾಗಲೂ ಬೌಲಿಂಗ್ ಆಗಿತ್ತು. ಅವರಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲ. ನೀವು ವಿಲ್ ಜಾಕ್ಸ್ ಅವರಿಗೆ ಮೊದಲ ಓವರ್​ ಕೊಡಲಾಗುತ್ತದೆ. ಕೆಲವೊಮ್ಮೆ ಮಹಿಪಾಲ್ ಲೊಮ್ರೊಗೂ ಬೌಲಿಂಗ್​. ಮೈದಾನದಲ್ಲಿನ ಕೆಲವು ನಾಯಕತ್ವದ ನಿರ್ಧಾರಗಳು ಭಯಾನಕವಾಗಿವೆ. ಪ್ರತಿಯೊಂದು ಮೂಲೆಯಿಂದಲೂ ತಪ್ಪಾಗಿದೆ. ಅವರು ಸಂಪೂರ್ಣವಾಗಿ ಮರುಸಂಘಟನೆಗೊಳ್ಳಬೇಕು ಮತ್ತು ದೀರ್ಘಕಾಲೀನ ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.

ಬೆಂಗಳೂರು ತಂಡಕ್ಕೆ ಇದು ಇನ್ನೂ ಮುಗಿದ ಅಧ್ಯಾಯವಲ್ಲ. ಫಾಫ್ ಡು ಪ್ಲೆಸಿಸ್ ಪಡೆ ಪ್ಲೇಆಫ್ಗೆ ಪ್ರವೇಶಿಸಲು ದೈತ್ಯ ಪ್ರಯತ್ನದ ಅಗತ್ಯವಿದೆ.

Exit mobile version