ಬೆಂಗಳೂರು: ಐಪಿಎಲ್ 2024 (IPL 2024) ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಕೋಲ್ಕೊತಾ ನೈಟ್ ರೈಡರ್ಸ್ (KKR) ತಂಡಗಳು ಪರಸ್ಪರ ಸೆಣಸಲಿವೆ. ಎರಡೂ ತಂಡಗಳು ಈ ಹಿಂದಿನ ತಮ್ಮ ತಮ್ಮ ಪಂದ್ಯಗಳಲ್ಲಿ ಉತ್ತಮ ಗೆಲುವು ದಾಖಲಿಸಿದೆ. ಡಿಸಿ (DC) ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Supre kIngs) ವಿರುದ್ದ ಗೆದ್ದರೆ, ಕೆಕೆಆರ್ ತಂಡ ಆರ್ಸಿಬಿಯನ್ನೇ ಅವರ ತವರು ಮೈದಾನದಲ್ಲಿ ಮಣಿಸಿತ್ತು. ಹೀಗಾಗಿ ಎರಡೂ ತಂಡಗಳ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಕೆಆರ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದ ಕಾರಣ ಪಾಯಿಂಟ್ಸ್ ಟೇಬಲ್ನಲ್ಲಿ ಡಿಸಿಗಿಂತ ಉತ್ತಮ ಸ್ಥಾನದಲ್ಲಿದೆ. ಆರ್ಸಿಬಿ ಮತ್ತು ಎಸ್ಆರ್ ಎಚ್ ವಿರುದ್ಧ ಗೆಲುವು ಸಾಧಿಸಿದೆ.
ಅಂಕಪಟ್ಟಿಯಲ್ಲಿ ಕೆಕೆಆರ್ ಎರಡನೇ ಸ್ಥಾನದಲ್ಲಿದ್ದರೆ , ಡಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೆಕೆಆರ್ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ 2 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ಕೆಕೆಆರ್ 4 ಅಂಕಗಳನ್ನು ಹೊಂದಿದ್ದು, +1.047 ನೆಟ್ ರನ್ ರೇಟ್ ಹೊಂದಿದೆ. ಡಿಸಿ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಅವರು ಒಟ್ಟು ಎರಡು ಅಂಕಗಳನ್ನು ಹೊಂದಿದ್ದಾರೆ ಹಾಗೂ -0.016 ನೆಟ್ ರನ್ ರೇಟ್ ಹೊಂದಿದ್ದಾರೆ.
ಈ ಪಂದ್ಯವು ಏಪ್ರಿಲ್ 3, 2024 ರಂದು ಸಂಜೆ 7:30 ಕ್ಕೆ (ಭಾರತೀಯ ಕಾಲಮಾನ) ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ವಿಶ್ವದ ಅತ್ಯುತ್ತಮ ಆಟಗಾರರನ್ನು ಹೊಂದಿವೆ. ಕೆಕೆಆರ್ ತಂಡದಲ್ಲಿ ಫಿಲ್ ಸಾಲ್ಟ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಅವರೆಲ್ಲರಿಗೂ ಉತ್ತರ ನೀಡಬಲ್ಲ ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್ನಲ್ಲಿದ್ದಾರೆ.
ಇದನ್ನೂ ಓದಿ: IPL 2024: ಐಪಿಎಲ್ ಮಧ್ಯೆ ಫ್ರಾಂಚೈಸಿಗಳ ದಿಢೀರ್ ಸಭೆ ಕರೆದ ಬಿಸಿಸಿಐ; ಕಾರಣವೇನು?
ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ಪಿಚ್ ವರದಿ
ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದ ಮೇಲ್ಮೈ ಸ್ಪಿನ್ನರ್ಗಳಿಗೆ ಸಾಕಷ್ಟು ನೆರವು ನೀಡುತ್ತದೆ . ಈ ಪಿಚ್ನಲ್ಲಿ ಚೆಂಡು ಸಾಕಷ್ಟು ತಿರುಗುತ್ತದೆ ಎಂದು ತಿಳಿದುಬಂದಿದೆ, ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅಗತ್ಯವಿರುವ ಸಹಾಯವೂ ಸಿಗುತ್ತದೆ. ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡುವುದು ಮತ್ತು ದೊಡ್ಡ ಮೊತ್ತವನ್ನು ದಾಖಲಿಸುವುದು ಉತ್ತಮ ನಿರ್ಧಾರವಾಗುತ್ತದೆ.
ಇದನ್ನೂ ಓದಿ: IPL 2024 : 250 ಪಂದ್ಯಗಳನ್ನಾಡಿದ ಮುಂಬಯಿ ಇಂಡಿಯನ್ಸ್, ಉಳಿದ ತಂಡಗಳದ್ದೆಷ್ಟು?
ಪಂದ್ಯದ ವಿವರ
- ಪಂದ್ಯ ಸಂಖ್ಯೆ 16: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ
- ಸ್ಥಳ: ಡಾ.ವೈ.ಎಸ್.ರಾಜಶೇಖರ ರೆಡ್ಡಿ, ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣ, ವಿಶಾಖಪಟ್ಟಣಂ
- ದಿನಾಂಕ ಮತ್ತು ಸಮಯ, ಬುಧವಾರ, ಏಪ್ರಿಲ್ 3, ಸಂಜೆ 7:30 (ಭಾರತೀಯ ಕಾಲಮಾನ)
- ಲೈವ್ ಬ್ರಾಡ್ಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್
ಇತ್ತಂಡಗಳ ಮುಖಾಮುಖಿ
- ಆಡಿದ ಪಂದ್ಯಗಳು: 32
- ಡೆಲ್ಲಿ ಕ್ಯಾಪಿಟಲ್ಸ್ 15 ಗೆಲುವು
- ಕೋಲ್ಕತಾ ನೈಟ್ ರೈಡರ್ಸ್ ಗೆ 16 ಗೆಲುವು
- ಫಲಿತಾಂಶ ಇಲ್ಲ 01
- ಮೊದಲ ಬಾರಿಗೆ ಆಡಿದ್ದು ಮೇ 13, 2008
- ಕೊನೆಯ ಬಾರಿ ಆಡಿದ್ದು ಏಪ್ರಿಲ್ 20, 2023
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್ ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಅನ್ರಿಕ್ ನಾರ್ಟ್ಜೆ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್.
ಕೋಲ್ಕತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಆಂಗ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ರಮಣ್ದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.